ಚಂದ್ರು “ಕಬ್ಜ’ಗೆ ಎಂಟಿಬಿ ನಾಗರಾಜ್‌ ಸಾಥ್‌

ಉಪ್ಪಿ ಲುಕ್‌ಗೆ ಫಿದಾ

Team Udayavani, Jan 14, 2020, 7:02 AM IST

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಬಹುಕೋಟಿ ವೆಚ್ಚದ “ಕಬ್ಜ’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈಗ ಈ ಚಿತ್ರಕ್ಕೆ ಶ್ರೀಮಂತ ರಾಜಕಾರಣಿಯೊಬ್ಬರು ಸಾಥ್‌ ನೀಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು ಬೇರಾರು ಅಲ್ಲ, ಮಾಜಿ ಶಾಸಕ ಎಂಟಿಬಿ ನಾಗರಾಜ್‌. ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದು ಹೊರಬಂದ ಶಾಸಕರಲ್ಲಿ ಎಂಟಿಬಿ ಕೂಡಾ ಇದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈಗ ಎಂಟಿಬಿ ನಾಗರಾಜ್‌ ಅವರು ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಕಬ್ಜ’ ಚಿತ್ರದ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಈ ಮೂಲಕ ಆರ್‌.ಚಂದ್ರು ಅವರ ಬಹುಕೋಟಿ ವೆಚ್ಚದ ಹಾಗೂ ಬಹು ನಿರೀಕ್ಷೆಯ ಸಿನಿಮಾ ಮತ್ತಷ್ಟು ರಂಗೇರಿದೆ. ಈಗಾಗಲೇ “ಕಬ್ಜ’ ಚಿತ್ರದಲ್ಲಿ ಉಪೇಂದ್ರ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫೋಟೋ ಶೂಟ್‌ ಹಾಗೂ ವಿಭಿನ್ನ ಗೆಟಪ್‌ ನೋಡಿ ಇಷ್ಟಪಟ್ಟ ಎಂಟಿಬಿ ನಾಗರಾಜ್‌ ನಿರ್ಮಾಣದಲ್ಲಿ ಆರ್‌.ಚಂದ್ರು ಅವರಿಗೆ ಸಾಥ್‌ ನೀಡುತ್ತಿದ್ದಾರೆ.

ಈಗಾಗಲೇ ಚಿತ್ರೀಕರಣ ಆರಂಭವಾ ಗಿದ್ದು, ಮಿನರ್ವ ಮಿಲ್‌ನಲ್ಲಿ ಹಾಕಲಾದ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೆಟ್ರೋ ಸ್ಟೈಲ್‌ ಸಿನಿಮಾ ಇದಾಗಿದ್ದು, ಬಹುತೇಕ ಸಿನಿಮಾ ಸೆಟ್‌ನಲ್ಲೇ ನಡೆಯಲಿದೆ. ಈ ಚಿತ್ರಕ್ಕಾಗಿ 9 ಸೆಟ್‌ ಹಾಕಲು ಚಂದ್ರು ನಿರ್ಧರಿಸಿದ್ದು, ಈಗಾಗಲೇ ಮಿನರ್ವ ಮಿಲ್‌ನಲ್ಲಿ 4 ಸೆಟ್‌ಗಳು ತಲೆ ಎತ್ತಿವೆ. ಒಂದೂವರೆ ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ಈ ಸೆಟ್‌ಗಳನ್ನು ನಿರ್ಮಿಸಿದ್ದು, “ಕೆಜಿಎಫ್’ ಕಲಾ ನಿರ್ದೇಶಕ ಶಿವಕುಮಾರ್‌ ಅವರ ಕಲ್ಪನೆಯಲ್ಲಿ ಈ ಸೆಟ್‌ ಮೂಡಿಬಂದಿದೆ.

ಅಂದಹಾಗೆ, “ಕಬ್ಜ’ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಸುಮಾರು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕಥೆ ಎಲ್ಲಾ ಭಾಷೆಗೂ ಸಲ್ಲುವುದರಿಂದ ಚಂದ್ರು ಪ್ಯಾನ್‌ ಇಂಡಿಯಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ.ಇನ್ನು, ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ