ದಿಗಂತ್ಗೆ ಹುಟ್ಟುಹಬ್ಬದ ಶುಭಾಶಯಗಳು
ಹೊಸ ಸಿನಿಮಾಕ್ಕೆ ರೆಡಿ
Team Udayavani, Apr 20, 2019, 3:00 AM IST
ಮದುವೆ ಬಳಿಕ ಜಾಲಿಯಾಗಿ ಸುತ್ತಾಡಿಕೊಂಡಿದ್ದ ದಿಗಂತ್ ಈಗ ಮತ್ತೆ ಸಿನಿಮಾ ಮೂಡ್ಗೆ ಬಂದಿದ್ದಾರೆ. ಅದು ಹೊಸ ಸಿನಿಮಾ ಒಪ್ಪಿಕೊಳ್ಳುವ ಮೂಲಕ. ಹೌದು, ದಿಗಂತ್ ಈಗ ಸದ್ದಿಲ್ಲದೇ, ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು “ಹುಟ್ಟುಹಬ್ಬದ ಶುಭಾಶಯಗಳು’.
ಇದು ದಿಗಂತ್ ಅವರ ಹೊಸ ಸಿನಿಮಾದ ಟೈಟಲ್. ನಾಗರಾಜ್ ಬೇತೂರ್ ಈ ಸಿನಿಮಾದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿದ್ದ ನಾಗರಾಜ್, ಈಗ ದಿಗಂತ್ಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ.
ಒಂದರ ಹಿಂದೊಂದರಂತೆ ಸಿನಿಮಾ ನಿರ್ಮಿಸುತ್ತಿರುವ ಕ್ರಿಸ್ಟಲ್ ಪಾರ್ಕ್ನ ಟಿ.ಆರ್.ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಈಗಾಗಲೇ “ಚಮಕ್’, “ಅಯೋಗ್ಯ’, “ಬೀರ್ಬಲ್’ ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್, ಸದ್ಯ ಉಪೇಂದ್ರ, ಅಜೇಯ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಈಗ ದಿಗಂತ್ ಜೊತೆ “ಹುಟ್ಟುಹಬ್ಬದ ಶುಭಾಶಯಗಳು’ ಮಾಡಲು ಹೊರಟಿದ್ದಾರೆ. ಈ ಚಿತ್ರದ ಟೈಟಲ್ ಡಿಸೈನ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ರಕ್ತ, ಕತ್ತಿ, ಸುತ್ತಿಗೆಯನ್ನು ಬಳಸಿ ಟೈಟಲ್ ಡಿಸೈನ್ ಮಾಡಲಾಗಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತವಿದೆ. ಮೇ 1 ರಿಂದ ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು