ಕೃಷ್ಣ ಟಾಕೀಸ್‌ನಲ್ಲಿ ಕಿಚ್ಚ ನ ಧ್ವನಿ

Team Udayavani, Nov 11, 2019, 10:28 AM IST

ನಟ ಸುದೀಪ್‌ ಸಾಕಷ್ಟು ಸಿನಿಮಾಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅದು ಆಡಿಯೋ ಬಿಡುಗಡೆ ಇರಲಿ, ಟೀಸರ್‌, ಟ್ರೇಲರ್‌ ರಿಲೀಸ್‌ ಆಗಿರಲಿ ಅಥವಾ ಸಿನಿಮಾಗೆ ಹಿನ್ನೆಲೆ ಧ್ವನಿ ಇರಲಿ, ಹಾಡುವುದೇ ಇರಲಿ ತಮ್ಮ ಬಿಝಿ ಕೆಲಸದ ನಡುವೆಯೂ ಅವರು ಸಹಕರಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.

ಈಗ ಅಜೇಯ್‌ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಹಾಡೊಂದನ್ನು ಹಾಡುವುದಾಗಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಸುದೀಪ್‌ ಒಳ್ಳೆಯ ಗಾಯಕರು ಅನ್ನೋದು ಎಲ್ಲರಿಗೂ ಗೊತ್ತು. ಅವರು ಸುಮ್ಮನೆ ಹಾಡಲು ಒಪ್ಪುವುದಿಲ್ಲ. ಸಾಹಿತ್ಯ ಇಷ್ಟವಾಗಬೇಕು, ಟ್ಯೂನ್‌ ಚೆನ್ನಾಗಿದೆ ಎನಿಸಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ, ಟ್ರೆಂಡಿ ಸಾಂಗ್‌ ಅಂದರೆ ಅವರು ಹಾಡಲು ಮುಂದಾಗುತ್ತಾರೆ.

ಅಷ್ಟಕ್ಕೂ ಸುದೀಪ್‌ ಹಾಡಲು ಒಪ್ಪಿರೋದು ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರಿಗಾಗಿ. ಹೌದು, ಸುದೀಪ್‌ ಅವರನ್ನು ಇತ್ತೀಚೆಗೆ ಶ್ರೀಧರ್‌ ವಿ. ಸಂಭ್ರಮ್‌ ಅವರು ಭೇಟಿಯಾಗಿ ಹಾಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಹಾಡುವ ಟ್ರಾಕ್‌ ಸಾಂಗ್‌ ಅನ್ನು ಸಹ ಸುದೀಪ್‌ ಅವರಿಗೆ ಕೇಳಿಸಿದ್ದಾರೆ. ಹಾಡು ಕೇಳಿದ ಸುದೀಪ್‌, ಇಷ್ಟಪಟ್ಟು, ಹಾಡುವುದಾಗಿ ಹೇಳಿದ್ದಾರೆ.

ಅಂದಹಾಗೆ, ಪ್ರಮೋದ್‌ ಮರವಂತೆ ಮತ್ತು ಅಭಿ ಎಸ್‌. ಇಬ್ಬರೂ ಸೇರಿ ಬರೆದಿರುವ “ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ…’ ಎಂಬ ಹಾಡಿಗೆ ಸುದೀಪ್‌ ಅವರು ಧ್ವನಿಯಾಗಲಿದ್ದಾರೆ. ಈ ಚಿತ್ರವನ್ನು ವಿಜಯ್‌ ಆನಂದ್‌ ನಿರ್ದೇಶಿಸಿದ್ದು, ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದು ಫೈಟ್‌ ಚಿತ್ರೀಕರಿಸಿದರೆ, ಚಿತ್ರ ಪೂರ್ಣಗೊಳ್ಳಲಿದೆ. ಸದ್ಯಕ್ಕೆ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಡಬ್ಬಿಂಗ್‌ ಕೆಲಸ ಶುರುವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ನಿಖೀಲ್‌ ಕುಮಾರ್‌ ಅಭಿನಯದ "ಜಾಗ್ವಾರ್‌' ಚಿತ್ರದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿ ಸಿನಿ ಪ್ರಿಯರ ಗಮನ ಸೆಳೆದಿದ್ದ ನಾಯಕ ನಟಿ ದೀಪ್ತಿ ಸತಿ, ಈಗ ಮತ್ತೂಂದು ಚಿತ್ರದ...

  • ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಮಿಂಚಿರುವ ಭಾಮಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಕೇರಳದ ಮೂಲದ ಭಾಮಾ...

  • ಕನ್ನಡದಲ್ಲಿ ನೈಜ ಘಟನೆ ಕುರಿತ ಅನೇಕ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ ಈಗ "ನಾನು ಮತ್ತು ಗುಂಡ' ಚಿತ್ರವೂ ಸೇರಿದೆ. ಹೌದು, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ,...

  • "ಬೆಂಕಿಯಲ್ಲಿ ಅರಳಿದ ಹೂವು...' ಬಹುಶಃ ಈ ಶೀರ್ಷಿಕೆ ಓದಿದಾಗ ನೆನಪಾಗೋದೇ ನಟಿ ಸುಹಾಸಿನಿ ಹಾಗು ಕಮಲಹಾಸನ್‌ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕೆ.ಬಾಲಚಂದರ್‌ ನಿರ್ದೇಶನದ...

  • "ಪ್ರತಿಯೊಬ್ಬರೂ ಪ್ರೀತಿಸಿ. ಪ್ರೀತಿಸಿಲ್ಲ ಅಂದರೆ, ಪ್ರೀತಿಸಲು ಪ್ರಯತ್ನಿಸಿ. ಪ್ರೀತಿ ಮಾಡಿಲ್ಲ ಅಂದರೆ, ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತೀರಾ. ಎಲ್ಲದ್ದಕ್ಕೂ...

ಹೊಸ ಸೇರ್ಪಡೆ