“ಕೆಜಿಎಫ್ 2′ ಶೂಟಿಂಗ್‌ ಮುಗಿಸಿದ ರವೀನಾ

Team Udayavani, Feb 29, 2020, 7:02 AM IST

ಸದ್ಯಕ್ಕೆ ಕನ್ನಡದ “ಕೆಜಿಎಫ್ 2′ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಬಾಲಿವುಡ್‌ನ‌ ಸಂಜಯ್‌ದತ್‌ ನಟಿಸುತ್ತಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಪ್ರಮುಖ ಪಾತ್ರದಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್‌ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಸಹ ಗೊತ್ತು. ಆದರೆ, ಸದ್ದಿಲ್ಲದೆಯೇ ರವೀನಾ ಟಂಡನ್‌ “ಕೆಜಿಎಫ್ 2′ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ ಎಂಬುದು ವಿಶೇಷ.

ಹೌದು, ಬಾಲಿವುಡ್‌ ನಟಿ ರವೀನಾ ಟಂಡನ್‌ “ಕೆಜಿಎಫ್ 2′ ಚಿತ್ರದಲ್ಲಿ ರಮಿಕಾ ಸೇನ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ಅವರು ಮುಂಬೈನಿಂದ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೈದರಾಬಾದ್‌ನಲ್ಲಿ ಭರ್ಜರಿಯಾಗಿಯೇ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ, ರವೀನಾ ಟಂಡನ್‌ ಅವರು ತಮ್ಮ ಭಾಗದ ದೃಶ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ.

ಕೊನೆಯ ದಿನದ ಚಿತ್ರೀಕರಣದ ವೇಳೆ ಚಿತ್ರತಂಡದ ಜೊತೆಗೆ ನಿಂತು ತೆಗೆಸಿಕೊಂಡ ಫೋಟವೋನ್ನು ರವೀನಾ ಟಂಡನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ರವೀನಾ ಟಂಡನ್‌ “ಕೆಜಿಎಫ್ 2′ ಚಿತ್ರತಂಡ ಸೇರಿಕೊಂಡಾಗ, ಚಿತ್ರದ ಪ್ರತಿಯೊಬ್ಬ ಸದಸ್ಯರೂ ಕೂಡ ಅವರನ್ನು ಅದ್ಧೂರಿಯಾಗಿಯೇ ಸ್ವಾಗತಿಸಿತ್ತು. ಈಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಟ್ಟ ಅವರನ್ನು ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

ಅಂದಹಾಗೆ, “ಕೆಜಿಎಫ್ 2′ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ಇಡೀ ಚಿತ್ರತಂಡ, ರವಿಣಾ ಟಂಡನ್‌ ಅವರೊಂದಿಗೆ ಫೋಟೋಗೆ ಫೋಸ್‌ ಕೊಟ್ಟು, ಗೆಲುವಿನ ನಗೆ ಬೀರಿದೆ. ಈ ಚಿತ್ರದಲ್ಲಿ ರವೀನಾ ಟಂಡನ್‌ ಆವರ ಪಾತ್ರ ಸಾಕಷ್ಟು ನಿರೀಕ್ಷೆಯ ಜೊತೆಯಲ್ಲಿ ಕುತೂಹಲವನ್ನೂ ಮೂಡಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ