ಮಿಲನಾ ಬ್ಯಾಚುಲರ್ ಪಾರ್ಟಿ : ಫೆಬ್ರವರಿ 14 ಮದುವೆ
Team Udayavani, Dec 22, 2020, 12:45 PM IST
“ಲವ್ ಮಾಕ್ಟೇಲ್’ ಚಿತ್ರದ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಹೊಸ ವರ್ಷದಲ್ಲಿ ಹಸೆಮಣೆ ಏರಲು ತಯಾರಾಗುತ್ತಿದೆ.2021ರ ಫೆಬ್ರವರಿ 14 ರಂದು ಡಾರ್ಲಿಂಗ್ಕೃಷ್ಣ ಮತ್ತು ಮಿಲನ ನಾಗರಾಜ್ ಮದುವೆ ನಿಶ್ಚಯವಾಗಿದ್ದು, ಇತ್ತೀಚೆಗೆ ನಟಿ ಮಿಲನಾ ತಮ್ಮ ಸ್ನೇಹಿತರಿಗಾಗಿ ಅದ್ಧೂರಿಯಾಗಿ ಬ್ಯಾಚುಲರ್ ಪಾರ್ಟಿಯನ್ನು ಆಯೋಜಿಸಿದ್ದರು.
ಇನ್ನು ನಟ ಡಾರ್ಲಿಂಗ್ಕೃಷ್ಣಸಹ ಈ ಬ್ಯಾಚುಲರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಮಿಲನಾ ಗೆ ಸಾಥ್ ನೀಡಿದ್ದಾರೆ. ಸದ್ಯ ಈ ಬ್ಯಾಚುಲರ್ ಪಾರ್ಟಿಯ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಿಲನಾ ನಾಗರಾಜ್ ತಮ್ಮ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ನಟ ಕೃಷ್ಣಕೂಡ ಮಿಲನಾ ಅವರೊಂದಿಗೆ ಪಾರ್ಟಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದ್ದು, ಹಸೆಮಣೆ ಏರಲು ರೆಡಿಯಾಗಿರುವ ಕೃಷ್ಣ – ಮಿಲನಾ ಜೋಡಿಗೆ ಸಿನಿಪ್ರಿಯರ್ ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ಶರಣ್ ಹೊಸ ಚಿತ್ರ ಗುರು ಶಿಷ್ಯರು
ಇವೆಲ್ಲದರ ನಡುವೆ ಒಂದು ಕಡೆ ಮದುವೆ ತಯಾರಿ ನಡೆಸುತ್ತಿರುವ ಕೃಷ್ಣ – ಮಿಲನಾ ಜೋಡಿ ಮತ್ತೂಂದೆಡೆ “ಲವ್ ಮಾಕ್ಟೇಲ್-2′ ಚಿತ್ರದ ಕೆಲಸದಲ್ಲೂ ಬಿಝಿಯಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.