ಕ್ರೇಜಿಸ್ಟಾರ್‌ ರವಿ ಬೋಪಣ್ಣದಲ್ಲಿ ಸುದೀಪ್‌ ಗೆಸ್ಟ್‌

ಹೊಸ ಚಿತ್ರದಲ್ಲಿ ರವಿಚಂದ್ರನ್‌ ಬಿಝಿ

Team Udayavani, Aug 11, 2019, 3:00 AM IST

ಸುದೀಪ್‌ ನಿರ್ದೇಶನದ “ಮಾಣಿಕ್ಯ’ ಚಿತ್ರದಲ್ಲಿ ರವಿಚಂದ್ರನ್‌ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ “ಹೆಬ್ಬುಲಿ’ಯಲ್ಲೂ ರವಿಚಂದ್ರನ್‌ ನಟಿಸಿದ್ದರು. ಇನ್ನು, ರವಿಚಂದ್ರನ್‌ ನಿರ್ದೇಶನದ “ಅಪೂರ್ವ’ ಚಿತ್ರದಲ್ಲಿ ಸುದೀಪ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿರೋದು ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ ರವಿಚಂದ್ರನ್‌ ನಿರ್ದೇಶನದ ಸಿನಿಮಾದಲ್ಲಿ ಸುದೀಪ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಿದ್ದಾರೆ. ಅದು “ರವಿ ಬೋಪಣ್ಣ’. ಇದು ರವಿಚಂದ್ರನ್‌ ಅವರ ಹೊಸ ಸಿನಿಮಾ.

ಸ್ವತಃ ರವಿಚಂದ್ರನ್‌ ಅವರೇ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರವಿದು. ಚಿತ್ರಕ್ಕೆ ಸಂಗೀತ ಕೂಡಾ ರವಿಚಂದ್ರನ್‌ ಅವರದೇ. ಈ ಸಿನಿಮಾದಲ್ಲಿ ಸುದೀಪ್‌ ಅವರು ಗೆಸ್ಟ್‌ ಅಪಿಯರೆನ್ಸ್‌ ಮಾಡಲಿದ್ದಾರೆ. ಈಗಾಗಲೇ ಈ ಬಗ್ಗೆ ಸುದೀಪ್‌ ಜೊತೆ ರವಿಚಂದ್ರನ್‌ ಮಾತನಾಡಿದ್ದು, ಸುದೀಪ್‌ ಕೂಡಾ ಓಕೆ ಅಂದಿದ್ದಾರೆ. ಹಾಗಂತ ಯಾವ ಪಾತ್ರ ಎಂಬುದು ಸದ್ಯಕ್ಕೆ ಸಸ್ಪೆನ್ಸ್‌. ಎಲ್ಲಾ ಓಕೆ, ರವಿಚಂದ್ರನ್‌ ಅವರು “ರವಿ ಬೋಪಣ್ಣ’ ಚಿತ್ರವನ್ನು ಯಾವಾಗ ಶುರು ಮಾಡಿದರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಈ ಚಿತ್ರವನ್ನು ರವಿಚಂದ್ರನ್‌ ಸದ್ದಿಲ್ಲದೇ “ರವಿ’ ಎಂಬ ಹೆಸರಿನಲ್ಲಿ ಶುರುಮಾಡಿ, ಏಳು ದಿನಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಆದರೆ, ಅದು ರವಿಚಂದ್ರನ್‌ ಅವರಿಗೆ ತೃಪ್ತಿಯಾಗಲಿಲ್ಲ. ಜೊತೆಗೆ ರವಿಚಂದ್ರನ್‌ ಅವರ ಗಡ್ಡದ ಗೆಟಪ್‌ ನೋಡಿದ ನಿರ್ಮಾಪಕರು, “ಈ ಗೆಟಪ್‌ ತುಂಬಾ ಚೆನ್ನಾಗಿದೆ. ಇದರಲ್ಲೇ ಮುಂದುವರೆಯುವ’ ಎಂಬ ಸಲಹೆ ಕೂಡಾ ಕೊಟ್ಟರಂತೆ. ಹಾಗಾಗಿ, ಈಗ “ರವಿ ಬೋಪಣ್ಣ’ ಎಂಬ ಹೆಸರಿನೊಂದಿಗೆ ಹೊಸದಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ ರವಿಚಂದ್ರನ್‌.

ಅಂದಹಾಗೆ, ಇದು ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಸ್ನೇಹಕ್ಕೂ ಹೆಚ್ಚಿನ ಮಹತ್ವವಿದೆಯಂತೆ. ಕಾವ್ಯಾ ಶೆಟ್ಟಿ “ರವಿ ಬೋಪಣ್ಣ’ದ ನಾಯಕಿ. ಜೊತೆಗೆ ಇನ್ನೊಬ್ಬ ನಾಯಕಿ ಕೂಡಾ ಇದ್ದು, ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸುಮಾರು 12 ವರ್ಷಗಳ ಬಳಿಕ ಮೋಹನ್‌, ರವಿಚಂದ್ರನ್‌ ನಿರ್ದೇಶನದ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಸೀತಾರಾಮ್‌ ಛಾಯಾಗ್ರಹಣವಿದೆ.

ಚಿತ್ರದ ಬಗ್ಗೆ ಮಾತನಾಡುವ ರವಿಚಂದ್ರನ್‌, “ಇದು ಸ್ಕ್ರೀನ್‌ಪ್ಲೇ ಮೇಲೆ ನಿಂತಿರುವ ಸಿನಿಮಾ. “ದೃಶ್ಯ-2′ ತರಹದ ಫೀಲ್‌ ಕೊಡಲಿದೆ’ ಎನ್ನುತ್ತಾರೆ. ಚಿತ್ರದಲ್ಲಿ ರವಿಚಂದ್ರನ್‌ ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಒಂದಷ್ಟು ಭಾಗದ ಚಿತ್ರೀಕರಣ ಮಳೆಯಲ್ಲಿ ನಡೆಯಲಿದೆಯಂತೆ. ಅಂದಹಾಗೆ, ರವಿಚಂದ್ರನ್‌ ಅವರ ಮತ್ತೂಂದು ಚಿತ್ರ “ರಾಜೇಂದ್ರ ಪೊನ್ನಪ್ಪ’ ಕೂಡಾ ನಡೆಯುತ್ತಿದೆ. ಪ್ರವಾಹ ಸಂತ್ರಸ್ತರಿಗೂ “ರವಿ ಬೋಪಣ್ಣ’ ತಂಡ ಸಹಾಯಕ್ಕೆ ಮುಂದಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ