ದಭಾಂಗ್-3ಗೆ ಸುದೀಪ್ 80 ದಿನ ಡೇಟ್!
ಹೀರೋ ಎದುರು ಸರಿಸಮವಾಗಿರುವ ಪಾತ್ರ
Team Udayavani, Apr 3, 2019, 3:00 AM IST
ಸುದೀಪ್ ಸದ್ಯ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಇದರ ನಡುವೆಯೇ ತೆಲುಗು ಚಿತ್ರ “ಸೈರಾ’ ಮುಗಿಸಿದ್ದಾರೆ. ಇತ್ತ ಕಡೆ ಸಲ್ಮಾನ್ ಖಾನ್ ಅಭಿನಯದ “ದಭಾಂಗ್-3′ ಚಿತ್ರ ಮೊನ್ನೆಯಷ್ಟೇ ಮುಹೂರ್ತ ಆಚರಿಸಿಕೊಂಡಿದೆ. ಈ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಲ್ಲು ಎದುರು ಆರ್ಭಟಿಸಲಿರುವ ಪಾತ್ರ ಸುದೀಪ್ ಅವರದು.
ಹಾಗಾದರೆ ಸುದೀಪ್ ಪಾತ್ರ ದೊಡ್ಡದಾ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಹೌದು. ಚಿತ್ರದಲ್ಲಿ ಸುದೀಪ್ ಅವರಿಗೆ ಪ್ರಮುಖ ಪಾತ್ರ ನೀಡಿದ್ದಾರೆ ನಿರ್ದೇಶಕ ಪ್ರಭುದೇವ. ಹೀರೋ ವರ್ಸಸ್ ವಿಲನ್ ಎಂದು ಸಾಗುವ ಸಿನಿಮಾದಲ್ಲಿ ಸುದೀಪ್ ಸಿನಿಮಾದುದ್ದಕ್ಕೂ ಸಾಗಿಬರಲಿದ್ದಾರೆ. ಅದೇ ಕಾರಣದಿಂದ ಸುದೀಪ್ ಬರೋಬ್ಬರಿ 70ರಿಂದ 80 ದಿನಗಳ ಡೇಟ್ಸ್ ಅನ್ನು “ದಭಾಂಗ್-3’ಗೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡುವ ಸುದೀಪ್, “ಸಲ್ಮಾನ್ ಎದುರು ನಿಲ್ಲುವ ಪಾತ್ರ ಕೂಡಾ ಹೀರೋ ಇಮೇಜ್ ಹೊಂದಿರುವ ಪಾತ್ರವಾಗಿರಬೇಕೆಂದುಕೊಂಡೇ ನನ್ನ ಪಾತ್ರವನ್ನು ಬರೆಯಲಾಗಿದೆ. ನನ್ನ ಪಾತ್ರ ಕೂಡಾ ತುಂಬಾ ದೊಡ್ಡದಿದೆ. ಹೀರೋ ಎದುರೆದುರು ಸಾಗಿ ಬರುವ ಪಾತ್ರ. ಸುಮಾರು 70 ರಿಂದ 80 ದಿನ ನನಗೆ ಆ ಸಿನಿಮಾದಲ್ಲಿ ಕೆಲಸವಿದೆ’ ಎಂದು “ದಭಾಂಗ್-3′ ಬಗ್ಗೆ ಹೇಳುತ್ತಾರೆ ಸುದೀಪ್.
ಸುದೀಪ್ ಅವರು ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರೆಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆ ಪ್ರಾಜೆಕ್ಟ್ ಏನಾಯಿತೆಂದು ನೀವು ಕೇಳಬಹುದು. ಆ ಬಗ್ಗೆ ಮಾತನಾಡುವ ಸುದೀಪ್, “ಹಾಲಿವುಡ್ ಸಿನಿಮಾ ಮುಂದೆ ಹೋಗುತ್ತಲೇ ಇದೆ. ಎರಡು ಬಾರಿ ಡೇಟ್ ಮಿಸ್ ಆಯಿತು. ಒಮ್ಮೆ ನನ್ನಿಂದ, ಇನ್ನೊಮ್ಮೆ ಅವರಿಂದ. ಈಗ ಅಂತಿಮವಾಗಿ ಏಪ್ರಿಲ್ನಲ್ಲಿ ಏನೆಂದು ಗೊತ್ತಾಗುತ್ತದೆ’ ಎನ್ನುತ್ತಾರೆ ಸುದೀಪ್.
ಈ ನಡುವೆಯೇ ಸುದೀಪ್ ಅನೂಪ್ ಭಂಡಾರಿ ನಿರ್ದೇಶನದಲ್ಲಿ “ಬಿಲ್ಲಾರಂಗ ಭಾಷಾ’ ಸಿನಿಮಾ ಮಾಡಲಿದ್ದಾರೆಂಬುದು ನಿಮಗೆ ಗೊತ್ತೇ ಇದೆ. ಈ ಸಿನಿಮಾ ಒಪ್ಪಿಕೊಂಡ ಬಗ್ಗೆ ಮಾತನಾಡುವ ಸುದೀಪ್, “ಅನೂಪ್ ಭಂಡಾರಿಯ “ರಾಜರಥ’ ನೋಡಿದೆ. ಅದರಲ್ಲಿನ ಅವರ ಕೆಲಸ ಇಷ್ಟವಾಯಿತು. ನಿರ್ದೇಶಕರಾಗಿ ಅವರು ಸೋತಿಲ್ಲ. ಈಗಾಗಲೇ ಅವರ ಎರಡು ಕಥೆ ಕೇಳಿದ್ದೇನೆ. ಅದರಲ್ಲೊಂದು “ಬಿಲ್ಲಾರಂಗಭಾಷ’. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತಯಾರಾಗುತ್ತಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ