ದರ್ಶನ್‌ ಪುತ್ರನ ಓಪನ್‌ ಚಾಲೆಂಜ್‌!

ಬಾಟಲ್‌ ಓಪನ್‌ ಚಾಲೆಂಜ್‌ನಲ್ಲಿ ವಿನೀಶ್‌

Team Udayavani, Jul 8, 2019, 3:01 AM IST

ಈಗ ಎಲ್ಲೆಡೆ ಬಾಟಲ್‌ ಓಪನ್‌ ಚಾಲೆಂಜ್‌ ಸುದ್ದಿಯದ್ದೇ ಕಾರುಬಾರು. ಸದ್ಯಕ್ಕೆ ಸಾಮಾಜಿಕ ತಾಣದಲ್ಲಿ ಇದೊಂದು ಟ್ರೆಂಡ್‌ ಆಗಿರುವುದಂತೂ ಸುಳ್ಳಲ್ಲ. ಹಾಲಿವುಡ್‌ನಿಂದ ಶುರುವಾದ ಈ ಬಾಟಲ್‌ ಓಪನ್‌ ಚಾಲೆಂಜ್‌ ಅನ್ನು, ಈಗ ಸ್ಯಾಂಡಲ್‌ವುಡ್‌ ಮಂದಿ ಕೂಡ ಸವಾಲಾಗಿ ಸ್ವೀಕರಿಸಿರುವುದು ಗೊತ್ತೇ ಇದೆ. ಆ ಸಾಲಿಗೆ ಹೊಸ ಸೇರ್ಪಡೆ ಅಂದರೆ, ಅದು ದರ್ಶನ್‌ ಅವರ ಪುತ್ರ ವಿನೀಶ್‌.

ಹೌದು, ದರ್ಶನ್‌ ಅವರ ಪುತ್ರ ವಿನೀಶ್‌ ಕೂಡ ಬಾಟಲ್‌ ಓಪನ್‌ ಚಾಲೆಂಜ್‌ ಮಾಡಿದ್ದಾರೆ. ವಿನೀಶ್‌ ತಮ್ಮ ಕಾಲಿನಿಂದ ಬಾಟಲ್‌ ಓಪನ್‌ ಮಾಡಿ ಅಚ್ಚರಿ ಮೂಡಿಸಿರುವುದು ಸಾಕಷ್ಟು ಸುದ್ದಿಯಾಗಿದೆ. ಪುತ್ರನ ಈ ಬಾಟಲ್‌ ಓಪನ್‌ ಚಾಲೆಂಜ್‌ ಮಾಡುವ ವಿಡಿಯೋವನ್ನು ವಿಜಯಲಕ್ಷ್ಮಿ ದರ್ಶನ್‌ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಜೊತೆಗೆ ಸ್ಯಾಂಡಲ್‌ವುಡ್‌ನ‌ ಸ್ಟಾರ್‌ ನಟರೆಲ್ಲರೂ ಈ ಬಾಟಲ್‌ ಓಪನ್‌ ಚಾಲೆಂಜ್‌ ಅನ್ನು ಸವಾಲಾಗಿ ಸ್ವೀಕರಿಸಿದ್ದು, ಅವರ ನಡುವೆ, ದರ್ಶನ್‌ ಅವರ ಪುತ್ರ ಕೂಡ ಈ ಸವಾಲು ಸ್ವೀಕರಿಸುವ ಮೂಲಕ ದರ್ಶನ್‌ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಅದೇನೆ ಇರಲಿ, ಈ ಓಪನ್‌ ಬಾಟಲ್‌ ಚಾಲೆಂಜ್‌ ಅನ್ನು ಸ್ವೀಕರಿಸಿರುವ ವಿನೀಶ್‌, ಅದರಲ್ಲಿ ಯಶಸ್ಸು ಪಡೆದು, ದರ್ಶನ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ವಿನೀಶ್‌ ಈಗಾಗಲೇ ತಮ್ಮ ತಂದೆಯ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಸಿ “ಐರಾವತ’ ಚಿತ್ರದ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ “ಯಜಮಾನ’ ಚಿತ್ರದ ಶೀರ್ಷಿಕೆ ಗೀತೆಯಲ್ಲೂ ಕಾಣಿಸಿಕೊಂಡಿದ್ದರು. ವಿನೀಶ್‌ ಅವರ ಈ ಪ್ರಯತ್ನ, ಸವಾಲುಗಳನ್ನು ನೋಡುತ್ತಿದ್ದರೆ, ಮುಂದಿನ ದಿನಗಳಲ್ಲಿ ಸಿನಿಮಾಗೆ ಎಂಟ್ರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ