ಆರಡಿ ಕಟೌಟ್‌, ಐದಡಿ ಆಗೋದು ಹೇಗೆ?


Team Udayavani, Nov 29, 2017, 11:00 PM IST

ambi-deepu.jpg

ತೆಳ್ಳಗಿರುವವನು ದಪ್ಪ ಆಗಬಹುದು. ಕುಳ್ಳಗಿರುವವನು ಉದ್ದ ಆಗಬಹುದು. ಆದರೆ, ಉದ್ದ ಇರುವವರು ಕುಳ್ಳ ಆಗೋದು ಹೇಗೆ?
ಇಂಥದ್ದೊಂದು ಪ್ರಶ್ನೆ ಬರೋದಕ್ಕೆ ಕಾರಣ, ಅಂಬರೀಶ್‌ ಅಭಿನಯದ ಹೊಸ ಚಿತ್ರ “ಅಂಬಿ ನಿಂಗೆ ವಯಸ್ಸಾಯ್ತೋ’. ಈ ಚಿತ್ರದ ವಿಶೇಷವೆಂದರೆ, ಇದರಲ್ಲಿ ಅಂಬರೀಶ್‌ ಅವರ ಕಿರುವಯಸ್ಸಿನ ಪಾತ್ರವನ್ನು ಸುದೀಪ್‌ ಮಾಡುತ್ತಿದ್ದಾರೆ.

ಮೂಲ ಚಿತ್ರವಾದ “ಪವರ್‌ ಪಾಂಡಿ’ಯಲ್ಲಿ ರಾಜಕಿರಣ್‌ ಅವರ ಕಿರುವಯಸ್ಸಿನ ಪಾತ್ರವನ್ನು ಧನುಶ್‌ ಮಾಡಿದ್ದರು. ಇಬ್ಬರೂ ಹೆಚ್ಚಾ ಕಡಿಮೆ ಒಂದೇ ಹೈಟಿನವರಾದ್ದರಿಂದ ಸಮಂಜಸವಾಗಿತ್ತು. ಆದರೆ, ಕನ್ನಡದಲ್ಲಿ ಅಂಬರೀಶ್‌ ಅವರ ಚಿಕ್ಕವಯಸ್ಸಿನ ಪಾತ್ರವನ್ನು ಸುದೀಪ್‌ ಮಾಡುತ್ತಿದ್ದಾರೆ ಎಂದರೆ ಹಲವರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ, ಅಂಬರೀಶ್‌ ಅವರು ಐದು ಪ್ಲಸ್‌ ಅಡಿ ಎತ್ತರವಿದ್ದಾರೆ.

ಇನ್ನು ಸುದೀಪ್‌ ಅವರು ಆರಡಿ ಕಟೌಟ್‌. ಅಂಬರೀಶ್‌ ಅವರದ್ದು ವಯಸ್ಸಿಗೆ ತಕ್ಕ ಪಾತ್ರ. ಇನ್ನು ಸುದೀಪ್‌ ಅವರು ಅಂಬರೀಶ್‌ ಅವರ ಚಿಕ್ಕ ವಯಸ್ಸಿನ ಅಥವಾ ಫ್ಲಾಶ್‌ಬ್ಯಾಕ್‌ನ ಪಾತ್ರ. ಹಾಗಿರುವಾಗ ಎತ್ತರದ ಗೊತ್ತಾಗುವುದಿಲ್ಲವಾ? ಅಥವಾ ಆರಡಿ ಕಟೌಟ್‌, ಐದಡಿ ಆಗೋದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ಹೈಟ್‌ನ ಹೇಗೆ ಸರಿದೂಗಿಸಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಇದಕ್ಕೆ ನಿರ್ದೇಶಕ ಗುರುದತ್‌ ಗಾಣಿಗ ಅದಾಗಲೇ ಪಕ್ಕಾ ಪ್ಲಾನಿಂಗ್‌ ಮಾಡಿದ್ದಾರೆ. ಆ ಬಗ್ಗೆ “ಉದಯವಾಣಿ’ ಅವರನ್ನು ಮಾತನಾಡಿಸಿದಾಗ ಹೇಳಿದ್ದಿಷ್ಟು. “ಅಂಬರೀಶಣ್ಣ ಅವರ 25 ವರ್ಷದಲ್ಲಿರೋ ಯೌವ್ವನದ ಪಾತ್ರವನ್ನು ಸುದೀಪ್‌ ಸರ್‌ ಮಾಡುತ್ತಿದ್ದಾರೆ. ಆ ವಯಸ್ಸಲ್ಲಿ ಎಲ್ಲರಿಗೂ ಆಗುವಂತೆ ಆ ಪಾತ್ರಕ್ಕೂ ಫ‌ಸ್ಟ್‌ಲವ್‌ ಆಗುತ್ತೆ. ಯೌವ್ವನದ ಪಾತ್ರದ ಕಥೆ ತೆರೆಯ ಮೇಲೆ ಮೂಡುತ್ತೆ. ಅದಕ್ಕೆ ತಕ್ಕಂತೆ ಪಾತ್ರಧಾರಿಯೂ ಇರುತ್ತಾರೆ.

ಯೌವ್ವನದ ಪಾತ್ರ ಎತ್ತರದಲ್ಲಿದ್ದು, ವಯಸ್ಸಾಗಿರೋ ಪಾತ್ರ ಹೈಟ್‌ ಕಮ್ಮಿ ಇರುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಅದಕ್ಕೊಂದು ಉಪಾಯವೂ ಇದೆ. ಈಗಿನ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆ ಹೊಸ ತಂತ್ರಜ್ಞಾನ ಬಳಸಿಕೊಂಡು ಅಂಬರೀಷ್‌ ಅವರ ಹಣೆ, ಕಣ್ಣುಗಳನ್ನು ಸುದೀಪ್‌ ಸರ್‌ ಮುಖಕ್ಕೆ ಹೊಂದಿಕೊಳ್ಳುವಂತೆ ಮಾಡುವ ಕುರಿತು ಮುಂಬೈನ ಪ್ರತಿಷ್ಠಿತ ಕಂಪೆನಿಯೊಂದರ ಜತೆ ಮಾತುಕತೆ ನಡೆಯುತ್ತಿದೆ.

ಶಾರುಖ್‌ ಖಾನ್‌ ಅವರ “ಫ್ಯಾನ್‌’ ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞಾನದ ಕಂಪೆನಿ ಸೇರಿದಂತೆ ದಿ ಬೆಸ್ಟ್‌ ಎನ್ನುವ ಗ್ರಾಫಿಕಲ್‌ ಟೀಮ್‌ನೊಂದಿಗೂ ಆ ಬಗ್ಗೆ ಚರ್ಚಿಸಲಾಗುತ್ತಿದೆ’ ಎನ್ನುತ್ತಾರೆ ಗುರುದತ್‌ ಗಾಣಿಗ. “ಇಲ್ಲಿ ಸುಮ್ಮನೆ ಕಮರ್ಷಿಯಲ್‌ ಆಗಿ ನೋಡುವುದಾದರೆ ಆ ಯೋಚನೆ ಮತ್ತು ಭಾವನೆ ಬರುವುದಿಲ್ಲ. ಕಮರ್ಷಿಯಲ್‌ ಪಾಯಿಂಟ್‌ನಲ್ಲಿ ಕಥೆ ಶುರುವಾಗುತ್ತೆ. ಅಂಬರೀಶ್‌ರಂತೆಯೇ ಯೌವ್ವನದ ಪಾತ್ರವನ್ನು ತೋರಿಸಬೇಕೆಂಬುದು ಮನಸ್ಸಲಿಲ್ಲ.

ಆದರೆ, ಅದು ಅಂಬರೀಶ್‌ ಅವರ ಯೌವ್ವನದ ಪಾತ್ರವೇ ಎಂಬುದನ್ನು ನಂಬುವಷ್ಟರಮಟ್ಟಿಗೆ ತೋರಿಸುತ್ತೇವೆ. ಸುದೀಪ್‌ ಅವರ ಯೌವ್ವನದ ಭಾಗ ಸುಮಾರು 25 ನಿಮಿಷಗಳಷ್ಟು ತೆರೆಯ ಮೇಲೆ ಬರಲಿದೆ. ಹಾಗೆ ನೋಡಿದರೆ, ಮೂಲ ಚಿತ್ರದಲ್ಲಿ ರಾಜ್‌ಕಿರಣ್‌ ಮತ್ತು ಧನುಷ್‌ ಅವರಿಬ್ಬರಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಇಲ್ಲಿ ಸುದೀಪ್‌ ಮತ್ತು ಅಂಬರೀಷ್‌ ಅವರನ್ನು ಹೋಲಿಕೆ ಮಾಡಬಹುದು.

ಕಥೆ ಒಳಗೆ ಟ್ರಾವೆಲ್‌ ಆದಾಗ, ಮನಸ್ಸು ಸಹಜವಾಗಿಯೇ ನಂಬೋಕೆ ಶುರುವಾಗುತ್ತೆ. ಮೂಲ ಚಿತ್ರಕ್ಕಿಂತಲೂ ಇಲ್ಲಿ ಹೆಚ್ಚು ಶ್ರಮ ಹಾಕುತ್ತಿದ್ದೇವೆ. ಯಾರಿಗೂ ಯೌವ್ವನದ ಪಾತ್ರ ಅನುಮಾನ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸುತ್ತಾರೆ ಗುರುದತ್‌ ಗಾಣಿಗ. “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ಡಿಸೆಂಬರ್‌ 7 ಅಥವಾ 8ರಿಂದ ಚಿತ್ರೀಕರಣ ಶುರುವಾಗಲಿದೆ.

ಅಂಬರೀಷ್‌ ಅವರ ಭಾಗದ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲಾಗುತ್ತದಂತೆ. ಆ ನಂತರ ಸುದೀಪ್‌ ಅವರ ಭಾಗ ಶುರುವಾಗಲಿದೆ. ಅಂಬರೀಶ್‌ ಅವರಿಗೆ ಸುಹಾಸಿನಿ ಜೋಡಿಯಾದರೆ, ಸುದೀಪ್‌ ಅವರಿಗೆ ಯಾರನ್ನು ಜೋಡಿ ಮಾಡಿದರೆ ಚೆನ್ನಾಗಿರುತ್ತೆ ಎಂಬ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ನಿರ್ಮಾಪಕ ಹಾಗೂ ವಿತರಕ ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.