ಜುಲೈನಲ್ಲಿ ಆದಿ ಲಕ್ಷ್ಮೀಪುರಾಣ

ಬ್ರೇಕ್‌ ಕೆ ಬಾದ್‌ ರಾಧಿಕಾ ಪಂಡಿತ್‌ ಸಿನಿಮಾ

Team Udayavani, Jun 13, 2019, 3:01 AM IST

ರಾಧಿಕಾ ಪಂಡಿತ್‌ ಮದುವೆ ಬಳಿಕ “ಆದಿ ಲಕ್ಷ್ಮೀ ಪುರಾಣ’ ಎಂಬ ಸಿನಿಮಾ ಒಪ್ಪಿಕೊಂಡಿದ್ದು ನಿಮಗೆ ಗೊತ್ತೇ ಇದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶಿಸಿದ್ದಾರೆ. ಮಣಿರತ್ನಂ ಅವರ ಜೊತೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಪ್ರಿಯಾ ನಿರ್ದೇಶನದ ಮೊದಲ ಕನ್ನಡ ಸಿನಿಮಾವಿದು.

ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಜೂನ್‌ 21 ರಂದು ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ. ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿದ್ದಾರೆ. ಮದುವೆ ಬಳಿಕ ರಾಧಿಕಾ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಂಡರೂ ನಾಯಕಿಯಾಗಿ ನಟಿಸುತ್ತಾರಾ ಎಂಬೆಲ್ಲಾ ಪ್ರಶ್ನೆಗಳು ಎದ್ದಿದ್ದವು.

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿದ್ದು, “ಆದಿ ಲಕ್ಷ್ಮೀಪುರಾಣ’ ಚಿತ್ರ. ಹಾಗಾಗಿ, ಇದನ್ನು ರಾಧಿಕಾ ಕಂಬ್ಯಾಕ್‌ ಸಿನಿಮಾ ಎಂದು ಕರೆಯಬಹುದು. ಕಥೆ ಕೇಳಿ ಇಷ್ಟಪಟ್ಟ ರಾಧಿಕಾ ಈ ಸಿನಿಮಾವನ್ನು ಒಪ್ಪಿಕೊಂಡರು. ಸದ್ದುಗದ್ದಲವಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಮೂಲಕ ರಾಧಿಕಾ ಪಂಡಿತ್‌ ಕಂಬ್ಯಾಕ್‌ ಆಗುತ್ತಿದ್ದಾರೆ.

ಈ ಸಿನಿಮಾ ಮೇಲೆ ರಾಧಿಕಾ ಪಂಡಿತ್‌ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ. ಚಿತ್ರದ ಪಾತ್ರ ಭಿನ್ನವಾಗಿರುವುದರಿಂದ ತಾನು ಈ ಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದ ರಾಧಿಕಾ ಈಗ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿರ್ದೇಶಕಿ ಪ್ರಿಯಾ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಹೊಸ ರೀತಿಯ ರಾಧಿಕಾ ಪಂಡಿತ್‌ ಅವರನ್ನು ನೋಡಬಹುದು. ಅದೇ ರೀತಿ ನಿರೂಪ್‌ ಭಂಡಾರಿಯವರ ಪಾತ್ರ ಕೂಡಾ ಭಿನ್ನವಾಗಿದೆ ಎಂಬುದು ನಿರ್ದೇಶಕಿ ಪ್ರಿಯಾ ಅವರ ಮಾತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ