ಟ್ರೇಲರ್ ಜೊತೆ ಬಂದ ನೋಡಿ ಕಡಲ ತಡಿಯ ಭಾರ್ಗವ!

Team Udayavani, Oct 21, 2019, 6:04 PM IST

ಕನ್ನಡ ಚಿತ್ರರಂಗವೀಗ ಹೊಸಾ ಸಾಧ್ಯತೆಗಳತ್ತ ತೆರೆದುಕೊಂಡಿದೆ. ಈ ಕಾರಣದಿಂದಲೇ ಒಂದು ಕಾಲದಲ್ಲಿ ಕನ್ನಡದತ್ತ ಅಸಡ್ಡೆಯಿಂದ ನೋಡುತ್ತಿದ್ದ ಕಣ್ಣುಗಳಲ್ಲಿಯೇ ಬೆರಗೊಂದು ಪ್ರತಿಷ್ಠಾಪನೆಗೊಂಡು ಬಹಳಷ್ಟು ಕಾಲ ಸಂದಿದೆ. ಈ ಕಾರಣದಿಂದಲೇ ಪರಭಾಷೆಗಳಿಗೂ ಸ್ಪರ್ಧೆಯೊಡ್ಡುವ ಕಂಟೆಂಟು ಹೊಂದಿರೋ ಸಿನಿಮಾಗಳೇ ಸೃಷ್ಟಿಯಾಗುತ್ತಿವೆ. ಇಂಥಾ ಹೊಸಾ ಸ್ವರೂಪದ, ಹೊಸಾ ಅಲೆಯ ಚಿತ್ರಗಳ ಸಾಲಿನಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಸೇರಿಕೊಳ್ಳುತ್ತದೆ. ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿರುವ ಈ ಚಿತ್ರದ ಟ್ರೇಲರ್  ಇದೀಗ ಬಿಡುಗಡೆಗೊಂಡಿದೆ.

ಈ ಟ್ರೇಲರ್ ಮೂಡಿ ಬಂದಿರೋ ರೀತಿಯೇ ಕುತೂಹಲಕಾರಿಯಾಗಿದೆ. ಇದಲನ್ನು ಕಂಡ ಯಾರೊಬ್ಬರೂ ಈ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯದಿರಲು ಸಾಧ್ಯವೇ ಇಲ್ಲ. ತನ್ನ ಪ್ರತೀ ಫ್ರೇಮಿನ ರಿಚ್‌ನೆಸ್ ಮೂಲಕವೇ ಗಮನ ಸೆಳೆಯೋ ಈ ಟ್ರೇಲರ್  ಅದಕ್ಕೆ ತಕ್ಕುದಾದ ಕಥೆಯ ಸುಳಿವಿನೊಂದಿಗೆ ವಿಜೃಂಭಿಸಿದೆ. ಪ್ರೀತಿಯ ಛಾಯೆಯೊಂದಿಗೇ ತೆರೆಯದುಕೊಳ್ಳುವ ಈ ಟ್ರೇಲರ್, ಆ ನಂತರದಲ್ಲಿ ನಶೆ, ದ್ವೇಷವೂ ಸೇರಿದಂತೆ ಗುರುತು ಹಿಡಿಯಲಾರಂದಂಥಾ ನಿಗೂಢ ಕಥೆಯ ಸುಳಿವು ಕೊಡುತ್ತದೆ. ಈ ಮೂಲಕವೇ ಚಿತ್ರತಂಡ ಮತ್ತಷ್ಟು ಪ್ರೇಕ್ಷಕರನ್ನು ಬಿಡುಗಡೆಯ ಹೊಸ್ತಿಲಲ್ಲಿಯೇ ಸೆಳೆದುಕೊಳ್ಳುವಲ್ಲಿಯೂ ಗೆದ್ದಿದೆ.

ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಪನ್ನಗ ಕಿರುತೆರೆಯಲ್ಲಿಯೂ ಒಂದಷ್ಟು ವರ್ಷಗಳ ಕಾಲ ಪಳಗಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಎಲ್ಲ ಕೋನಗಳಿಂದಲೂ ತಿಳಿದುಕೊಂಡಿರೋ ಪನ್ನಗ ವಿಶಿಷ್ಟವಾದ ಕಥೆಯೊಂದಿಗೆ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರಂತೆ. ಇದರಲ್ಲಿ ಭರತ್ ಗೌಡ ಮತ್ತು ವರುಣ್ ರಾಜ್ ನಾಯಕರಾಗಿ ನಟಿಸಿದ್ದಾರೆ. ಇವಕಲಾ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ಮಿಂಚಿದ್ದಾರೆ.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡ ಚಿತ್ರರಂಗದಲ್ಲಿ ಹಾರರ್ ಜಾನರಿನ ಚಿತ್ರಗಳಿಗೆ ಬಹು ಬೇಡಿಕೆ ಇದೆ. ಇಂಥಾ ಹಾರರ್ ಸಿನಿಮಾ ನೋಡೋ ಕ್ರೇಜ್ ಅಂತೂ ಎಲ್ಲ ವರ್ಗಗಳ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ....

  • ಡಿಸೆಂಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ತುದಿಗಾಲಿನಲ್ಲಿ ನಿಂತಿವೆ. ಕನ್ನಡದ ಜೊತೆಗೆ ಪರಭಾಷಾ ಸ್ಟಾರ್‌ ನಟರ ಚಿತ್ರಗಳು ಕೂಡಾ ಬಿಡುಗಡೆಯಾಗಲಿವೆ....

  • ಕಳೆದ ಶುಕ್ರವಾರ (ನ.8) ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ "ಆ ದೃಶ್ಯ' ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಯಶಸ್ವಿ...

  • "ಇಂತಹ ಪಾತ್ರ ಮಾಡೋಕೆ ಧೈರ್ಯ ಬೇಕು, ಸಿದ್ಧತೆ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರದ ಮೇಲೆ ಆ ಕಲಾವಿದರಿಗೆ ಪ್ರೀತಿ ಇರಬೇಕು. ಇವೆಲ್ಲಾ ಇದ್ದರೆ ಮಾತ್ರ ಈ ರೀತಿಯ...

  • ರಮೇಶ್‌ ಅರವಿಂದ್‌ ನಿರ್ದೇಶನದ "100' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯ ಹಾಡಿನ ಚಿತ್ರೀಕರಣದಲ್ಲಿದೆ ಚಿತ್ರತಂಡ....

ಹೊಸ ಸೇರ್ಪಡೆ