ಬಲಿಷ್ಠ ಆಗ್ತಾರಾ ಮುರುಳಿ?

Team Udayavani, Dec 11, 2019, 7:03 AM IST

ನಟ ಶ್ರೀಮುರುಳಿ ಅಭಿನಯದ “ಮದಗಜ’ ಚಿತ್ರ ಆರಂಭದಿಂದಲೂ ನಾನಾ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದೆ. ಮುಖ್ಯವಾಗಿ ಚಿತ್ರದ ನಾಯಕಿಯರ ಕುರಿತಾಗಿ ಸುದ್ದಿಯಾಗಿದ್ದೇ ಹೆಚ್ಚು. ಪರಭಾಷೆಯ ನಾಯಕಿಯ ಹೆಸರುಗಳು ಜೋರಾಗಿ ಕೇಳಿಬಂದುವು. ಆದರೆ, ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ನಡೆದಿಲ್ಲ. ಈ ನಡುವೆಯೇ ಚಿತ್ರ ಟೈಟಲ್‌ ವಿಚಾರದಿಂದ ಸುದ್ದಿಯಲ್ಲಿದೆ.

“ಮದಗಜ’ ಚಿತ್ರದ ಟೈಟಲ್‌ ಬದಲಾಗುತ್ತಿದ್ದು, ಚಿತ್ರತಂಡ ಬೇರೆ ಟೈಟಲ್‌ ಇಡಲು ಯೋಚಿಸುತ್ತಿದೆಯಂತೆ. ಜೊತೆಗೆ ಕಥೆ, ಚಿತ್ರಕಥೆಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಮಾತು. ಹಾಗಾದರೆ, “ಮದಗಜ’ ಬದಲು ಬೇರೆ ಯಾವ ಟೈಟಲ್‌ ಮೂಲಕ ಮುರಳಿ ಅಭಿಮಾನಿಗಳ ಮುಂದೆ ಬರುತ್ತಾರೆಂಬ ಕುತೂಹಲ ಅನೇಕರಲ್ಲಿದೆ.

ಆದರೆ, ಗಾಂಧಿನಗರದ ಮೂಲಗಳ ಪ್ರಕಾರ, ಚಿತ್ರಕ್ಕೆ “ಬಲಿಷ್ಠ’ ಎಂಬ ಟೈಟಲ್‌ ಇಡಲಾಗಿದೆಯಂತೆ. ಚಿತ್ರದ ಕಥೆಗೆ ಹೊಂದಿಕೆ ಯಾಗುವ ಜೊತೆಗೆ ಟೈಟಲ್‌ ಕೂಡಾ ಕ್ಯಾಚಿ ಹಾಗೂ ಮಾಸ್‌ ಆಗಿರುವುದರಿಂದ ಈ ಟೈಟಲ್‌ ಬಗ್ಗೆ ಚಿತ್ರತಂಡ ಆಸಕ್ತಿ ತೋರಿದೆಯಂತೆ. ಹಾಗಂತ ಇದೇ ಅಂತಿಮ ಅಥವಾ ಪಕ್ಕಾ ಎನ್ನುವಂತಿಲ್ಲ.

ಏಕೆಂದರೆ ಸಿನಿಮಾ ಆರಂಭಕ್ಕೂ ಮುನ್ನ, ಗಾಂಧಿನಗರದಲ್ಲಿ ಈ ತರಹದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಎಲ್ಲವೂ ಅಂತಿಮವಾಗಿ ಗೊತ್ತಾಗೋದು ಚಿತ್ರತಂಡ ಅಧಿಕೃತವಾಗಿ ಟೈಟಲ್‌ ಹಾಗೂ ಪೋಸ್ಟರ್‌ ಅನೌನ್ಸ್‌ ಮಾಡಿದಾಗ ಮಾತ್ರ. ಅದೇನೇ ಆದರೂ “ಬಲಿಷ್ಠ’ ಟೈಟಲ್‌ನಲ್ಲೊಂದು ಫೋರ್ಸ್‌ ಇರುವುದು ಸುಳ್ಳಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ