ಕಡ್ಡಿ ಅಲ್ಲಾಡ್ಸೋ ಚಡ್ಡಿದೋಸ್ತ್!ಹೀಗೊಂದು ಭಿನ್ನ ಶೀರ್ಷಿಕೆ ಚಿತ್ರಕ್ಕೆ ತಯಾರಿ

Team Udayavani, Aug 10, 2019, 11:27 AM IST

ಕೆಲವು ಸಿನಿಮಾಗಳೇ ಹಾಗೆ, ಅವು ತಮ್ಮ ಚಿತ್ರದ ಕಥಾಹಂದರ, ಸಬ್ಜೆಕ್ಟ್ಗಳಿಂದ ಸುದ್ದಿಯಾಗುವುದಕ್ಕಿಂತ ತಮ್ಮ ಟೈಟಲ್ ಮೂಲಕವೇ ಸುದ್ದಿಯಾಗೋದು ಜಾಸ್ತಿ. ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದ ತಮ್ಮ ಚಿತ್ರಕ್ಕೆ ವಿಚಿತ್ರ ಟೈಟಲ್ಗಳನ್ನ ಇಟ್ಟು ಗಮನ ಸೆಳೆಯುವ ಟ್ರಿಕ್ಸ್‌ ಜೋರಾಗಿಯೇ ನಡೆಯುತ್ತಿದೆ. ಈಗ ಯಾಕೆ ಈ ಟೈಟಲ್ ಟ್ರಿಕ್ಸ್‌ ಬಗ್ಗೆ ಮಾತು ಅಂತೀರಾ..? ಅದಕ್ಕೂಂದು ಕಾರಣವಿದೆ. ಕನ್ನಡದಲ್ಲಿ ಸದ್ಯ ಅಂಥದ್ದೇ ವಿಚಿತ್ರ ಟೈಟಲ್ ಇಟ್ಟುಕೊಂಡು ಚಿತ್ರವೊಂದು ಶುರುವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’.

ಈ ಹಿಂದೆ ‘ಮನಸಿನ ಮರೆಯಲಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಆಸ್ಕರ್‌ ಕೃಷ್ಣ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ತೆರೆಕಂಡಿದ್ದ ‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಸ್ನೇಹ, ಪ್ರೀತಿ, ರಾಜಕೀಯ, ಕ್ರೈಂ ಮತ್ತು ಪೋಲೀಸ್‌ ವ್ಯವಸ್ಥೆ ಮುಂತಾದ ಅಂಶಗಳು ಹೇಗೆ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ತೋರಿಸಲಾಗುತ್ತದೆಯಂತೆ.

ಒಟ್ಟಾರೆ ಕಳೆದ ಆರು ತಿಂಗಳಿನಿಂದ ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಕಾಮಿಡಿ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಈ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ಆಸ್ಕರ್‌ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸುತ್ತಿ ದ್ದಾರೆ. ಸದ್ಯ ‘ಚಡ್ಡಿ ದೋಸ್ತ್’ಗಳ ಚಿತ್ರದ ಬಗ್ಗೆ ಯಾರಾದ್ರೂ ‘ಕಡ್ಡಿ ಅಲ್ಲಾಡುಸ್ಬುಟಾ’ರು ಅನ್ನೋ ಕಾರಣಕ್ಕೆ ಚಿತ್ರದ ಬಗ್ಗೆ ಹೆಚ್ಚೇನು ‘ಗುಟ್ಟು’ ಬಿಟ್ಟುಕೊಡದ ಚಿತ್ರತಂಡ, ಎಲ್ಲವನ್ನೂ ತೆರೆಮೇಲೆ ಹೇಳುತ್ತೇವೆ ಎನ್ನುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ