Udayavni Special

ಕನ್ನಡ್ ಗೊತ್ತಿಲ್ಲ ಎನ್ನುವ ಹುಡುಗಿಯ ಕನ್ನಡ ಪ್ರೀತಿ

ಅಭಿಮಾನಿಗಳಿಗೆ ಕನ್ನಡದಲ್ಲಿ ಪತ್ರ ಬರೆದ ಹರಿಪ್ರಿಯಾ

Team Udayavani, Aug 6, 2019, 3:06 AM IST

kannada

ಅಪ್ಪಟ ಕನ್ನಡದ ನಟಿ ಹರಿಪ್ರಿಯಾ, ದಿಢೀರನೆ ತಮ್ಮ ಕನ್ನಡ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ. ಅದರಲ್ಲೂ ಹರಿಪ್ರಿಯಾ ಸ್ವತಃ ಕನ್ನಡದಲ್ಲೇ ಅಂದವಾಗಿ ಬರೆದಿರುವ ಪತ್ರ ಎಂಬುದು ವಿಶೇಷ. ಅಷ್ಟಕ್ಕೂ ಹರಿಪ್ರಿಯಾ ಹಾಗೆ, ಕನ್ನಡದಲ್ಲಿ ಪತ್ರ ಬರೆಯೋಕೆ ಕಾರಣ ಏನು? ಸಹಜವಾಗಿಯೇ ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ. ವಿಷಯವಿಷ್ಟೇ, ಇತ್ತೀಚೆಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ತಮಿಳು ಸಂದರ್ಶನವೊಂದರಲ್ಲಿ ತಮಿಳು ಭಾಷೆಯಲ್ಲೇ ಉತ್ತರಕೊಡುತ್ತ, ತಮಗೆ ಕನ್ನಡ ಬರಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಸಾಮಾಜಿಕ ತಾಣಗಳಲ್ಲಿ ರಶ್ಮಿಕಾ ಮಂದಣ್ಣ ಕುರಿತು ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಅದಾದ ಬಳಿಕ ಕರ್ನಾಟಕದವರಾಗಿ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್‌ಪಟ್ಟ ಅಲಂಕರಿಸಿರುವ ಅನುಷ್ಕಾ ಶೆಟ್ಟಿ ಕೂಡ ಅವರ ತಾಯಿ ಹುಟ್ಟು ಹಬ್ಬಕ್ಕೆ ಕನ್ನಡದಲ್ಲೇ ಬರೆದು ಪೋಸ್ಟ್ ಮಾಡಿದ್ದರು. ಅದು ಸಹ ಕನ್ನಡಿಗರಲ್ಲಿ ಸಂತಸ ಹೆಚ್ಚಿತ್ತು. ಹರಿಪ್ರಿಯಾ ಕೂಡ ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದವರು. ಅವರೆಂದೂ, ಕನ್ನಡ ಭಾಷೆ ಬಗ್ಗೆ ಕೇವಲವಾಗಿ ಮಾತಾಡಿದವರಲ್ಲ. ಎಲ್ಲೇ ಹೋದರೂ, ಕನ್ನಡಾಭಿಮಾನ ತೋರುತ್ತಿದ್ದ ಹರಿಪ್ರಿಯಾ, ಈಗ ಕನ್ನಡಿಗರಿಗೊಂದು ಬರೆದಿರುವ ಪತ್ರದಲ್ಲಿ ಹೀಗೆ ಬರೆದಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನನಗೆ ಕನ್ನಡ ಓದಲು, ಬರೆಯಲು, ಮಾತನಾಡಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ. ಕೆಲ ಅಭಿಮಾನಿಗಳು ನಾನು ಟ್ವಿಟ್ಟರ್‌ನಲ್ಲಿ ಮಾಡುವ ಪೋಸ್ಟ್‍ಗೆ ಕಾಮೆಂಟ್ ಮಾಡುವಾಗ, ಕನ್ನಡದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನನಗೆ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗಾಗಿ ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣಕ್ಕೆ ಬರೆಯುತ್ತಿದ್ದೆ. ಕೆಲವೊಮ್ಮೆ ಕನ್ನಡ ಬರೆಯುವಾಗ, ತಪ್ಪುಗಳಾಗುತ್ತವೆ. ಇನ್ನು, ಚಿತ್ರೀಕರಣ ವೇಳೆ ದೀರ್ಘವಾಗಿ ಟೈಪ್ ಮಾಡಲು ಸಮಯ ಕೂಡ ಸಿಗುವುದಿಲ್ಲ. ಈ ಕಾರಣಗಳಿಂದಾಗಿಯೇ ಕನ್ನಡದಲ್ಲಿ ಪೋಸ್ಟ್ ಮಾಡುವುದಿಲ್ಲ. ಯಾರೂ ತಪ್ಪು ತಿಳಿಯಬೇಡಿ’ ಎಂದು ಕನ್ನಡಾಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಹರಿಪ್ರಿಯಾ.

ಅದೇನೆ ಇರಲಿ, ಹರಿಪ್ರಿಯಾ, ಅಪ್ಪಟ ಕನ್ನಡತಿ. ಸ್ಪಷ್ಟವಾಗಿ ಕನ್ನಡ ಮಾತಾಡುತ್ತಾರೆ. ಮುದ್ದಾಗಿಯೇ ಕನ್ನಡ ಬರೆಯುತ್ತಾರೆ ಎಂಬುದಕ್ಕೆ ಅವರು ಬರೆದ ಕನ್ನಡ ಪತ್ರವೇ ಸಾಕ್ಷಿ. ಕನ್ನಡದ ಅನೇಕ ನಟಿಯರು ಕನ್ನಡ ಗೊತ್ತಿದ್ದರೂ, ಕನ್ನಡ ಮಾತನಾಡಲು ಹಿಂಜರಿಯುವಾಗ, ಹರಿಪ್ರಿಯಾ, ಇರುವ ವಿಷಯವನ್ನು ನೇರವಾಗಿ ಸ್ಪಷ್ಟಪಡಿಸಿರುವುದು ಅವರ ಅಭಿಮಾನಿಗಳಿಗೆ ತುಸು ಖುಷಿಯನ್ನು ಹೆಚ್ಚಿಸಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

mullayanagiri-main

ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!

ಅಂಧೇರಿ: ಕ್ರೇನ್‌ ಕುಸಿದು ಮಹಿಳೆಯ ಸಾವು, ಇಬ್ಬರಿಗೆ ಗಾಯ

ಅಂಧೇರಿ: ಕ್ರೇನ್‌ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ

tk-tdy-1

ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇ ನಾನು

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪ್ರತ್ಯಕ್ಷ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪತ್ತೆ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

ಬಿಹಾರ:ಕೋವಿಡ್ ಲಸಿಕೆ ಉಚಿತ ಭರವಸೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಆಯೋಗ

ಬಿಹಾರ:ಕೋವಿಡ್ ಲಸಿಕೆ ಉಚಿತ ಭರವಸೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಆಯೋಗ

ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?

ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-3

ಕ್ರೈಮ್‌ ಥ್ರಿಲ್ಲರ್‌ನಲ್ಲಿ ವಿಜಯ ರಾಘವೇಂದ್ರ

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

CINEMA-TDY1

ಸಿನಿಮಾ ಬಿಡುಗಡೆ ಕುರಿತು ರವಿಚಂದ್ರನ್‌ ಹೊಸ ಪ್ಲ್ಯಾನ್‌

Drugs

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

cinema-tdy-1

ಆನ ಆದ ಅದಿತಿ : ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

vp-tdy-1

ಆತ್ಮ ನಿರ್ಭರ ಭಾರತ್‌ ಸದ್ಬಳಕೆಯಾಗಲಿ: ಡಾ| ಬಿರಾದಾರ

artho.jpg

ರುಮಟಾಯ್ಡ್‌ ಆರ್ಥ್ರೈಟಿಸ್ – ಸಂಧಿಗಳ ಜನ್ಮಜಾತ ಶತ್ರು

ಕಸಾಯಿಖಾನೆ ಕಟ್ಟಡ ಕಾಮಗಾರಿ ನನೆಗುದಿಗೆ

ಕಸಾಯಿಖಾನೆ ಕಟ್ಟಡ ಕಾಮಗಾರಿ ನನೆಗುದಿಗೆ

ಹುಲಿಗುಡ್ಡ-ಪರಾಪುರ ಕೆರೆ ನೀರು ಪೋಲು

ಹುಲಿಗುಡ್ಡ-ಪರಾಪುರ ಕೆರೆ ನೀರು ಪೋಲು

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.