ಸ್ಯಾಂಡಲ್‌ವುಡ್‌ “ಫೇಸ್‌ ಆ್ಯಪ್‌’ ಕ್ರೇಜ್‌

Team Udayavani, Jul 22, 2019, 3:00 AM IST

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಟ್ರೆಂಡ್‌ ಶುರು ಆಗುವುದು ಈಗಂತೂ ಮಾಮೂಲಿ. ಸದ್ಯ, ಈಗ ಟ್ರೆಂಡ್‌ ಆಗಿರುವುದೆಂದರೆ, ಅದು ಫೇಸ್‌ ಆ್ಯಪ್‌. ಈ ಫೇಸ್‌ ಆ್ಯಪ್‌ ಮೂಲಕ ಜನತೆ ತಮ್ಮ ಮುಪ್ಪಿನ ಫೋಟೋ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ಬಹುತೇಕರ ಮೊಬೈಲ್‌ ಫೋನ್‌ಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಫೇಸ್‌ ಆ್ಯಪ್‌ ಮೋಡಿಗೆ ಎಳೆಯ ಮಕ್ಕಳು, ಜನಸಾಮಾನ್ಯರಿಂದ ಹಿಡಿದು ಸ್ಟಾರ್, ಸೆಲೆಬ್ರಿಟಿಗಳವರೆಗೆ ಬಹುತೇಕರು ಫಿದಾ ಆಗಿದ್ದಾರೆ.

ಅದರಲ್ಲೂ ಈ ಫೇಸ್‌ ಆ್ಯಪ್‌ ಎನ್ನುವ ಸೋಶಿಯಲ್‌ ಮೀಡಿಯಾದ ಸನ್ನಿಗೆ ಯುವಜನತೆ ಚಿತ್ರರಂಗದ ಅನೇಕ ನಟ, ನಟಿಯರು, ಸೆಲೆಬ್ರಿಟಿಗಳು ಕೊಂಚ ಹೆಚ್ಚಾಗಿಯೇ ಒಳಗಾಗಿರುವುದಂತೂ ಸುಳ್ಳಲ್ಲ. ಫೇಸ್‌ ಆ್ಯಪ್‌ನಲ್ಲಿ ತಾವು ಹೇಗೆ ಕಾಣುತ್ತಿದ್ದೇವೆ ಎನ್ನುವ ತಮ್ಮ ತರಹವಾರಿ ಫೋಟೋವನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿಯಾಗಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು, ಸೆಲೆಬ್ರಿಟಿಗಳಿಗೂ ಕೂಡ ಫೇಸ್‌ ಆ್ಯಪ್‌ನ ಮೋಡಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸ್ಟಾರ್ಗಳು ಈ ಫೇಸ್‌ ಆ್ಯಪ್‌ನಿಂದ ದೂರವಿದ್ದರೂ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಫೇಸ್‌ ಆ್ಯಪ್‌ನಲ್ಲಿ ಹೇಗೆ ಕಾಣುತ್ತಾರೆ ಎನ್ನುವ ಕುತೂಹಲದಿಂದ ಸ್ಟಾರ್ ಫೋಟೋಗಳನ್ನ ಫೇಸ್‌ ಆ್ಯಪ್‌ನಲ್ಲಿ ಬಳಸಿ ಅದನ್ನ ಸೋಶಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದ ಸ್ಟಾರ್ ಕಲಾವಿದರಾದ ನಟರಾದ ಸುದೀಪ್‌, ದರ್ಶನ್‌, ಯಶ್‌, ಪುನೀತ್‌, ಜಯರಾಮ್‌ ಕಾರ್ತಿಕ್‌ (ಜೆ.ಕೆ) ನಟಿಯರಾದ ರಚಿತಾ ರಾಮ್, ಪ್ರಿಯಾಮಣಿ, ಶಾನ್ವಿ ಶ್ರೀವಾಸ್ತವ್‌ ಹೀಗೆ ಅನೇಕರ ಫೋಟೋಗಳು ಫೇಸ್‌ ಆಪ್‌ ಬಳಸಿ ಎಡಿಟ್‌ ಮಾಡಲಾಗಿದೆ.

ಒಟ್ಟಾರೆ ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಾಪ್‌ ಹೀಗೆ ಎಲ್ಲೇ ಸ್ಟಾರ್ ಫೋಟೋ ನೋಡಿದ್ರೂ, ಈಗ ಬಹುತೇಕ ಸ್ಟಾರ್ಗೆ ವಯಸ್ಸಾಗೋಗಿರುವಂತೆ ಕಾಣುತ್ತಿದೆ. ಅದರಲ್ಲೂ ಸ್ಟಾರ್ಗಳ ವಯಸ್ಸಾಗಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇದರಿಂದ ಸಹಜವಾಗಿ ಜನರಿಗೆ ಒಳ್ಳೆಯ ಮನರಂಜನೆಯಂತೂ ಸಿಗುತ್ತಿದೆ. ಇನ್ನು ತಾರೆಯರು ಕೂಡ ತಮಾಷೆಗಾಗಿ ಅಭಿಮಾನಿಗಳು ಮಾಡುವ ಫೇಸ್‌ ಆ್ಯಪ್‌ ಪೋಟ್‌ಗಳನ್ನು ದೂರದಿಂದಲೇ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ