ಡ್ರೋನ್ ಪ್ರಥಮ್!
Team Udayavani, Feb 5, 2021, 4:23 PM IST
ವಿವಿಧ ವಿನ್ಯಾಸದ ಡ್ರೋನ್ ಸಂಶೋಧನೆ ಮತ್ತು ಅಭಿವೃದ್ಧಿಪಡಿಸಿದ ಯುವ ವಿಜ್ಞಾನಿ ಎಂಬ ಹೆಸರಿನಲ್ಲಿ ಅನೇಕ ಖ್ಯಾತನಾಮರಿಗೆ, ಹಲವು ಸಂಘ-ಸಂಸ್ಥೆಗಳ ಕಿವಿಗೆ ಫ್ಲವರ್ ಗಾರ್ಡನ್ ಅನ್ನೇ ಮುಡಿಸಿದ್ದ ಪ್ರತಾಪ್ ಅಲಿಯಾಸ್ ಡ್ರೋನ್ ಪ್ರತಾಪ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ಈಗ ಇದೇ ಪ್ರತಾಪನ ಕಥೆಯನ್ನೇ ಇಟ್ಟುಕೊಂಡು ನಟ ಪ್ರಥಮ್ ಸಿನಿಮಾವೊಂದನ್ನು ಶುರು ಮಾಡುವ ಯೋಚನೆಯಲ್ಲಿದ್ದಾರೆ.
ಹೌದು, ನಕಲಿ ವಿಜ್ಞಾನಿ ಹೆಸರಿನಲ್ಲಿ ಅನೇಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಡ್ರೋನ್ ಪ್ರತಾಪ್ ಬಗ್ಗೆ ನಟ ಪ್ರಥಮ್ ಸಿನಿಮಾ ಮಾಡಲು ಮುಂದಾಗಿದ್ದು, ಈ ಸಿನಿಮಾದಲ್ಲಿ ಡ್ರೋನ್ ಪ್ರತಾಪನ ಪಾತ್ರದಲ್ಲಿ ಪ್ರಥಮ್ ಕಾಣಿಸಿ ಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ಪ್ರಥಮ್, “ಇದೊಂದು ಕಂಪ್ಲೀಟ್ ಹಾಸ್ಯ ಪ್ರದಾನ ಸಿನಿಮಾವಾಗಿದ್ದು, ಈ ಹಿಂದೆ ಕನ್ನಡದಲ್ಲಿ ಬಂದಂತಹ “ಗೌರಿ-ಗಣೇಶ’, “ಯಾರಿಗೂ ಹೇಳ್ಬೇಡಿ’, “ಉಂಡು ಹೋದ ಕೊಂಡೂ ಹೋದ’ ಮೊದಲಾದ ಮಾದರಿಯ ಸಿನಿಮಾಗಳ ಥರ, ಈ ಸಿನಿಮಾ ಕೂಡ ಇರಲಿದೆ. ಪ್ರೇಕ್ಷಕರನ್ನು ಈ ಸಿನಿಮಾದಲ್ಲಿ ನಗಿಸುವ ಜೊತೆಗೆ ಒಂದು ಮೆಸೇಜ್ ಅನ್ನೂ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ನಮ್ಮ ಸುತ್ತಮುತ್ತ ನಡೆದ ಕೆಲ ನೈಜ ಘಟನೆ, ವ್ಯಕ್ತಿಗಳಿಂದ ಪ್ರೇರಣೆಗೊಂಡು, ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಡಗಿನಲ್ಲಿ ಬಿಡುವು ನೀಡದ ಮಳೆ : ರಸ್ತೆ, ತೋಟ, ಮನೆ ಜಲಾವೃತ, ದೇಗುಲ ಆವರಣಕ್ಕೆ ಕಾವೇರಿ
ಶಿರೂರಿನ ಇನ್ನೊಂದು ದೋಣಿ ಎರ್ಮಾಳಿನಲ್ಲಿ ಪತ್ತೆ
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್
ಪ್ರಧಾನಿ ಮೋದಿಯವರಿಗೆ ರಾಖಿ ಕಳುಹಿಸಿದ ಪಾಕ್ ಸಹೋದರಿ; ಹಾರೈಕೆಯೇನು?
ಭಾರತದಿಂದ ವಿದೇಶಕ್ಕೆ ಪ್ರವಾಸ ಮಾಡುವವರ ಸಂಖ್ಯೆ ಗಣನೀಯ ಹೆಚ್ಚಳ