Udayavni Special

ಕೆಜಿಎಫ್ ಟೈಮ್ಸ್‌ ಮೂಲಕ ಟೀಸರ್‌ ರಿಲೀಸ್‌ ಅನೌನ್ಸ್‌

ವಿಭಿನ್ನ ರೀತಿಯ ಪ್ರಚಾರದಲ್ಲಿ ಚಿತ್ರತಂಡ

Team Udayavani, Jan 5, 2021, 11:29 AM IST

ಕೆಜಿಎಫ್ ಟೈಮ್ಸ್‌ ಮೂಲಕ ಟೀಸರ್‌ ರಿಲೀಸ್‌ ಅನೌನ್ಸ್‌

ಯಶ್‌ ನಾಯಕರಾಗಿರುವ “ಕೆಜಿಎಫ್-2′ ಚಿತ್ರದ ಟೀಸರ್‌ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಲ್ಲಿ ಕುತೂಹಲ ಕೂಡಾ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರತಂಡ ಕೂಡಾ ಒಂದೊಂದೇ ಅಪ್‌ ಡೇಟ್‌ ನೀಡುತ್ತಾ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಐದು ಭಾಷೆಗಳಲ್ಲೂ ಏಕಕಾಲಕ್ಕೆ ಚಿತ್ರದ ಟೀಸರ್‌ ಜನವರಿ 8 ರಂದು ಬೆಳಗ್ಗೆ 10.18 ನಿಮಿಷಕ್ಕೆ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ಚಿತ್ರತಂಡ ಟೀಸರ್‌ ಬಿಡುಗಡೆಯ ವಿಷಯವನ್ನು ವಿಭಿನ್ನವಾಗಿ ಘೋಷಿಸಿದೆ. “ಕೆಜಿಎಫ್ ಟೈಮ್ಸ್‌’ ಎಂಬ ಪತ್ರಿಕೆಯ ರೂಪದಲ್ಲಿ “ಕೆಜಿಎಫ್-2′ ಕುರಿತಾದ ಒಂದಷ್ಟು ಫೋಟೋ ಜೊತೆಗೆ ಹೆಡ್‌ಲೈನ್ಸ್‌, ಕಿಕ್ಕರ್‌ ಶೈಲಿಯಲ್ಲಿ ಡಿಸೈನ್‌ ಮಾಡಿದ್ದು, ಇದರಲ್ಲಿ ಚಿತ್ರದ ಟೀಸರ್‌ ಬಿಡುಗಡೆ ವಿಷಯವನ್ನು “ಸೀಲ್‌’ ರೂಪದಲ್ಲಿ ನಮೂದಿಸಿದೆ. ಕನ್ನಡ, ಇಂಗ್ಲೀಷ್‌, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ “ಕೆಜಿಎಫ್ ಟೈಮ್ಸ್‌’ ಎಂಬ ಪತ್ರಿಕೆ ರೂಪದಲ್ಲಿ ವಿನ್ಯಾಸ ಮಾಡಲಾಗಿದೆ. ಜೊತೆಗೆ ಪ್ರಶಾಂತ್‌ ನೀಲ್‌ “ಸಾಮ್ರಾಜ್ಯದ ಹೆಬ್ಟಾಗಿಲು ತೆರೆಯಲು ಕೌಂಟ್‌ಡೌನ್‌ ಶುರುವಾಗಿದೆ’ ಚಿತ್ರದ ಸ್ಟಿಲ್‌ವೊಂದರ ಜೊತೆ ಪೋಸ್ಟ್‌ ಮಾಡಿದ್ದಾರೆ. ಟೀಸರ್‌ ರಿಲೀಸ್‌ ಕುರಿತು ಮಾಡಲಾದ “ಕೆಜಿಎಫ್ ಟೈಮ್ಸ್‌’ನಲ್ಲಿ ಸಿನಿಮಾ ಕುರಿತಾದ ಒಂದಷ್ಟು ಆಸಕ್ತಿಕರ ಡೈಲಾಗ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ “ಕೆಜಿಎಫ್ ಟೈಮ್ಸ್‌ -ನರಾಚಿ, ಭಾರತ’ ಎಂದಿದೆ. ಇದರ ಜೊತೆಗೆ, “ನಾಯಕನಾ ಅಥವಾ ಖಳನಾಯಕನಾ?’ ಎಂಬ ಹೆಡ್‌ಲೈನ್‌ ಡಿಸೈನ್‌ ಮಾಡಿದ್ದು, ಒಬ್ಬ ನಾಯಕನನ್ನು ಅವನ ಒಳ್ಳೆಯ ಕಾರ್ಯಗಳಿಂದ ಮತ್ತು ಖಳನಾಯಕನನ್ನು ಕೆಟ್ಟ ಕಾರ್ಯಗಳಿಂದಲೂ ನಿರ್ಣಹಿಸಲಾಗುತ್ತದೆ.

ಇದನ್ನೂ ಓದಿ : ಕನ್ನಡ ಚಿತ್ರರಂಗದಲ್ಲಿ ಗರಿಗೆದರಿದ ನಿರೀಕ್ಷೆ

ಒಬ್ಬ ವ್ಯಕ್ತಿ ಅವರೆಡನ್ನೂ ನಿರ್ವಹಿಸಿದರೆ, ಅವನು ನಾಯಕನಾ ಅಥವಾ ಖಳನಾಯಕನಾ?’ ಎಂಬ ಬರಹವಿದೆ. ಜೊತೆಗೆ “ಕೆಜಿಎಫ್ ನಲ್ಲಿ ಚಿನ್ನ ಸಿಕ್ಕಿದಾಗ ಹುಟ್ಟಿದಾತ ಅವನು ಮುಂದೆ ಅವನೇ ಅದರ ದೊರೆಯಾಗುವನೇ?’, “ಅವನ ಚಪ್ಪಲಿ ಸೈಜ್‌ ಚಿಕ್ಕದ್ದಾಗಿದ್ರೂ ಅವನು ಹೆಜ್ಜೆ ಇಟ್ಟಿರೋ ದಾರಿ ದೊಡ್ಡದಾಗಿತ್ತು’, “ರಾಕಿ ಇನ್ನು ಹೆಚ್ಚು ಪ್ರದೇಶವನ್ನು ಆವರಿಸುತ್ತಾನಾ?’, “ಪ್ರಬಲವಾದ ವ್ಯಕ್ತಿಗಳು ಪ್ರಬಲವಾದ ಜಾಗದಿಂದ ಬರುತ್ತಾರೆ’, “ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಾಂಬೆಯಲ್ಲಿ ಹೈ ಅಲರ್ಟ್‌ ಘೋಷಣೆ’…. ಇಂತಹ ಸಾಲುಗಳ ಮೂಲಕ ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದ್ದು, ಪ್ರಶಾಂತ್‌ ನೀಲ್‌ ನಿರ್ದೇಶನವಿದೆ.

ಟಾಪ್ ನ್ಯೂಸ್

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

only-Kannada

ಕನ್ನಡಕ್ಕಾಗಿ ‘ಓನ್ಲಿ ಕನ್ನಡ’:  ಹೊಸ ಓಟಿಟಿ ವೇದಿಕೆ

14

ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.