ಗಾರ್ಮೇಂಟ್ಸ್ ಕೆಲಸಕ್ಕೆ ಸೇರಿಕೊಂಡರಂತೆ ಸಂಗೀತಾ ಭಟ್!

Team Udayavani, Nov 5, 2019, 8:00 AM IST

ಹೀಗೆಂದಾಕ್ಷಣ ಯಾರಿಗೇ ಆದರೂ ಸಖೇದಾಶ್ಚರ್ಯ ಕಾಡದಿರೋದಿಲ್ಲ. ಎರಡನೇ ಸಲ ಚಿತ್ರದಲ್ಲಿ ಮುದ್ದಾಗಿ ನಟಿಸುತ್ತಲೇ ಆ ನಂತರವೂ ಒಂದಷ್ಟು ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರೋ ನಟಿ ಸಂಗೀತಾ ಭಟ್ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆಂದರೆ ಅದಕ್ಕಿಂತಾ ಅಚ್ಚರಿಯ ಸುದ್ದಿ ಬೇರೊಂದಿರಲು ಸಾಧ್ಯವೇ? ಆದರೆ ಇದು ಸಂಭವಿಸಿರೋದು ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಸಿನಿಮಾದಲ್ಲಿ!

ಕಪಟ ನಾಟಕ ಪಾತ್ರಧಾರಿ ಚಿತ್ರದಲ್ಲಿ ಸಂಗೀತಾ ಭಟ್ ಬಾಲು ನಾಗೇಂದ್ರ ಅವರಿಗೆ ಜೋಡಿಯಾಗಿ ನಟಿಸಿರೋ ವಿಚಾರ ಗೊತ್ತಿರುವಂಥಾದ್ದೇ. ಇಲ್ಲಿ ಬಾಲು ನಾಗೇಂದ್ರ ಆಟೋ ಡ್ರೈವರ್ ಆಗಿ ನಟಿಸಿದ್ದಾರೆ. ಸಂಗೀತಾ ಭಟ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರವನ್ನು ಆವಾಹಿಸಿಕೊಂಡು, ಅದನ್ನೇ ಜೀವಿಸಿದಂತೆ ಸಂಗೀತಾ ನಟಿಸಿರೋ ರೀತಿಗೆ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ. ಈ ಪಾತ್ರವೇ ಅವರ ವೃತ್ತಿ ಬದುಕಿಗೆ ಮತ್ತೊಂದು ದಿಕ್ಕು ತೋರುತ್ತದೆ ಎಂಬ ಭರವಸೆಯಂತೂ ಎಲ್ಲರಲ್ಲಿಯೂ ಇದೆ.

ಕ್ರಿಶ್ ಈ ಚಿತ್ರದ ಕಥೆ ಬರೆದು ತಯಾರಾಗುತ್ತಾ ತಾರಾಗಣದ ಆಯ್ಕೆ ಕಾರ್ಯದಲ್ಲಿದ್ದಾಗ ಸವಾಲಾಗಿದ್ದದ್ದು ನಾಯಕಿಯ ಪಾತ್ರ. ಅದಕ್ಕೆ ಯಾರು ಸೂಕ್ತ ಎಂಬ ಹುಡುಕಾಟದಲ್ಲಿದ್ದಾಗ ಎರಡನೇ ಸಲ ಚಿತ್ರದಲ್ಲಿ ನಟಿಸಿದ್ದ ಸಂಗೀತ ಭಟ್ ಅವರೇ ಸೂಕ್ತ ಎಂಬಂಥಾ ನಿರ್ಧಾರಕ್ಕೆ ನಿರ್ದೇಶಕರು ಬಂದಿದ್ದರು. ನಂತರ ಕಥೆ ಹೇಳಿದಾಗ ಈ ಪಾತ್ರವನ್ನು ಮೆಚ್ಚಿಕೊಳ್ಳುತ್ತಲೇ ಅವರು ಒಪ್ಪಿಗೆಯನ್ನೂ ಸೂಚಿಸಿದ್ದರಂತೆ. ಆ ನಂತರ ಆ ಪಾತ್ರವೇ ತಾನಾದಂತೆ ಅದಕ್ಕೆ ಜೀವ ತುಂಬಿದ್ದ ಸಂಗೀತಾ ಪ್ರತೀ ಹೆಜ್ಜೆಯಲ್ಲಿಯೂ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದ್ದರಂತೆ. ಈಗ ಅವರು ವಿದೇಶದಲ್ಲಿದ್ದರೂ ಕೂಡಾ ಅದೇ ಪ್ರೀತಿಯಿಂದ ಕಪಟ ನಾಟಕ ಪಾತ್ರಧಾರಿಗೆ ಸಾಥ್ ಕೊಡುತ್ತಿದ್ದಾರೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಸಂಗೀತಾ ಭಟ್ ಅವರ ಪಾತ್ರದ ನಿಜವಾದ ಚಹರೆ ಎಂಥಾದ್ದೆಂಬುದು ಇದೇ ನವೆಂಬರ್ 8ರಂದು ಸ್ಪಷ್ಟವಾಗಿ ಗೊತ್ತಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ