ಸತೀಶ್ ನೀನಾಸಂ, ಶ್ರದ್ಧಾ  ಶ್ರೀನಾಥ್ ಅಭಿನಯದ ಗೋದ್ರಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಚಿತ್ರತಂಡ ಜನವರಿ 17ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ.

Team Udayavani, Jan 14, 2020, 11:57 AM IST

ಬೆಂಗಳೂರು:ಅಭಿನಯ ಚತುರ ಸತೀಶ್ ನೀನಾಸಂ ಮುಖ್ಯಭೂಮಿಕೆಯಲ್ಲಿರುವ ಗೋದ್ರಾ ಚಿತ್ರದ ಫಸ್ಲ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸತೀಶ್ ಜೋಡಿಯಾಗಿ ಯೂಟರ್ನ್ ಬೆಡಗಿ ಶ್ರದ್ದಾ ಶ್ರೀನಾಥ್  ಅಭಿನಯಿಸಿದ್ದು, ಕೆ. ಎಸ್ ನಂದೀಶ್ ಗೋದ್ರಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್, ವಸಿಷ್ಠ ಎನ್ ಸಿಂಹ, ರಕ್ಷಾ ಸೋಮಶೇಖರ್ ಚಿತ್ರದ ತಾರಾಗಣದಲ್ಲಿ ನಟಿಸಿರೋ ಗೋದ್ರಾ ಚಿತ್ರ  ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇಲ್ಲಿಯವರೆಗೂ ಚಿತ್ರದ ಬಗ್ಗೆ ಕೊಂಚ ಸುಳಿವನ್ನು ಕೊಡದ ಚಿತ್ರತಂಡ ಜನವರಿ 17ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ. ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ  ವ್ಯಕ್ತಿಯ ಕಥೆಯನ್ನು ಗೋದ್ರಾ ಚಿತ್ರತಂಡ ಹೇಳ ಹೊರಟಿದೆ. ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕಾರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ. ಚಿತ್ರಕ್ಕೆ ಚಮಕ್ ಚಿತ್ರ ಖ್ಯಾತಿಯ ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ