ಕುರುಕ್ಷೇತ್ರ ಮೊದಲ ದಿನದ ಗಳಿಕೆ 13 ಕೋಟಿ

ವಾರಾಂತ್ಯ 35 ಕೋಟಿ ಶೇರ್‌ ನಿರೀಕ್ಷೆ -ರಾಕ್‌ಲೈನ್‌ ವೆಂಕಟೇಶ್‌

Team Udayavani, Aug 11, 2019, 3:01 AM IST

ದರ್ಶನ್‌ ಮುಖ್ಯಭೂಮಿಕೆಯಲ್ಲಿರುವ “ಕುರುಕ್ಷೇತ್ರ’ ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ಸಾಕಷ್ಟು ದಿನಗಳಿಂದ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳು ಥಿಯೇಟರ್‌ನತ್ತ ಧಾವಿಸಿದ ಪರಿಣಾಮ, ಚಿತ್ರಕ್ಕೆ ಭರ್ಜರಿ ಓಪನಿಂಗ್‌ ಸಿಕ್ಕಿದೆ. ಹಾಗಾಗಿ, ಮೊದಲ ದಿನದಿಂದಲೇ ಚಿತ್ರದ ಕಲೆಕ್ಷನ್‌ ಜೋರಾಗಿದೆ. “ಕುರುಕ್ಷೇತ್ರ’ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್‌ ಮಾಡಿರಬಹುದೆಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಬರೋಬ್ಬರಿ 12 ಕೋಟಿ. ಹೌದು, “ಕುರುಕ್ಷೇತ್ರ’ ಮೊದಲ ಕರ್ನಾಟಕವೊಂದರಲ್ಲೇ 13 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಮಳೆ, ಪ್ರವಾಹದ ನಡುವೆಯೇ ಸಿನಿ ಅಭಿಮಾನಿಗಳು “ಕುರುಕ್ಷೇತ್ರ’ವನ್ನು ಕಣ್ತುಂಬಿಕೊಂಡ ಪರಿಣಾಮ, ಭರ್ಜರಿಯಾಗಿ ಕಲೆಕ್ಷನ್‌ ಮಾಡಿದೆ. ಎರಡನೇ ದಿನವಾದ ಶನಿವಾರವೂ “ಕುರುಕ್ಷೇತ್ರ’ದ ಕಲೆಕ್ಷನ್‌ ಜೋರಾಗಿಯೇ ಇದ್ದು, 10 ಕೋಟಿ ದಾಟಿದೆ. ಈ ಬಗ್ಗೆ ಮಾತನಾಡುವ ಚಿತ್ರದ ವಿತರಕ ರಾಕ್‌ಲೈನ್‌ ವೆಂಕಟೇಶ್‌, “ಚಿತ್ರ ಮೊದಲ ದಿನ 13 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.

ಎರಡನೇ ದಿನವೂ 10 ಕೋಟಿ ದಾಟುತ್ತದೆ. ಉತ್ತರ ಕರ್ನಾಟಕ, ಕರಾವಳಿ, ಮಡಿಕೇರಿಗಳಲ್ಲಿ ಮಳೆ ಜೋರಿದೆ. ಇಲ್ಲವಾದಲ್ಲಿ ಚಿತ್ರದ ಕಲೆಕ್ಷನ್‌ ಇನ್ನೂ ಹೆಚ್ಚಾಗುತ್ತಿತ್ತು. ಮೊದಲ ವಾರ 35 ಕೋಟಿ ರೂಪಾಯಿ ಶೇರ್‌ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ. ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. “ಕುರುಕ್ಷೇತ್ರ’ ಚಿತ್ರ ಐದು ಭಾಷೆಯಲ್ಲಿ ತಯಾರಾಗಿದ್ದು, ಮುಂದಿನ ವಾರ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್‌ ದುರ್ಯೋಧನನಾಗಿ ನಟಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ