ತಾಯಿಯಾಗುವ ಖುಷಿಯಲ್ಲಿ ನಟಿ ಚೈತ್ರ ರೈ
Team Udayavani, Jul 7, 2021, 6:43 PM IST
ಕನ್ನಡ, ತೆಲುಗು ಕಿರು ತೆರೆಗಳಲ್ಲಿ ಹೆಸರು ಮಾಡಿರುವ ನಟಿ ಚೈತ್ರ ರೈ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಶಾಕ ಪಾತ್ರದ ಮೂಲಕ ಜನರಿಗೆ ಪರಿಚಯವಾದ ಚೈತ್ರ ರಾವ್ ನಂತರ ಕುಸುಮಾಂಜಲಿ, ನಾಗಮಣಿ, ಪೌರ್ಣಮಿ ಧಾರಾವಾಹಿಗಳಲ್ಲಿ ನಟಿಸಿದರು.
ಇನ್ನು ತೆಲಗಿನಲ್ಲಿಯೂ ಗುರುತಿಸಿಕೊಂಡಿರುವ ಇವರು, ಅಟ್ಟರಿಂಟುಲೊ ಅಕ್ಕಾಚೆಲ್ಲೆಲೋ ಮೂಲಕ ಸಂಖತ್ ಹೆಸರು ಮಾಡಿದರು. ಇದೀಗ ಚೈತ್ರ ತಾವು ಗರ್ಭಿಣಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿರುವ ನಟಿ ಚೈತ್ರ ರೈ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಬರೆದಿರುವ ನಟಿ, ಕೆಲಸ ಮಾಡಲು ಸಾಕಷ್ಟು ಸಮಯ ಇದೆ. ಕುಟುಂಬ ಮುಖ್ಯ ವಿಷಯವಲ್ಲ, ಅದೇ ಎಲ್ಲ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?