ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ

ಒಡೆಯನ ಒಡತಿಯ ಮನದ ಮಾತು

Team Udayavani, Dec 9, 2019, 6:04 AM IST

ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರ ಈ ವಾರ (ಡಿ.12) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ. ಜ್ಯುವೆಲ್ಲರಿ ಡಿಸೈನಿಂಗ್‌ನಲ್ಲಿ ಡಿಪ್ಲೊಮ ಕೋರ್ಸ್‌ ಕೂಡ ಮಾಡಿರುವ ಸನಾ, ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಂಡವರು. “ಒಡೆಯ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಗ್ಗೆ ಮಾತನಾಡುವ ಸನಾ, “ನಾನು ಆ್ಯಕ್ಟಿಂಗ್‌ ತರಬೇತಿ ಪಡೆಯುತ್ತಿದ್ದ ವೇಳೆಯೇ “ಒಡೆಯ’ ಚಿತ್ರತಂಡ ಹೀರೋಯಿನ್‌ಗಾಗಿ ಹುಡುಕಾಟದಲ್ಲಿತ್ತು. ಅಲ್ಲದೆ ನನ್ನಮ್ಮ ಮತ್ತು ದರ್ಶನ್‌ ಅವರ ತಾಯಿ ಬಹುಕಾಲದ ಸ್ನೇಹಿತೆಯರು.

ಈ ಗೆಳೆತನವೇ ನಾನು ಬಣ್ಣದ ಲೋಕ ಪ್ರವೇಶಿಸಲು ಬೆಸುಗೆ ಹಾಕಿತು. ಅಮ್ಮನ ಒತ್ತಾಸೆಯಿಂದಲೇ ಒಡೆಯನ ಕೋಟೆ ಪ್ರವೇಶಿಸಲು ಸುಲಭವಾಯಿತು. ನಟನೆ, ಕನ್ನಡ ಗೊತ್ತಿರುವುದು ಮತ್ತಷ್ಟು ಸಹಕಾರಿಯಾಯಿತು’ ಎನ್ನುತ್ತಾರೆ. ಇನ್ನು ದರ್ಶನ್‌ ಅವರ “ಒಡೆಯ’ ಚಿತ್ರಕ್ಕೆ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದು, ದರ್ಶನ್‌ ಅವರ ಜೊತೆ ಅಭಿನಯಿಸಿದ್ದು ಎಲ್ಲವೂ ಇಂದಿಗೂ ಕೆಲವೊಮ್ಮೆ ಸನಾಗೆ ಕನಸೋ, ನನಸೋ ಎಂದು ಅಚ್ಚರಿ ತರುತ್ತದೆಯಂತೆ. ಈ ಬಗ್ಗೆ ಮಾತನಾಡುವ ಸನಾ, “ನಾನು ಚಿಕ್ಕಂದಿನಿಂದಲೂ ದರ್ಶನ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ.

ನಾನು ಅವರ ದೊಡ್ಡ ಫ್ಯಾನ್‌. ದೊಡ್ಡ ಸ್ಟಾರ್‌ ಆಗಿರುವುದರಿಂದ ಅವರನ್ನು ಹತ್ತಿರದಿಂದ ನೋಡೋದೆ ಕಷ್ಟ. ಅಂಥದ್ರಲ್ಲಿ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂದ್ರೆ, ಕೆಲವೊಮ್ಮೆ ಅದು ಕನಸೋ, ನಿಜವೋ ಅಂಥ ಗೊತ್ತಾಗುವುದಿಲ್ಲ. ಆದ್ರೆ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತಾನೆ’ ಎಂದು ತಮ್ಮ ಖುಷಿ ಹಂಚಿಕೊಳ್ಳುತ್ತಾರೆ. ಇನ್ನು “ಒಡೆಯ’ ಚಿತ್ರದಲ್ಲಿ ಸನಾ ಪೇಂಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿನ ಪಾತ್ರ ಕುರಿತು ಉತ್ಸಾಹದಿಂದಲೇ ಮಾತನಾಡುವ ಸನಾ, “ಸಿನಿಮಾದಲ್ಲಿ ನನ್ನದು ಪೇಂಟರ್‌ ಪಾತ್ರ.

ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿರುವೆ. ದರ್ಶನ್‌ ಮತ್ತು ನನ್ನ ನಡುವೆ ಒಪ್ಪಿತ ಪ್ರೀತಿ ಇರುತ್ತದೆ. ಒಂದು ಹಂತದಲ್ಲಿ ಅದು ಹಳಿ ತಪ್ಪುತ್ತದೆ. ನಮ್ಮಿಬ್ಬರ ಆ ಪ್ರೀತಿ ಮತ್ತೆ ಹಳಿಗೆ ಮರಳುತ್ತದೆಯೇ ಎನ್ನುವುದೇ ಚಿತ್ರದ ತಿರುಳು’ ಎಂದು ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಕಥೆಯ ಬಗ್ಗೆ ಸಣ್ಣ ಸುಳಿವನ್ನು ಬಿಟ್ಟುಕೊಟ್ಟು, ಕುತೂಹಲ ಹೆಚ್ಚಿಸುತ್ತಾರೆ. ಸದ್ಯ ತಮ್ಮ ಚೊಚ್ಚಲ ಚಿತ್ರ “ಒಡೆಯ’ನ ಬಿಡುಗಡೆಯನ್ನು ಎದುರು ನೋಡುತ್ತಿರುವ ಸನಾಗೆ, ಇದರ ನಡುವೆಯೇ ಹಲವು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಈ ಬಗ್ಗೆ ಮಾತನಾಡುವ ಸನಾ, “ಈಗ ನನ್ನ ಗಮನ “ಒಡೆಯ’ ರಿಲೀಸ್‌ ಕಡೆಗಿದೆ. ಆದ್ರೆ ಇದರ ಮಧ್ಯದಲ್ಲೇ ಕನ್ನಡದಲ್ಲಿ ಇಲ್ಲಿಯವರೆಗೆ ಮೂರು-ನಾಲ್ಕು ದೊಡ್ಡ ಚಿತ್ರಗಳ ಆಫ‌ರ್ ಕೂಡ ಬಂದಿದೆ. ಆ ಚಿತ್ರಗಳ ಬಗ್ಗೆ ಮಾತುಕತೆಯ ಅಂತಿಮ ಹಂತದಲ್ಲಿದೆಯಂತೆ. ಜೊತೆಗೆ ಬೇರೆ ಭಾಷೆಗಳಿಂದಲೂ ಒಳ್ಳೆಯ ಆಫ‌ರ್ ಬರುತ್ತಿವೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಬೇರೆ ಭಾಷೆಯಿಂದಲೂ ಅವಕಾಶಗಳು ಬರುತ್ತಿವೆ’ ಎಂದು ಮಾಹಿತಿ ನೀಡುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...