ಶಿವಣ್ಣ ತ್ರಿವಿಕ್ರಮನಿಗೆ ಸಂಜಯ್ ದತ್ ವಿಲನ್?
Team Udayavani, Apr 1, 2018, 11:33 AM IST
ನಿರ್ದೇಶಕನ ಓಂ ಪ್ರಕಾಶ್ ರಾವ್, ಶಿವರಾಜಕುಮಾರ್ ಅವರಿಗೆ “ತ್ರಿವಿಕ್ರಮ’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿ ಒಂದೆರಡು ವರ್ಷಗಳಿಂದ ಓಡಾಡುತ್ತಲೇ ಇದೆ. ಆದರೆ, ಯಾವಾಗ ಮಾಡುತ್ತಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಇದೆ. ಈಗ ಮತ್ತೂಮ್ಮೆ “ತ್ರಿವಿಕ್ರಮ’ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಓಂ ಪ್ರಕಾಶ್ ರಾವ್ ಹೇಳಿದ ಹೆಸರು.
“ತ್ರಿವಿಕ್ರಮ’ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಆಗಿ ನಟಿಸುತ್ತಾರಂತೆ. ಈ ಮಾತನ್ನು ಸ್ವತಃ ಓಂ ಪ್ರಕಾಶ್ ರಾವ್ ಹೇಳಿದ್ದು, ಈಗಾಗಲೇ ಸಂಜಯ್ ದತ್ ಜೊತೆ ಮಾತುಕತೆಯಾಗಿದೆಯಂತೆ. “ತ್ರಿವಿಕ್ರಮ’ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡದಲ್ಲಿ ಶಿವಣ್ಣ ಹಾಗೂ ಇತರ ಭಾಷೆಗಳಲ್ಲಿ ಬೇರೆ ನಾಯಕರು ಇರಲಿದ್ದಾರಂತೆ.
ಆದರೆ, ಐದು ಭಾಷೆಗಳಲ್ಲೂ ಸಂಜಯ್ ದತ್ ಅವರೇ ವಿಲನ್ ಆಗಿ ನಟಿಸಲಿದ್ದಾರಂತೆ. ಅಂದಹಾಗೆ, ಇದು ಓಂ ಪ್ರಕಾಶ್ ರಾವ್ ಅವರ 50ನೇ ಚಿತ್ರವಾಗಲಿದೆಯಂತೆ. ಅಂದಹಾಗೆ, ಚಿತ್ರ ಮುಂದಿನ ವರ್ಷ ಆರಂಭವಾಗುವ ಸಾಧ್ಯತೆ ಇದೆ. ಓಂ ಪ್ರಕಾಶ್ ರಾವ್ ನಿರ್ದೇಶನದ “ಹುಚ್ಚ-2′ ಚಿತ್ರ ಏಪ್ರಿಲ್ 6 ರಂದು ಬಿಡುಗಡೆಯಾಗುತ್ತಿದ್ದು, “ಮದರಂಗಿ’ ಕೃಷ್ಣ ಈ ಚಿತ್ರದ ಹೀರೋ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ