ಮದ್ವೆ ಹಾಡು ಹೊರಬಂತು

ಸೋಮಾರಿ ಹುಡುಗನಿಗೆ ಶಾದಿ ಭಾಗ್ಯ!

Team Udayavani, Jan 27, 2020, 7:03 AM IST

ಇತ್ತೀಚೆಗೆ ಬಿಡುಗಡೆಯಾಗಿರುವ ತನ್ನ ಪೋಸ್ಟರ್‌, ಟೀಸರ್‌ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿರುವ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದ ಹಾಡುಗಳು ಇತ್ತೀಚೆಗೆ ಹೊರಬಂದಿವೆ. ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಉತ್ತರ ಕರ್ನಾಟಕದವರೇ ಆಗಿರುವ ಗುರುರಾಜ ಹೊಸಕೋಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಚಿತ್ರರಂಗದ ಹಲವು ಗಣ್ಯರು, ಚಿತ್ರದ ಕಲಾವಿದರು, ತಂತ್ರಜ್ಞರು ಮೊದಲಾದವರು ಹಾಜರಿದ್ದರು. ಇನ್ನು ಬಿಡುಗಡೆಯಾಗಿರುವ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದಲ್ಲಿ ಬರೋಬ್ಬರಿ ಹನ್ನೊಂದು ಹಾಡುಗಳಿವೆ. ಚಿತ್ರದ ಹಾಡುಗಳಿಗೆ ಅವಿನಾಶ್‌ ಬಾಸೂತ್ಕರ್‌ ಸಂಗೀತ ಸಂಯೋಜಿಸಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗೋಪಿ ಕೆರೂರು, “ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಲಾಗಿದೆ.

ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ಶೀಘ್ರದಲ್ಲಿಯೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ’ ಎಂದು ವಿವರಣೆ ನೀಡಿದರು. “ಎಸ್‌.ಎಲ್.ಡಿ. ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಉದ್ಯಮಿ ಶಿವರಾಜ್‌ ಲಕ್ಷಣರಾವ್‌ ದೇಸಾಯಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

“ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರದಲ್ಲಿ ನಾಯಕನಾಗಿ ಶಿವ ಚಂದ್ರಕುಮಾರ್‌, ನಾಯಕಿಯಾಗಿ ಆರಾದ್ಯ, ಉಳಿದಂತೆ ರಮೇಶ್‌ ಭಟ್‌, ಅರುಣಾ ಬಾಲರಾಜ್‌, ಕಮಲ ದೇವಾಂಗ, ಚಿತ್ಕಲಾ ಬಿರಾದಾರ್‌, ಕೃಷ್ಣಮೂರ್ತಿ ಕವತ್ತಾರ್‌, ಸದಾನಂದ ಕಾಳಿ, ಚಕ್ರವರ್ತಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಯಕ ಶಿವ ಚಂದ್ರಕುಮಾರ್‌ “ನನ್ನ ಭವಿಷ್ಯ ರೂಪಿಸುವ ಸಿನಿಮಾ ಇದಾಗುತ್ತೆ ಎಂಬ ನಂಬಿಕೆ ಇದೆ.

ಚಿತ್ರದಲ್ಲಿ ನಾನೊಬ್ಬ ಪಡ್ಡೆ ಹುಡುಗ. ಸದಾ ಎಲ್ಲರಿಂದಲೂ ಬೈಯಿಸಿಕೊಳ್ಳುವ ಪಾತ್ರವಾಗಿದ್ದು, ಮದುವೆ ನಂತರ ಸರಿಹೋಗ್ತಾನಾ ಇಲ್ಲವಾ ಅನ್ನೋದೇ ಕಥೆ’ ಎಂದರು. “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣ, ವೆಂಕಿ ಸಂಕಲನ ಕಾರ್ಯವಿದೆ. ಸದ್ಯ ಆಡಿಯೋ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ

  • ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ...

  • ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...

  • ವಿಶೇಷ ವರದಿ-ಮಹಾನಗರ: ಕೆಲವು ದಿನಗಳಿಂದ ನಗರದಲ್ಲಿ ಅಬ್ಟಾ ... ಏನ್‌ ಸೆಕೇನಪ್ಪಾ ! ಎಂದು ಹೇಳಿಕೊಂಡವರೇ ಹೆಚ್ಚು. ಏಕೆಂದರೆ ಕೆಲವುದಿನಗಳಿಗೆ ಹೋಲಿಕೆ ಮಾಡಿದರೆ...

  • ಬೋಂಡಾ, ಬಜ್ಜಿ, ಪಕೋಡವನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಡ್ತಾರೆ. ಆದ್ರೆ, ಕೆಲವರು ತಿಂಡಿಗೆ ಬಳಸುವ ಪದಾರ್ಥ, ಕೈ ರುಚಿ, ಶುಚಿತ್ವ, ಹೀಗೆ... ಹಲವು ಕಾರಣಗಳಿಂದ ಗ್ರಾಹಕರಿಂದ...

  • ಜೇನು ಕುಟುಕಿದರೆ ಮಾತ್ರ ಉರಿ, ಕೃಷಿಕರಿಗೆ ಸಿಹಿಯೇ. ಜೇನು ಕೃಷಿಯ ಹೆಗ್ಗಳಿಕೆ ಎಂದರೆ, ಸ್ವಂತ ಜಮೀನು ಹೊಂದಿರಬೇಕಾದ ಅಥವಾ ಹೆಚ್ಚಿನ ಬಂಡವಾಳ ಹೂಡಬೇಕಾದ ಅಗತ್ಯವಿಲ್ಲ....