ಜ.5ರಂದು ಸೆಲೆಬ್ರಿಟಿ ಬಾಕ್ಸ್‌ ಕ್ರಿಕೆಟ್‌ ಲೀಗ್‌

ನಟರು, ಶಾಸಕರು ಹಾಗು ಪತ್ರಕರ್ತರ 12 ತಂಡ ಸೆಣಸಾಟ

Team Udayavani, Dec 16, 2019, 7:00 AM IST

ಈ ಹಿಂದೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌ ನೇತೃತ್ವದಲ್ಲಿ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸಿ ಕ್ರಿಕೆಟ್‌ ಪಂದ್ಯ ಶುರುಮಾಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ಸುಮಾರು 180 ಜನರಿದ್ದ ಸೆಲೆಬ್ರಿಟಿ ತಂಡ ಕಟ್ಟಿಕೊಂಡು ನಡೆಸಿದ್ದ “ರಾಜ್‌ಕಪ್‌’ ಫೈನಲ್‌ ಪಂದ್ಯವನ್ನು ಶ್ರೀಲಂಕಾದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಈಗ “ಸೆಲಿಬ್ರಿಟಿ ಬಾಕ್ಸ್‌ ಕ್ರಿಕೆಟ್‌ ಲೀಗ್‌’ ಮೂಲಕ ಹೊಸ ಆಟ ಶುರು ಮಾಡಲಾಗುತ್ತಿದೆ.

ಈ ಸೆಲೆಬ್ರಿಟಿ ಬಾಕ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಅದರಲ್ಲಿ ಶಾಸಕರ ತಂಡ, ಪತ್ರಕರ್ತರ ತಂಡ, ನಟರುಗಳ ತಂಡ ಪಾಲ್ಗೊಳ್ಳಲಿದೆ. “ಲೂಸ್‌ ಮಾದ’ ಯೋಗಿ, “ಶ್ರೀನಗರ’ ಕಿಟ್ಟಿ ಧರ್ಮ ಕೀರ್ತಿರಾಜ್‌, ಸಂಚಾರಿ ವಿಜಯ್‌, ಧರ್ಮ, ರವಿಚೇತನ್‌, ರಾಜುಗೌಡ್ರು, ಸದಾಶಿವ ಶೆಣೈ, ರಾಹುಲ್‌, “ಶಿಷ್ಯ’ ದೀಪಕ್‌ ಇವರುಗಳ ತಂಡಗಳು ಲೀಗ್‌ನಲ್ಲಿ ಸೆಣಸಾಟ ನಡೆಸಲಿವೆ.

ಜನವರಿ 5 ರಂದು ನಡೆಯಲಿರುವ ಈ ಲೀಗ್‌, ಚಾಮರಾಜಪೇಟೆಯಲ್ಲಿರುವ ಒಳಾಂಗಣ ಕ್ರೀಡಾಂಗಣ ಒಂದರಲ್ಲಿ ನಡೆಯಲಿದೆ. ಹೊರ ರಾಜ್ಯದಿಂದಲೂ ಒಂದು ಟೀಮ್‌ ಆಹ್ವಾನಿಸುವ ಯೋಚನೆ ರಾಜೇಶ್‌ ಬ್ರಹ್ಮಾವರ್‌ ಅವರಿಗಿದೆ. ಇದು 5 ಓವರ್‌ಗಳ ಸೀಮಿತ ಪಂದ್ಯವಾಗಿದ್ದು, ಐವರು ಹುಡುಗರು ಹಾಗು ಇಬ್ಬರು ಹುಡುಗಿಯರು ಆಟ ಆಡಲಿದ್ದಾರೆ. ಬೆಳಗ್ಗೆ 8 ಕ್ಕೆ ಶುರುವಾಗುವ ಲೀಗ್‌ ರಾತ್ರಿ 10 ರವರೆಗೆ ನಡೆಯಲಿದೆ. ಲೀಗ್‌ನಲ್ಲಿ ಜಯಗಳಿಸಿದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು.

ಇದು ಮೊದಲ ಸೆಲಿಬ್ರಿಟಿ ಬಾಕ್ಸ್‌ ಕ್ರಿಕೆಟ್‌ ಲೀಗ್‌ ಆಗಿದ್ದು, ಎರಡನೇ ವರ್ಷದ ಲೀಗ್‌ ವಿದೇಶದಲ್ಲಿ ನಡೆಸುವ ಯೋಚನೆ ಅವರದು. ಈ ಲೀಗ್‌ ವೀಕ್ಷಣೆಗೆ ವಿಐಪಿ ಪಾಸ್‌ ಇರಲಿದ್ದು, ಚಿತ್ರರಂಗದ ಚಿತ್ರರಂಗದ ಎಲ್ಲಾ ವಿಭಾಗದವರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ರಾಜೇಶ್‌ ಮಾತು. ಅಂದಹಾಗೆ, ದರ್ಶನ್‌, ಶಿವರಾಜಕುಮಾರ್‌, ಸುದೀಪ್‌ ಅವರನ್ನೂ ಆಹ್ವಾನಿಸಲು ತಯಾರಿ ನಡೆಸುತ್ತಿದ್ದಾರಂತೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಅಭಿನಯದ "ರಾಬರ್ಟ್‌' ಆರಂಭದಿಂದಲೂ ಜೋರು ಸುದ್ದಿ ಮಾಡುತ್ತಲೇ ಬಂದಿದೆ. ಕಳೆದ ಕ್ರಿಸ್‌ಮಸ್‌ ಹಬ್ಬಕ್ಕೊಂದು ಹೊಸ ಪೋಸ್ಟರ್‌ ಬಿಡುವ ಮೂಲಕ ಸಾಕಷ್ಟು ಕುತೂಹಲ...

  • ಧನ್ವೀರ್‌ ನಾಯಕರಾಗಿರುವ "ಬಂಪರ್‌' ಚಿತ್ರದ ಮುಹೂರ್ತ ಬುಧವಾರ ನಡೆಯಿತು. ನಟ ದರ್ಶನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು....

  • "ನಂಗೆ ಕೇಶವ ಅವ್ರು ಬಟ್ಟೆ, ಬರೆ,ಊಟ ಎಲ್ಲವ್ನು ಕೊಟ್ಟು ಸಂತೋಷದಿಂದ ನೋಡ್ಕೊಂಡಿದ್ದಾರೆ. ಎಲ್ರೂವ ಸಿನ್ಮಾ ನೋಡ್ಬೇಕು...' ಹೀಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದು...

  • "ವಿರಾಟಪರ್ವ' ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದೆ. ಕಳೆದ ಬಾರಿ ಚಿತ್ರದ ಮೊದಲ ಪೋಸ್ಟರ್‌...

  • ಶ್ರೀಕಿ ಅಭಿನಯದ "ಒಲವೇ ಮಂದಾರ' ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಒಂದು ಅಪರೂಪದ ಪ್ರೀತಿಯ ಕಥಾಹಂದರ ಹೊಂದಿದ್ದ ಸಿನಿಮಾದಲ್ಲಿ ಪ್ರೀತಿಯೇ ಹೈಲೈಟ್‌...

ಹೊಸ ಸೇರ್ಪಡೆ