ಶ್ಯಾನೆ ಹಿಟ್‌ ಆಯ್ತು ಈಗ ಬ್ಯೂಟಿಫ‌ುಲ್‌ ಹುಡುಗಿ ಸರದಿ

ಸಿಂಗ ಚಿತ್ರಕ್ಕೆ ದರ್ಶನ್‌ ಸಾಥ್‌

Team Udayavani, Jul 9, 2019, 3:01 AM IST

ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಜುಲೈ 19 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರ ತೆರೆಗೆ ಬರುವ ಮುನ್ನವೇ ಚಿತ್ರತಂಡ ಮೊಗದಲ್ಲಿ ನಗುಮೂಡಿದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳು ಹಿಟ್‌ ಆಗಿರೋದು. ಹೌದು, “ಸಿಂಗ’ ಚಿತ್ರದ ಶ್ಯಾನೆ ಟಾಪ್‌ ಆಗವಳೆ …’ ಎಂಬ ಹಾಡನ್ನು ಖಂಡಿತಾ ನೀವು ಕೇಳಿರುತ್ತೀರಿ.

ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, . ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ಈ ಹಾಡಿಗೆ ಟಿಕ್‌ಟಾಕ್‌ ವಿಡಿಯೋ ಮಾಡಿದರೆ, 75 ಲಕ್ಷಕ್ಕೂ ಅಧಿಕ ಹಿಟ್ಸ್‌ ಯುಟ್ಯೂಬ್‌ನಲ್ಲಿ ದಾಖಲಾಗಿದೆ. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. ಅದು “ವಾಟ್‌ ಎ ಬ್ಯೂಟಿಫ‌ುಲ್‌ ಹುಡುಗಿ’. ನಟ ದರ್ಶನ್‌ ಈ ಹಾಡನ್ನು ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಹಿಟ್ಸ್‌ ಪಡೆಯುವ ಮೂಲಕ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವ ಭರವಸೆ ಮೂಡಿಸಿದೆ.

ಈ ಹಾಡನ್ನು ನವೀನ್‌ ಸಜ್ಜು ಹಾಗೂ ಮೇಘನಾ ರಾಜ್‌ ಹಾಡಿದ್ದಾರೆ. ಮೇಘನಾ ರಾಜ್‌ ಅವರು ಈ ಹಾಡು ಹಾಡಲು ಕಾರಣ ಚಿರಂಜೀವಿ ಸರ್ಜಾ. ಮೇಘನಾ ಅವರ ಗಾಯನವನ್ನು ಇಷ್ಟಪಟ್ಟಿರುವ ಚಿರಂಜೀವಿ, “ಸಿಂಗ’ ಚಿತ್ರದಲ್ಲೊಂದು ಹಾಡಿದೆ, ಒಮ್ಮೆ ನೀ ಹಾಡು. ಓಕೆಯಾದರೆ ಅದನ್ನು ಇಟ್ಟುಕೊಳ್ಳುವ’ ಎಂದರಂತೆ.

ಜೊತೆಗೆ ನಿರ್ಮಾಪಕರಲ್ಲೂ ಇದೇ ಮಾತನ್ನು ಹೇಳಿದರಂತೆ. ಅದರಂತೆ ಹಾಡಿದ ಮೇಘನಾ ಹಾಡಿದ್ದು, ಈಗ ಆ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೊಡ್ಡ ಗ್ಯಾಪ್‌ನ ನಂತರ ಉದಯ್‌ ಮೆಹ್ತಾ ಈ ಚಿತ್ರವನ್ನು ನಿರ್ಮಿಸಿದ್ದು, ವಿಜಯ್‌ ಕಿರಣ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಚಿರಂಜೀವಿ, ಸರ್ಜಾ, ಅದಿತಿ, ತಾರಾ, ಶಿವರಾಜ್‌ ಕೆ.ಆರ್‌.ಪೇಟೆ ಸೇರಿದಂತೆ ಅನೇಕರು ನಟಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ