ತೆಲುಗು , ತಮಿಳು ಸ್ಟಾರ್ ನಿರ್ಮಾಪಕರ ಮನ ಗೆದ್ದ ಜಂಟಲ್ ಮ್ಯಾನ್ ; ರಿಮೇಕ್ ರೈಟ್ಸ್ ಗೆ ಬೇಡಿಕೆ

Team Udayavani, Jan 14, 2020, 12:50 PM IST

ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್ ಚಿತ್ರಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದ್ದು. ಟ್ರೈಲರ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಜಂಟಲ್ ಮ್ಯಾನ್ ನೆರೆ ರಾಜ್ಯದ ಸಿನಿಮಾ ನಿರ್ಮಾಪಕರ ಮನಸ್ಸುಗಳನ್ನು ಕೂಡ ಗೆದ್ದಿರೋದು ವಿಶೇಷ. ಹೌದು ಕಳೆದ ವಾರ ರಿಲೀಸ್ ಆದ ಜಂಟಲ್ ಮ್ಯಾನ್ ಟ್ರೈಲರ್ ಯೂನೀಕ್ ಸಬ್ಜೆಕ್ಟ್ ಜೊತೆಗೆ ಥ್ರಿಲ್ಲಿಂಗ್ ಕಹಾನಿಯನ್ನು ಒಳಗೊಂಡಿದೆ.

ಟ್ರೈಲರ್ ಸಿನಿ ಪ್ರೇಕ್ಷಕರ ಮನಸ್ಸಿಗೂ ಹತ್ತಿರವಾಗಿತ್ತು. ಇದೀಗ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ನಿರ್ಮಾಪಕರು ಕೂಡ ಜಂಟಲ್ ಮ್ಯಾನ್ ಸಬ್ಜೆಕ್ಟ್ ಗೆ ಫಿದಾ ಆಗಿದ್ದು ಚಿತ್ರದ ರಿಮೇಕ್ ರೈಟ್ಸ್ ಗಾಗಿ ಚಿತ್ರತಂಡವನ್ನು ಸಂಪರ್ಕ ಮಾಡಿದ್ದಾರೆ. ಚಿತ್ರದ ನಿರ್ಮಾಪಕರಾದ ಗುರುದೇಶಪಾಂಡೆ ಈ ಸಂತಸದ ಸುದ್ದಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ನಟ ಸಾಯಿಕುಮಾರ್,  ತಮಿಳಿನ ಖ್ಯಾತ ನಟ ಸಿಂಬು ಮ್ಯಾನೇಜರ್ ಸೌಂದರ್,  ಖ್ಯಾತ ನಿರ್ಮಾಪಕರಾದ ಇಶಾರಿ ಗಣೇಶ್, ಕಥ್ರೇಶನ್ ಸೇರಿದಂತೆ ಇನ್ನು ಹಲವು ಸ್ಟಾರ್ ನಿರ್ಮಾಪಕರು ಜಂಟಲ್ ಮ್ಯಾನ್ ರಿಮೇಕ್ ರೈಟ್ಸ್ ಗಾಗಿ ಕ್ಯೂನಲ್ಲಿ ನಿಂತಿದ್ದು , ನಿರ್ಮಾಪಕ ಗುರುದೇಶಪಾಂಡೆಯನ್ನು ಈಗಾಗಲೇ ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದಾರೆ.

ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ನಿಂದ ಬಳಲುವ ವ್ಯಕ್ತಿ ಕುರಿತ ಕಥೆಯನ್ನು ತೆರೆ ಮೇಲೆ ತರಲಾಗಿದೆ. ಡೈನಾಮಿಕ್ ಪ್ರಿನ್ಸ್ ಜೊತೆ ನಿಶ್ವಿಕಾ ನಾಯ್ಡು ಸ್ಕ್ರೀನ್ ಶೇರ್ ಮಾಡಿದ್ದು, ಗುರುದೇಶ ಪಾಂಡೆ ಜಂಟಲ್ ಮ್ಯಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜನವರಿ 31ಕ್ಕೆ ತೆರೆಗೆ ಬರಲು ಜಂಟಲ್ ಮ್ಯಾನ್ ರೆಡಿಯಾಗಿದ್ದು ಬಿಡುಗಡೆಯ ಮೊದಲೇ ಚಿತ್ರ ಸಖತ್ ಸೌಂಡ್ ಮಾಡ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ