Udayavni Special

ಕೆಜಿಎಫ್-2 ಟ್ರೇಲರ್‌ ಬಿಡಿ..: ಫ್ಯಾನ್ಸ್‌ ಒತ್ತಾಯ

Team Udayavani, Oct 25, 2020, 9:30 AM IST

cinema-tdy-1

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿನ್ನೆ ಅಂದರೆ ಅಕ್ಟೋಬರ್‌ 23ಕ್ಕೆ “ಕೆಜಿಎಫ್-2′ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬೇಕಿತ್ತು. ಆದರೆ, ಕೋವಿಡ್ ಹೊಡೆತದಿಂದ ಎಲ್ಲಾ ಲೆಕ್ಕಾಚಾರಗಳು ಬುಡಮೇಲಾಗಿವೆ. ಆದರೆ, ಅಭಿಮಾನಿಗಳು ಮಾತ್ರ ಅಕ್ಟೋಬರ್‌ 23ರಂದು “ಕೆಜಿಎಫ್-2′ ಸಿನಿಮಾವನ್ನು ಸಿಕ್ಕಾಪಟ್ಟೆ ಮಿಸ್‌ ಮಾಡಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಟ್ರೋಲ್‌ಗ‌ಳಾಗುತ್ತಿವೆ. ಇದರ ಜೊತೆಗೆ ಅಭಿಮಾನಿಗಳು ಚಿತ್ರತಂಡಕ್ಕೆ ಒಂದು ಬೇಡಿಕೆಯನ್ನೂ ಇಟ್ಟಿದ್ದಾರೆ. ಅದು ಟ್ರೇಲರ್‌ ರಿಲೀಸ್‌ ಬಿಡುಗಡೆ ಕುರಿತು.

ಹೌದು, ಸಿನಿಮಾ ತಡವಾಗುತ್ತಿರುವುದರಿಂದ “ಕೆಜಿಎಫ್-2′ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಲಿಲ್ಲ, ಕೊನೇ ಪಕ್ಷ ಟ್ರೇಲರ್‌ ನೋಡಿಯಾದರೂ ಸಮಾಧಾನ ಮಾಡಿಕೊಳ್ಳುತ್ತೇವೆ ಎಂಬರ್ಥದಲ್ಲಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಚಿತ್ರತಂಡದಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಚಿತ್ರತಂಡ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ನವೆಂಬರ್‌ನಲ್ಲಿ ಸಂಜಯ್‌ ದತ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈ ನಡುವೆಯೇ ನಾಯಕಿ ನಟಿ ಶ್ರೀನಿಧಿ ಬರ್ತ್‌ಡೇ ಪ್ರಯುಕ್ತ ಇತ್ತೀಚೆಗೆ ಚಿತ್ರತಂಡಹೊಸ ಪೋಸ್ಟರ್‌ವೊಂದನ್ನು ಬಿಡುಗಡೆಗೊಳಿಸಿದೆ. “ಕೆಜಿಎಫ್’ ಮೊದಲ ಭಾಗದಲ್ಲಿ ಯಶ್‌ಗೆ ಜೋಡಿಯಾಗಿ ರೀನಾ ದೇಸಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ, ಸಿಡುಕಿನ ಮತ್ತು ಅಹಂಕಾರಿ ಹುಡುಗಿಯಾಗಿ ನೋಡುಗರ ಗಮನ ಸೆಳೆದಿದ್ದರು.

ಟಗರುಗೆ ಸಲಗ ಸಾಥ್‌ : ಶಿವರಾಜ್‌ ಕುಮಾರ್‌ “ಟಗರು’ ಚಿತ್ರ ಶುಕ್ರವಾರ ರೀ ರಿಲೀಸ್‌ ಆಗಿರೋದು ಗೊತ್ತೇ ಇದೆ. ಮೊದಲ ಬಿಡುಗಡೆಯಲ್ಲಿ ಸೂಪರ್‌ ಹಿಟ್‌ ಆಗಿದ್ದ ಈ ಚಿತ್ರವನ್ನು ಮತ್ತೂಮ್ಮೆ ಕಣ್ತುಂಬಿಕೊಳ್ಳಲು ಈಗ ಮತ್ತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈಗ ಈ ಚಿತ್ರಕ್ಕೆ “ಸಲಗ’ ಸಾಥ್‌ ನೀಡುತ್ತಿದೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವುಹೇಳುತ್ತಿರೋದು “ದುನಿಯಾ’ ವಿಜಯ್‌ ಬಗ್ಗೆ. ಸದ್ಯ “ಸಲಗ’ ಚಿತ್ರದ ನಿರೀಕ್ಷೆಯಲ್ಲಿ ರುವ ವಿಜಯ್‌, “ಟಗರು’ ಚಿತ್ರವನ್ನು ವೀಕ್ಷಿಸಲು ತಮ್ಮತಂಡದೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಮೈಸೂರು ರಸ್ತೆಯ ಗೋಪಾಲ್‌ ಸಿನಿಮಾಸ್‌ನಲ್ಲಿ ಭಾನುವಾರ ಮಧ್ಯಾಹ್ನ 1.15ರ ಪ್ರದರ್ಶನವನ್ನ ಪ್ರೇಕ್ಷಕರೊಂದಿಗೆ ವೀಕ್ಷಿಸಲು ದುನಿಯಾ ವಿಜಯ್, ಟಗರು ನಿರ್ದೇಶಕರಾದ ಸೂರಿ, ಡಾಲಿಧನಂಜಯ, ವಸಿಷ್ಠ ಸಿಂಹ, ಮಾನ್ವಿತಾ ಕಾಮತ್‌ ಸೇರಿದಂತೆ ಇಡೀ ತಂಡ ಭಾಗಿಯಾಗುತ್ತಿದೆ. ಜೊತೆಗೆ ಗೋಪಾಲನ್‌ ಸಿನಿಮಾಸ್‌ನಲ್ಲಿ ಮಧ್ಯಾಹ್ನ 3ಗಂಟೆಗೆ ಟಗರು ರೀ ರಿಲೀಸ್‌ ಸಂಭ್ರಮ ವನ್ನು ಆಯೋಜಿಸಲಾಗಿದೆ. ಕೊರೊನಾ ಲಾಕ್‌ ಡೌನ್‌ ಬಳಿಕ ಚಿತ್ರಮಂದಿರಕ್ಕೆ ಬರುತ್ತಿರುವ ಪ್ರೇಕ್ಷಕರನ್ನು ಪ್ರೋತ್ಸಾಹಿಸುವ ಸಲುವಾಗಿ ಚಿತ್ರತಂಡ ಕೂಡಾ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

WEBSITE-SIZE

ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !

ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೆದ್ದ ಖುಷಿಯಲ್ಲಿ ಆಕ್ಟ್ 1978

ಗೆದ್ದ ಖುಷಿಯಲ್ಲಿ ಆಕ್ಟ್ 1978

suchitra-tdy-11

ಕೋಮಲ್‌ 2020 ಗೆ ಮುಹೂರ್ತ

ಮಹಿಳಾ ಪ್ರಧಾನ ಅಗ್ನಿಪ್ರವ

ಮಹಿಳಾ ಪ್ರಧಾನ ಅಗ್ನಿಪ್ರವ

2021 ರಲ್ಲಿ ರಾಜ್‌ಫ್ಯಾಮಿಲಿಯಿಂದ 12+ ಚಿತ್ರ

2021 ರಲ್ಲಿ ರಾಜ್‌ ಫ್ಯಾಮಿಲಿಯಿಂದ 12+ ಚಿತ್ರ

ಪ್ರೇಮಿಗಳಿಗಾಗಿ ಪ್ರೇಮಂ ಪೂಜ್ಯಂ

ಪ್ರೇಮಿಗಳಿಗಾಗಿ ಪ್ರೇಮಂ ಪೂಜ್ಯಂ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

hunasur

ಹುಣಸೂರು: ಶ್ರೀಗಂಧದ ಚಕ್ಕೆ ಸಾಗಿಸುತ್ತಿದ್ದ ಆರೋಪಿಗಳ ಬಂಧನ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.