ದತ್ತಣ್ಣ ಬಗ್ಗೆ ಅಕ್ಷಯ್‌ಕುಮಾರ್‌ ಮೆಚ್ಚುಗೆ

ಕನ್ನಡ ಕಲಾವಿದರನ್ನು ಅಭಿನಂದಿಸಿದ ಬಾಲಿವುಡ್‌ ಸ್ಟಾರ್ಸ್

Team Udayavani, Jul 21, 2019, 3:00 AM IST

ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಕನ್ನಡದ ಹಿರಿಯ ನಟ ದತ್ತಣ್ಣ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್‌ನ‌ ಅನೇಕ ನಟಿಮಣಿಯರು ಸಹ ದತ್ತಣ್ಣ ಅವರ ಸಾಧನೆ ಕೇಳಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ.

ಹೌದು, ದತ್ತಣ್ಣ ಹಿಂದಿಯ “ಮಿಷನ್‌ ಮಂಗಲ್‌’ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ದತ್ತಣ್ಣ ಅವರ ಕುರಿತು ಸ್ವತಃ ಅಕ್ಷಯ್‌ಕುಮಾರ್‌ ಅವರು ದತ್ತಣ್ಣ ಅವರ ಸಿನಿಮಾ ಸಾಧನೆ ಬಗ್ಗೆ ಹೇಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಮಿಷನ್‌ ಮಂಗಲ್‌’ ಚಿತ್ರದ ಟ್ರೇಲರ್‌ ಬಿಡುಗಡೆ ನಂತರ ವೇದಿಕೆಗೆ ಆಗಮಿಸಿದ ಅಕ್ಷಯ್‌ಕುಮಾರ್‌ ಅವರು, ದತ್ತಣ್ಣ ಪಕ್ಕದಲ್ಲೇ ಕುಳಿತು, ದತ್ತಣ್ಣ ಅವರು ತಮ್ಮ 45ನೇ ವಯಸ್ಸಿನಲ್ಲಿ ನಟನಾಗಬೇಕೆಂದು ಚಿತ್ರರಂಗ ಪ್ರವೇಶಿಸಿದ ಬಗ್ಗೆ ತಿಳಿದುಕೊಂಡು, ಅವರೇ, ಸ್ವತಃ ಮೈಕ್‌ ಹಿಡಿದು, ಎಲ್ಲರಿಗೂ ಪರಿಚಯಿಸಿದ ಬಳಿಕ “ನೀವು ಎಷ್ಟು ಅವಾರ್ಡ್‌ ಪಡೆದಿದ್ದೀರಿ ‘ಅಂತ ಕೇಳಿ, ನೀವೇ ನಿಮ್ಮ ಸಾಧನೆ ಬಗ್ಗೆ ಹೇಳಿ’ ಅಂದಾಗ, ದತ್ತಣ್ಣ, ತಮ್ಮ ಸಾಧನೆ ಬಗ್ಗೆ ಹೇಳಿದ್ದಿಷ್ಟು.

“ನಾನು ಈವರೆಗೆ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಈ ಮೂರು ರಾಷ್ಟ್ರಪ್ರಶಸ್ತಿಗಳು ಕನ್ನಡ ಚಿತ್ರಗಳಿಗೇ ಬಂದಿರುವುದು ವಿಶೇಷ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ದತ್ತಣ್ಣ ತಮ್ಮ ಸಾಧನೆ ಕುರಿತು ಹೇಳುತ್ತಿದ್ದಂತೆಯೇ, ಪಕ್ಕದಲ್ಲೇ ಕುಳಿತಿದ್ದ ನಟಿಯರಾದ ವಿದ್ಯಾಬಾಲನ್‌, ಸೋನಾಕ್ಷಿ ಸಿನ್ಹಾ, ತಾಪ್ಸಪನ್ನು ಅವರು ಜೋರಾದ ಚಪ್ಪಾಳೆ ತಟ್ಟುವ ಮೂಲಕ ದತ್ತಣ್ಣ ಅವರನ್ನು ಅಭಿನಂದಿಸಿದ್ದಾರೆ.

ಅಂದಹಾಗೆ, ದತ್ತಣ್ಣ ನಟರಾಗುವ ಮುನ್ನ ಏರ್‌ಫೋರ್ಸ್‌ನಲ್ಲಿ 23 ವರ್ಷ ಕೆಲಸ ಮಾಡಿದ್ದಾರೆ. ಅಲ್ಲದೆ 9 ವರ್ಷಗಳ ಕಾಲ ಹೆಚ್‌ಎಎಲ್‌ನಲ್ಲೂ ಕೆಲಸ ಮಾಡಿದ್ದಾರೆ. ಇವೆಲ್ಲದರ ಬಗ್ಗೆ ದತ್ತಣ್ಣ ವಿವರಿಸುತ್ತಿರುವ ಮಧ್ಯೆಯೇ, ನಟಿ ಸೋನಾಕ್ಷಿ ಸಿನ್ಹಾ, “ಇವುಗಳನ್ನೆಲ್ಲಾ ನೀವು ಹೇಳಲಿಲ್ಲವಲ್ಲ ದತ್ತಣ್ಣ ‘ಎಂದು ಕೇಳುತ್ತಾರೆ.

ಅದೇನೆ ಇರಲಿ, ದತ್ತಣ್ಣ ಈಗ ಹಿಂದಿಯ ಬಹು ನಿರೀಕ್ಷೆ ಇರುವ “ಮಿಷನ್‌ ಮಂಗಲ್‌’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುವ ದತ್ತಣ್ಣ, “ನಾನು ದೂರದಿಂದಲೇ ಬಾಲಿವುಡ್‌ ಸ್ಟಾರ್ಸ್‌ಗಳನ್ನು ನೋಡುತ್ತಿದ್ದೆ. ಆದರೆ, ಈ ಚಿತ್ರದ ಮೂಲಕ ಇವರೆಲ್ಲರೂ ನನ್ನ ಸ್ನೇಹಿತರಾಗಿದ್ದಾರೆ. ಶೂಟಿಂಗ್‌ ಸಂದರ್ಭದಲ್ಲಿ ಎಲ್ಲರೂ ನನ್ನಲ್ಲಿ ಆತ್ಮವಿಶ್ವಾಸ ತುಂಬಿ, ಚೆನ್ನಾಗಿ ನೋಡಿಕೊಂಡಿದ್ದಾರೆ ‘ ಎಂದು ಚಿತ್ರತಂಡದ ಗುಣಗಾನ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ