ದಾಂಪತ್ಯಕ್ಕೆ ಕಾಲಿಟ್ಟ “ಎಕ್ಸ್ಕ್ಯೂಸ್ ಮಿ’ ಸುನೀಲ್
Team Udayavani, Jun 26, 2018, 11:14 AM IST
ನಟ ಕಮ್ ಗಾಯಕ ಸುನೀಲ್ರಾವ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಕಾಸ್ಟೂಮ್ ಡಿಸೈನರ್ ಆಗಿರುವ ಶ್ರೇಯಾ ಐಯ್ಯರ್ ಸುನೀಲ್ರಾವ್ ಅವರ ಬಾಳಸಂಗಾತಿಯಾಗಿದ್ದಾರೆ. ಇವರ ವಿವಾಹ ಜೆಪಿ ನಗರದಲ್ಲಿ ನೆರವೇರಿದೆ. ಚಿತ್ರರಂಗದ ಕೆಲ ಆಪ್ತರು, ಗೆಳೆಯರು ಸುನೀಲ್ರಾವ್ ಅವರ ದಾಂಪತ್ಯಕ್ಕೆ ಶುಭಹಾರೈಸಿದ್ದಾರೆ.
ಬಾಲ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಸುನೀಲ್ರಾವ್, ನಂತರ ಗಾಯಕರಾಗಿಯೂ ಗುರುತಿಸಿಕೊಂಡರು. “ಎಕ್ಸ್ಕ್ಯೂಸ್ ಮಿ’ ಚಿತ್ರದ ಮೂಲಕ ಭರವಸೆಯ ನಟರಾಗಿ ಗುರುತಿಸಿಕೊಂಡ ನಟ ಸುನೀಲ್ರಾವ್, ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿದ “ಲೂಸ್ ಕನೆಕ್ಷನ್’ ವೆಬ್ಸೀರಿಸ್ ಹಿಟ್ ಆಗಿತ್ತು. ಸದ್ಯಕ್ಕೆ ಸುನೀಲ್ರಾವ್ ಅಭಿನಯಿಸುತ್ತಿರುವ ‘ತುರ್ತು ನಿರ್ಗಮನ’ ಚಿತ್ರ ಬಿಡುಗಡೆಯಾಗಬೇಕಿದೆ.
ಶ್ರೇಯಾ ಅವರು ಸುನೀಲ್ ಅಭಿನಯದ ವೆಬ್ಸೀರಿಸ್ಗೆ ಕಾಸ್ಟೂéಮ್ ಡಿಸೈನರ್ ಆಗಿ ಕೆಲಸ ನಿರ್ವಹಿಸಿದ್ದರು. ಇನ್ನು, “ಟಕ್ಕರ್’ ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ವೆಬ್ಸೀರಿಸ್ ಚಿತ್ರೀಕರಣ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ, ಇಬ್ಬರ ಮನೆಯಿಂದ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ