ಪ್ರಜ್ವಲ್‌ ಕೈಯಲ್ಲಿ ಮೂರು ಮತ್ತೊಂದು ಚಿತ್ರ

ಪಿ.ಸಿ.ಶೇಖರ್‌ ಹೊಸ ಸಿನಿಮಾಕ್ಕೆ ಗ್ರೀನ್‌ಸಿಗ್ನಲ್‌

Team Udayavani, Apr 15, 2019, 3:00 AM IST

ಪ್ರಜ್ವಲ್‌ ದೇವರಾಜ್‌ ಇದೀಗ ಒಂದು ದಶಕ ಮುಗಿಸಿ ಮುನ್ನುಗ್ಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹನ್ನೆರೆಡುವ ವರ್ಷಗಳು ಕಳೆದಿವೆ. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ಮೂರು ಮತ್ತೊಂದು ಸಿನಿಮಾ ಇದೆ.

“ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ ಮ್ಯಾನ್‌’ ಮತ್ತು “ಅರ್ಜುನ್‌ ಗೌಡ’ ಚಿತ್ರಗಳು ಕೈಯಲ್ಲಿದ್ದರೆ, ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುವ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರಕಿನ್ನೂ ನಾಮಕರಣ ಮಾಡಿಲ್ಲ. ಆದರೆ, ನಿರ್ದೇಶಕ ಪಿ.ಸಿ.ಶೇಖರ್‌ ಆ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ಪ್ರಜ್ವಲ್‌ ಮಾತು.

ಈ ಹಿಂದೆ ಕೂಡ ಪ್ರಜ್ವಲ್‌ ದೇವರಾಜ್‌ ಅವರು ಪಿ.ಸಿ.ಶೇಖರ್‌ ನಿರ್ದೇಶನದ “ಅರ್ಜುನ’ ಚಿತ್ರದಲ್ಲಿ ನಟಿಸಿದ್ದರು. ಅದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಆ ಚಿತ್ರದಲ್ಲಿ ಪ್ರಜ್ವಲ್‌ ತಂದೆ ದೇವರಾಜ್‌ ಅವರು ಸಹ ನಟಿಸಿದ್ದರು. ಅದಾದ ಬಳಿಕ ಪ್ರಜ್ವಲ್‌ ಪುನಃ ನಿರ್ದೇಶಕ ಪಿ.ಸಿ.ಶೇಖರ್‌ ಅವರೊಂದಿಗೆ ಹೊಸ ಚಿತ್ರದಲ್ಲಿ ನಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಆ ಚಿತ್ರದ ಒನ್‌ಲೈನ್‌ ಕುರಿತು ಹೇಳುವ ಪ್ರಜ್ವಲ್‌ ದೇವರಾಜ್‌, ಅದೊಂದು ಮಾಫಿಯಾ ಬ್ಯಾಕ್‌ಡ್ರಾಪ್‌ ಕುರಿತಾದ ಚಿತ್ರ. ಹೊಸ ಶೇಡ್‌ ಇರುವಂತಹ ಪಾತ್ರವಿದೆ. ಒಂದು ರೀತಿ ರೌಡಿಸಂ ವಿಷಯದ ಸ್ಪರ್ಶವಿದೆ. ಈ ಹಿಂದೆ ನಾನು ಕೂಡ ರೌಡಿಸಂ ವಿಷಯ ಇರುವಂತಹ “ಗೆಳೆಯ’ ಮತ್ತು “ಗುಲಾಮ’ ಚಿತ್ರಗಳಲ್ಲೂ ನಟಿಸಿದ್ದೇನೆ.

ಈಗ ಪಿ.ಸಿ.ಶೇಖರ್‌ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದ್ದರೂ, ಆ ಚಿತ್ರಕ್ಕಿನ್ನೂ ಹೆಸರು ಇಟ್ಟಿಲ್ಲ. ಕಲಾವಿದರಾಗಲಿ, ಉಳಿದ ತಾಂತ್ರಿಕ ವರ್ಗವಾಗಲಿ ಆಯ್ಕೆ ಅಂತಿಮವಾಗಿಲ್ಲ. ಸದ್ಯಕ್ಕೆ “ಇನ್ಸ್‌ಪೆಕ್ಟರ್‌ ವಿಕ್ರಂ’ ಮತ್ತು “ಜಂಟಲ್‌ಮ್ಯಾನ್‌’ ಚಿತ್ರಗಳು ಮುಗಿಯುವ ಹಂತ ತಲುಪಿವೆ. “ಅರ್ಜುನ್‌ ಗೌಡ’ ಚಿತ್ರಕ್ಕೆ ಸ್ವಲ್ಪ ಕೆಲಸವಿದೆ.

“ಇನ್ಸ್‌ಪೆಕ್ಟರ್‌ ವಿಕ್ರಂ’ ನನ್ನ 30 ನೇ ಸಿನಿಮಾ ಎಂಬುದು ವಿಶೇಷ’ ಎನ್ನುತ್ತಾರೆ ಪ್ರಜ್ವಲ್‌ ದೇವರಾಜ್‌. ನಿರ್ದೇಶಕ ಪಿ.ಸಿ.ಶೇಖರ್‌ “ಟೆರರಿಸ್ಟ್‌’ ಬಳಿಕ ಎರಡು ತಿಂಗಳು ಗ್ಯಾಪ್‌ ಪಡೆದಿದ್ದರು. ಈಗ ಅವರು ಪ್ರಜ್ವಲ್‌ ಚಿತ್ರಕ್ಕೆ ತಯಾರು ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ 1 ರಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ.

ಈ ಮಧ್ಯೆ ಪಿ.ಸಿ.ಶೇಖರ್‌ ಅವರು “ಆದಿನಗಳು’ ಚೇತನ್‌ ಅವರಿಗೊಂದು ಚಿತ್ರ ಮಾಡಬೇಕಿತ್ತು. ಆ ಚಿತ್ರ ಸಂಪೂರ್ಣ ವಿದೇಶದಲ್ಲೇ ನಡೆಯಲಿದೆ. ಅದಕ್ಕೆ ವೀಸಾ ಲೇಟ್‌ ಆದ ಕಾರಣ, ಆ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕೆ ಇಟ್ಟು ಹೊಸ ಚಿತ್ರದತ್ತ ತಲೆಕೆಡಿಸಿಕೊಂಡಿದ್ದಾರೆ. ಈ ಮಧ್ಯೆ ಅವರು ಮೇ 1 ರಂದು ಹೊಸ ಚಿತ್ರ ಶುರು ಮಾಡುವ ಯೋಚನೆಯಲ್ಲೂ ಇದ್ದಾರೆ.

ಆದರೆ, ಯಾವ ಚಿತ್ರ ಯಾವಾಗ ನಡೆಯುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಇವುಗಳ ಜೊತೆಯಲ್ಲೇ ಪಿ.ಸಿ.ಶೇಖರ್‌ ಅವರು ಗಣೇಶ್‌ ಜೊತೆಗೊಂದು ಚಿತ್ರ ಮಾಡಲಿದ್ದಾರಂತೆ. ಈ ಹಿಂದೆ ಗಣೇಶ್‌ ಜೊತೆ “ರೋಮಿಯೋ’ ನಿರ್ದೇಶಿಸಿದ್ದ ಪಿ.ಸಿ.ಶೇಖರ್‌ ಇದೀಗ ಗಣೇಶ್‌ ಕಾಂಬಿನೇಷನ್‌ನಲ್ಲೂ ಇನ್ನೊಂದು ಹೊಸ ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ.

ಅತ್ತ ಶಿವರಾಜಕುಮಾರ್‌ ಅವರೊಂದಿಗೂ ಹೊಸದೊಂದು ಚಿತ್ರ ಮಾಡುವ ಉತ್ಸಾಹದಲ್ಲಿದ್ದಾರೆ. ಅದಾಗಲೇ ಎರಡು ಸಲ ಮಾತುಕತೆಯೂ ನಡೆದಿದೆ. ಅಂತಿಮವಾಗಿ, ಯಾವ ಚಿತ್ರ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಇನ್ನಷ್ಟು ದಿನ ಕಾಯಲೇಬೇಕು.


ಈ ವಿಭಾಗದಿಂದ ಇನ್ನಷ್ಟು

 • ಮದುವೆ ಬಳಿಕ ಜಾಲಿಯಾಗಿ ಸುತ್ತಾಡಿಕೊಂಡಿದ್ದ ದಿಗಂತ್‌ ಈಗ ಮತ್ತೆ ಸಿನಿಮಾ ಮೂಡ್‌ಗೆ ಬಂದಿದ್ದಾರೆ. ಅದು ಹೊಸ ಸಿನಿಮಾ ಒಪ್ಪಿಕೊಳ್ಳುವ ಮೂಲಕ. ಹೌದು, ದಿಗಂತ್‌...

 • ನಟ ರಮೇಶ್‌ ಅರವಿಂದ್‌ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಆಗಮಿಸುತ್ತಿದ್ದಾರೆ. ಎಂದಿನಂತೆ ಅವರು "ವೀಕೆಂಡ್‌'ನಲ್ಲೇ ಸಿಗಲಿದ್ದಾರೆ ಎಂಬುದು ವಿಶೇಷ. ಹೌದು, ಜೀ...

 • ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅದೆಷ್ಟೋ ಮಂದಿ ನವ ಯುವಕ-ಯುವತಿಯರಿಗೆ ಮೊದಲ ಮತದಾನದ ಚುನಾವಣೆಯಿದು. ಮೊದಲ ಮತದಾನದ ಬಗ್ಗೆ ಅವರಿಗೂ...

 • ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಉಪೆಂದ್ರ ಅಭಿನಯದ "ಐ ಲವ್‌ ಯು' ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವುದರಿಂದ,...

 • ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಪಾರು' ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ "ಪಾರು'ಗೆ ಮದುವೆ ಸಂಭ್ರಮ....

ಹೊಸ ಸೇರ್ಪಡೆ

 • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

 • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

 • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

 • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

 • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

 • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...