ಫ್ಯಾಮಿಲಿ ಡ್ರಾಮಾದಲ್ಲಿ ‘ಶೋಕಿವಾಲ’; ಅಜೇಯ್ ರಾವ್ ಚಿತ್ರದ ಟೀಸರ್‌ ಗೆ ಮೆಚ್ಚುಗೆ


Team Udayavani, Apr 12, 2022, 11:55 AM IST

shokiwala

ಅಜೇಯ್‌ ರಾವ್‌ ನಟನೆಯ “ಶೋಕಿವಾಲ’ ಚಿತ್ರ ಏಪ್ರಿಲ್‌ 29ರಂದು ಬಿಡುಗಡೆಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗ ಮೊದಲ ಹಂತವಾಗಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ರಾಮನವಮಿ ದಿನ ಮಹಾಲಕ್ಷ್ಮೀಪುರದಲ್ಲಿರುವ ಅಣ್ಣಾವ್ರ ಹಾಗೂ ಪುನೀತ್‌ ಪ್ರತಿಮೆ ಮುಂದೆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಟೀಸರ್‌ ನೋಡಿದವರಿಗೆ ಚಿತ್ರದಲ್ಲಿ ಕಾಮಿಡಿ ಜೊತೆಗೆ ಆ್ಯಕ್ಷನ್‌ ಎದ್ದು ಕಾಣುತ್ತದೆ. ಮೊದಲ ನೋಟದಲ್ಲೇ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಎಂಬುದು ಗೊತ್ತಾಗುತ್ತದೆ. ಚಿತ್ರದಲ್ಲಿ ಅಜೇಯ್‌ ಹಾಗೂ ನಟಿ ಸಂಜನಾ ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾ ಲಾಂಛನದಲ್ಲಿ ಟಿ.ಆರ್‌.ಚಂದ್ರಶೇಖರ್‌ ಹಾಗೂ ಕಿಶೋರ್‌ ನಿರ್ಮಿಸಿದ್ದಾರೆ. ಈಗಾಗಲೇ “ಚಮಕ್‌’, “ಅಯೋಗ್ಯ’ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಿರ್ಮಾಣ ಸಂಸ್ಥೆ ಈಗ “ಶೋಕಿವಾಲ’ ಮೇಲೆ ನಿರೀಕ್ಷೆ ಇಟ್ಟಿದೆ.

ಇದನ್ನೂ ಓದಿ:ಜನರೇಟರ್‌ ಬಾಡಿಗೆಗೆ ಪಡೆದು ಪಂದ್ಯ ವೀಕ್ಷಿಸಿದ್ದೆ: ಆರ್ ಸಿಬಿ ಬೌಲರ್ ಆಕಾಶ್‌ ದೀಪ್‌

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜಾಕಿ, “ನನ್ನ ಮೊದಲ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಶೋಕಿವಾಲ ಚಿತ್ರದ ಮೊದಲ ವಿಡಿಯೋ ಸಾಂಗ್‌ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇವೆ. ಇದೇ ತಿಂಗಳು 29 ರಂದು ಚಿತ್ರವನ್ನು ಕರ್ನಾಟಕದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ. ವಿತರಕರ ಕಡೆಯಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು, ಅಜೇಯ್‌ ರಾವ್‌ ಅವರಿಗೆ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದು ಕೊಡಲಿದೆ. ಚಿತ್ರವನ್ನು ನಿರ್ಮಾಪಕರು ಅದ್ಧೂರಿಯಾಗಿ ನಿರ್ಮಿಸಿದ್ದಾರೆ’ ಎನ್ನುವುದು ಅವರ ಮಾತು.

ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಅಜೇಯ್‌ ರಾವ್‌, ಸಂಜನಾ ಆನಂದ್‌, ಶರತ್‌ ಲೋಹಿತಾಶ್ವ , ಗಿರೀಶ್‌ ಶಿವಣ್ಣ , ತಬಲಾ ನಾಣಿ , ಮುನಿರಾಜ್‌, ಪ್ರಮೋದ್‌ ಶೆಟ್ಟಿ, ಅರುಣಾ ಬಾಲರಾಜ್‌, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಮುಂತಾದ ಕಲಾವಿದರು ನಟಿಸಿ¨ªಾರೆ. ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ..

ಚಿತ್ರಕ್ಕೆ ಶ್ರೀಧರ್‌. ವಿ. ಸಂಭ್ರಮ್‌ ಸಂಗೀತವಿದ್ದು, 4 ಹಾಡುಗಳಿವೆ. ಜಯಂತ್‌ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌, ಚೇತನ್‌ ಕುಮಾರ್‌ ಹಾಡುಗಳನ್ನು ಬರೆದಿದ್ದಾರೆ. ನವೀನ್‌ ಕುಮಾರ್‌.ಎಸ್‌ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ಪ್ರಶಾಂತ್‌ ರಾಜಪ್ಪ ಸಂಭಾಷಣೆ, ಮೋಹನ್‌ ನೃತ್ಯ ನಿರ್ದೇಶನ, ವಿಕ್ರಮ್‌ ಮೋರ್‌ ಸಾಹಸ ನಿರ್ದೇಶನವಿದೆ.

ಟಾಪ್ ನ್ಯೂಸ್

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.