ಅಮೆರಿಕಾದ ಲಸಿಕೆಗಾಗಿ ಕಾಯುತ್ತಿದ್ದಾರಂತೆ ನಟಿ ರಮ್ಯಾ
Team Udayavani, Jul 10, 2021, 3:10 PM IST
ಬೆಂಗಳೂರು : ಸ್ಯಾಂಡಲ್ವುಡ್ ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಇನ್ನೂ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ವಂತೆ. ಜೊತೆಗೆ ಅವರು ಅಮೆರಿಕಾದ ಲಸಿಕೆಗಾಗಿ ಕಾಯುತ್ತಿದ್ದಾರಂತೆ.
ಸೋನು ವೇಣುಗೋಪಾಲ್ ಜೊತೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಈ ಕುರಿತು ರಮ್ಯಾ ಮಾತನಾಡಿದ್ದು, ‘ನಾನಿನ್ನು ಲಸಿಕೆ ಹಾಕಿಸಿಕೊಂಡಿಲ್ಲ. ನಾನು ಅಮೆರಿಕಾದ ಮೊಡೆರ್ನಾ ಲಸಿಕೆಗಾಗಿ ಕಾಯುತ್ತಿದ್ದೇನೆ, ಅದಕ್ಕೆ ಅನುಮತಿ ಸಹ ಸಿಕ್ಕಿದೆ. ಅದು ಬಂದ ಕೂಡಲೆ ಲಸಿಕೆ ಪಡೆಯುತ್ತೇನೆ” ಎಂದಿದ್ದಾರೆ.
ನನಗೆ ಯಾವುದು ಸರಿ, ಯಾವುದು ತೆಗೆದುಕೊಳ್ಳಬೇಕು ಎಂಬ ಗೊಂದಲ ಇದೆ. ಈಗ ಫೈಜರ್ ಮೂರು ಡೋಸ್ ಪಡೆಯಬೇಕು ಅಂತಿದ್ದಾರೆ. ನಾನು ಖಂಡಿತವಾಗಿಯೂ ಲಸಿಕೆ ಪಡೆಯುತ್ತೇನೆ. ಆದರೆ ಸರಿಯಾದ ವ್ಯಾಕ್ಸಿನ್ ಪಡೆಬೇಕು. ನನಗೆ ಮೊಡೆರ್ನಾ ಪಡೆಯುವ ಬಗ್ಗೆ ಆಸಕ್ತಿ ಇದೆ” ಎಂದು ರಮ್ಯಾ ತಿಳಿಸಿದ್ದಾರೆ.
ಇನ್ನು ಅಮೆರಿಕಾ ಮೂಲದ ಕಂಪನಿ ತಯಾರಿಸುವ ಮೊಡೆರ್ನಾ ತುರ್ತು ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ಸಿಕ್ಕಿದೆ. ಸದ್ಯಕ್ಕೆ ಭಾರತದಲ್ಲಿ ಮೊಡೆರ್ನಾ ವಿತರಣೆ ಮಾಡಲಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್