ರಗಡ್ ಲುಕ್ನಲ್ಲಿ ಶಿವಣ್ಣ: ‘ವೇದ’ ಹೊಸ ಪೋಸ್ಟರ್ ಗೆ ಫ್ಯಾನ್ಸ್ ಫಿದಾ
Team Udayavani, Oct 2, 2022, 11:25 AM IST
ಶಿವರಾಜ್ಕುಮಾರ್ ನಟನೆಯ “ವೇದ’ ಚಿತ್ರದ ಹೊಸ ಪೋಸ್ಟರ್ವೊಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ರಕ್ತ ಅಂಟಿದ, ಬೆಂಕಿ ಕಂಗಳ ಖಡಕ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ.
ಹರ್ಷ ನಿರ್ದೇಶನದ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಇದು ಶಿವರಾಜ್ ಕುಮಾರ್ ಅವರ 125ನೇ ಚಿತ್ರವಾಗಿದ್ದು. ತಮ್ಮ ಬ್ಯಾನರ್ನಲ್ಲಿ ಶಿವರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಟ್ಯಾಂಕರ್ ಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನ
ಈಗಾಗಲೇ ಹರ್ಷ ಹಾಗೂ ಶಿವರಾಜ್ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದು. ಈಗಾಗಲೇ “ಭಜರಂಗಿ’, “ವಜ್ರಕಾಯ’, “ಭಜರಂಗಿ-2′ ಚಿತ್ರಗಳನ್ನು ಮಾಡಿದ್ದು, ಈಗ “ವೇದ’ ಚಿತ್ರಗಳನ್ನು ಮಾಡುತ್ತಿದ್ದಾರೆ