“ಕೆಜಿಎಫ್ ಚಾಪ್ಟರ್‌ 2’ಗೆ ರವೀನಾ ಟಂಡನ್‌?

ಅಂದುಕೊಂಡಂತೆ ನಡೆದರೆ ಪ್ರಧಾನಿ ಪಾತ್ರದಲ್ಲಿ ಬಾಲಿವುಡ್‌ ನಟಿ

Team Udayavani, Jun 3, 2019, 3:00 AM IST

Raveena-Tandon

“ಕೆಜಿಎಫ್…’ ಕನ್ನಡ ಚಿತ್ರರಂಗ ಮಾತ್ರವಲ್ಲ. ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿದ ಚಿತ್ರ. ಈಗ “ಕೆಜಿಎಫ್ ಚಾಪ್ಟರ್‌ 2′ ಸಿನಿಮಾ ಕೂಡ ಶುರುವಿಗೆ ಮುನ್ನವೇ ಹೊಸ ಹೊಸ ಸುದ್ದಿಗಳಿಗೆ ಕಾರಣವಾಗುತ್ತಿದೆ. ಈಗಾಗಲೇ “ಕೆಜಿಎಫ್ ಚಾಪ್ಟರ್‌ 2′ ಚಿತ್ರದ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ಜೂನ್‌ ಮೊದಲ ವಾರದಲ್ಲಿ ನಟ ಯಶ್‌ ಕೂಡ ಚಿತ್ರತಂಡಕ್ಕೆ ಎಂಟ್ರಿಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಚಿತ್ರದ ಮತ್ತೂಂದು ಹೊಸ ಸುದ್ದಿಯೆಂದರೆ, ಅದು ಬಾಲಿವುಡ್‌ನ‌ ಹೆಸರಾಂತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆಂಬುದು. ಹೌದು, ಆ ನಟಿ ಬೇರಾರೂ ಅಲ್ಲ, ರವೀನಾ ಟಂಡನ್‌. ಬಹುತೇಕ ಇವರು “ಕೆಜಿಎಫ್ ಚಾಪ್ಟರ್‌ 2’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಈ ಹಿಂದೆ ಕೂಡ ರವೀನಾ ಟಂಡನ್‌ ಬರಲಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಅಂತಿಮವಾಗಿಯೂ, ರವೀನಾ ಟಂಡನ್‌ ಹೆಸರೇ ಕೇಳಿಬರುತ್ತಿದ್ದು, ಅವರನ್ನೇ ಕರೆತರುವ ಪ್ರಯತ್ನ ಚಿತ್ರತಂಡ ಮಾಡುತ್ತಿದೆ ಎನ್ನಲಾಗಿದೆ.

ಹಾಗೆ ನೋಡಿದರೆ, ರವೀನಾ ಟಂಡನ್‌ಗೆ ಇದು ಕನ್ನಡದ ಮೊದಲ ಚಿತ್ರವೇನಲ್ಲ. ಈ ಹಿಂದೆ ಉಪೇಂದ್ರ ನಿರ್ದೇಶಿಸಿ,ಅಭಿನಯಿಸಿದ್ದ “ಉಪೇಂದ್ರ’ ಚಿತ್ರದಲ್ಲಿ ರವೀನಾ ಟಂಡನ್‌ ಅಭಿನಯಿಸಿದ್ದರು. ಅದಾದ ಎರಡು ದಶಕದ ಬಳಿಕ ರವೀನಾ ಟಂಡನ್‌ “ಕೆಜಿಎಫ್ ಚಾಪ್ಟರ್‌ 2′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿವೆ.

ಅಷ್ಟಕ್ಕೂ “ಕೆಜಿಎಫ್ ಚಾಪ್ಟರ್‌ 2′ ಚಿತ್ರದಲ್ಲಿ ರವೀನಾ ಟಂಡನ್‌ ಪಾತ್ರವೇನು? ಇದು ಎಲ್ಲರಲ್ಲೂ ಕಾಡುವ ಪ್ರಶ್ನೆ. “ಕೆಜಿಎಫ್’ ಮೊದಲ ಭಾಗದಲ್ಲಿ ಒಬ್ಬ ಪ್ರಭಾವಿಶಾಲಿ ಮಹಿಳೆಯೊಬ್ಬರ ದೃಶ್ಯವನ್ನು ತೋರಿಸಲಾಗಿತ್ತು. ಆದರೆ, ಅದು ಯಾರ ಪಾತ್ರ ಅನ್ನೋದು ಸ್ಪಷ್ಟವಾಗಿರಲಿಲ್ಲ. ಮೂಲಗಳ ಪ್ರಕಾರ 1980 ರ ಕಾಲಘಟ್ಟದ ಪ್ರಧಾನ ಮಂತ್ರಿ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಬಹುದೇನೋ ಎಂಬ ಪ್ರಶ್ನೆಗಳೂ ಎದ್ದಿವೆ.

ಇದಕ್ಕೆ ಪೂರಕವೆಂಬಂತೆ ರವೀನಾ ಅವರ ಪತಿ ಅನಿಲ್‌ ತಡಾನಿ ಅವರು “ಕೆಜಿಎಫ್’ ಚಿತ್ರದ ವಿತರಣೆ ಮಾಡಿದ್ದರು. ಆ ಸಂದರ್ಭದಲ್ಲಿ ರವೀನಾ “ಕೆಜಿಎಫ್’ ನೋಡಿ ಮೆಚ್ಚಿದ್ದರು. ಈಗ “ಕೆಜಿಎಫ್ ಚಾಪ್ಟರ್‌ 2′ ಚಿತ್ರದ ವಿತರಣೆಯನ್ನೂ ಅವರದೇ ಪ್ರೊಡಕ್ಷನ್‌ ಮೂಲಕ ಮಾಡುತ್ತಿರುವ ಹಿನ್ನೆಲೆಯಲ್ಲಿ ರವೀನಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದಕ್ಕೂ ಮೊದಲು, ಬೇರೆ ನಟಿಯೊಬ್ಬರ ಹೆಸರು ಕೇಳಿಬಂದಿತ್ತು.

ಈಗ ರವೀನಾ ಟಂಡನ್‌ ಅವರ ಹೆಸರು ಕೇಳಿಬರುತ್ತಿದೆ. ಅದೇನೆ ಇರಲಿ, “ಕೆಜಿಎಫ್ ಚಾಪ್ಟರ್‌ 2′ ಈಗ ಮತ್ತಷ್ಟು ಕುತೂಹಲ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಈ ಚಿತ್ರದಲ್ಲಿ ಬಾಲಿವುಡ್‌ನ‌ ಕೆಲ ನಟರೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಸಂಜಯ್‌ದತ್‌ ಕೂಡ ನಟಿಸಲಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ. ಆದರೆ, ಆ ಎಲ್ಲಾ ಅಂತೆ-ಕಂತೆಗಳಿಗೆ ಚಿತ್ರತಂಡವೇ ಉತ್ತರ ಕೊಡಬೇಕಷ್ಟೇ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.