ನೆಗೆಟಿವ್ ಶೇಡ್ ನಲ್ಲಿ ಪಾಸಿಟಿವ್ ಮೆಸೇಜ್: ‘ವೆಡ್ಡಿಂಗ್ ಗಿಫ್ಟ್’ ಮೇಲೆ ಸೋನು ಗೌಡ ನಿರೀಕ್ಷೆ
Team Udayavani, Jul 3, 2022, 3:22 PM IST
“ಇಲ್ಲಿಯವರೆಗೆ ನಾನು ಮಾಡಿದ ಬಹುತೇಕ ಪಾತ್ರಗಳು ಪಾಸಿಟಿವ್ ಶೇಡ್‌ನಲ್ಲಿದ್ದವು. ಬಹುತೇಕ ಈ ಎಲ್ಲ ಪಾತ್ರಗಳಿಗೂ ಫ್ರೆಂಡ್ಸ್, ಫ್ಯಾಮಿಲಿ ಮತ್ತು ಆಡಿಯನ್ಸ್‌ಗೆ ಒಂದೊಂದು ಥರದಲ್ಲಿ ಇಷ್ಟವಾಗಿದ್ದವು. ಎಲ್ಲ ಕಡೆಯಿಂದ ಒಳ್ಳೆಯ ಕಾಮೆಂಟ್ಸ್ ಬಂದಿದ್ದವು. ಆದ್ರೆ “ವೆಡ್ಡಿಂಗ್ ಗಿಫ್ಟ್’ ಸಿನಿಮಾದಲ್ಲಿ ಇದೇ ಫಸ್ಟ್‌ಟೈಮ್ ಕಂಪ್ಲೀಟ್ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಲೀಡ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾದ ಮೇಲೆ ಮತ್ತು ನನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ನಾನು ಕೂಡ ತುಂಬ ಎಕ್ಸೆ„ಟ್ ಆಗಿದ್ದೇನೆ’ – ಇದು ನಟಿ ಸೋನು ಗೌಡ ಮಾತು.
ಇದೇ ಜು. 8ರಂದು ಸೋನು ಗೌಡ ನಾಯಕಿಯಾಗಿ ಅಭಿನಯಿಸಿರುವ “ವೆಡ್ಡಿಂಗ್ ಗಿಫ್ಟ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಸೋನು ಗೌಡ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ “ವೆಡ್ಡಿಂಗ್ ಗಿಫ್ಟ್’ ಮೇಲೆ ಕೊಂಚ ಹೆಚ್ಚಾಗಿಯೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಸೋನು.
ಇದನ್ನೂ ಓದಿ:‘ತೂತು ಮಡಿಕೆ’ಯಲ್ಲಿ ಚಂದ್ರಕೀರ್ತಿ ಕನಸು
“ಪಾತ್ರ ನೆಗೆಟಿವ್ ಆಗಿದ್ದರೂ ಸಮಾಜಕ್ಕೊಂದು ಪಾಸಿಟಿವ್ ಮೆಸೇಜ್ ಕೊಡುವಂಥ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಮಹಿಳಾ ಪರವಾಗಿರುವ ಕಾನೂನುಗಳನ್ನು ಕೆಲವು ಮಹಿಳೆಯರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಮಹಿಳೆಯರಂತೆ, ಪುರುಷರೂ ಕೂಡ ಹೇಗೆ ಶೋಷಣೆಗೆ ಒಳಗಾಗುತ್ತಾರೆ ಅನ್ನೋದನ್ನ ಈ ಸಿನಿಮಾದಲ್ಲಿ ಹೇಳಲಾಗಿದೆ. ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಈ ಥರದ ಸಿನಿಮಾಗಳು ಬಂದಿದ್ದು, ತುಂಬ ವಿರಳ’ ಎನ್ನುತ್ತಾರೆ ಸೋನು ಗೌಡ.
“ಕೌಟುಂಬಿಕ ದೌರ್ಜನ್ಯ, ಐಪಿಸಿ 498ಎ ಮೊದಲಾದ ಅನೇಕ ಗಂಭೀರ ವಿಷಯಗಳನ್ನು ಸಿನಿಮಾದಲ್ಲಿ ನೈಜತೆಗೆ ಹತ್ತಿರವಾಗಿ ಸ್ಕ್ರೀನ್ ಮೇಲೆ ಹೇಳಲಾಗಿದೆ. ನನ್ನ ಪ್ರಕಾರ ಖಂಡಿತವಾಗಿಯೂ ಯೂಥ್ಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ನೋಡಲೇಬೇಕಾದ ಸಿನಿಮಾ ಇದು’ ಎನ್ನುವುದು ಸೋನು ಮಾತು.
ಇನ್ನು “ವಿಕ್ರಂ ಪ್ರಭು ಫಿಲಂಸ್’ ಬ್ಯಾನರ್‌ನಲ್ಲಿ ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸಿರುವ “ವೆಡ್ಡಿಂಗ್ ಗಿಫ್ಟ್’ ಸಿನಿಮಾದಲ್ಲಿ ಸೋನು ಗೌಡ ಅವರಿಗೆ ನಿಶಾನ್ ನಾಣಯ್ಯ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರೇಮಾ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ವೆಡ್ಡಿಂಗ್ ಗಿಫ್ಟ್’ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋದು ಮುಂದಿನ ವಾರದ ವೇಳೆಗೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ
3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ
ಹೊಸ ಸೇರ್ಪಡೆ
ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ
ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಓಡಾಟ; ವಿಡಿಯೋ ವೈರಲ್
ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್ಕೌಂಟರ್
ದೂರು ನೋಂದಾಯಿಸಲು ತಾಂತ್ರಿಕ ಅಡಚಣೆ
ವಿದ್ಯುಚ್ಛಕ್ತಿ ಕಾಯ್ದೆ-2022: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ