‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?
Team Udayavani, Aug 16, 2021, 2:04 PM IST
ಬೆಂಗಳೂರು : ನೀವು ಒಬ್ಬ ದೊಡ್ಡ ನಟರಾಗಿ ಸರಿಯಾಗಿ ರಾಷ್ಟ್ರಗೀತೆ ಹೇಳಿ ಎಂದು ಕಾಮೆಂಟ್ ಮಾಡಿದ್ದ ವ್ಯಕ್ತಿಯೋರ್ವನಿಗೆ ನಟ ಕಿಚ್ಚ ಸುದೀಪ್ ಅವರು ತಿರುಗೇಟು ಕೊಟ್ಟಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದಂದು ತಾವು ರಾಷ್ಟ್ರಗೀತೆ ಹಾಡಿರುವ ವಿಡಿಯೋವನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡು, ಎಲ್ಲರಿಗು ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದರು.
ಸುದೀಪ್ ಅವರ ಈ ವಿಡಿಯೋಗೆ ಕಾಮೆಂಟ್ ಮಾಡಿರುವ ವ್ಯಕ್ತಿ, ನೀವು ಟಾಪ್ ನಟರು, ನಿಮ್ಮನ್ನು ತುಂಬಾ ಜನ ಫಾಲೋವ್ ಮಾಡ್ತಾರೆ. ಸರಿಯಾಗೊ ರಾಷ್ಟ್ರಗೀತೆಯನ್ನು ಹೇಳಿ ಸರ್, 48-52 ಸೆಕೆಂಡುಗಳಲ್ಲಿ ರಾಷ್ಟ್ರಗೀತೆ ಹೇಳಬೇಕು ಅನ್ನೋ ಕಾಮನ್ ಸೆನ್ಸ್ ಇಲ್ವಾ ಎಂದಿದ್ದಾರೆ.
Harsh,,, but accepted… I did what i felt with luv towards my country..
Jai hind?? https://t.co/aMbsp0e3wb— Kichcha Sudeepa (@KicchaSudeep) August 15, 2021
ಈ ವ್ಯಕ್ತಿಗೆ ಕಾಮೆಂಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್, “ನಿಮ್ಮ ಮಾತನ್ನು ನಾನು ಸ್ವಾಗತಿಸುತ್ತೇನೆ. ಆದರೆ, ನನ್ನ ದೇಶಕ್ಕಾಗಿ ನನಗೆ ಅನ್ನಿಸಿದ್ದನ್ನು ಪ್ರೀತಿಯಿಂದ ಮಾಡಿದ್ದೇನೆ. ಜೈ ಹಿಂದ್” ಎಂದಿದ್ದಾರೆ.
ಇನ್ನು ಸುದೀಪ್ ಅವರು ಸದ್ಯ ವಿಕ್ರಾಂತ್ ರೋಣಾ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಅವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಒಂದು ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಡಾನ್ಸ್ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ ತೆರೆ ಮೇಲೆ ಅಬ್ಬರ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ