ಮತ್ತೆ ಬಂದ ಉಮಾಶ್ರೀ

ನಟನೆ ನನ್ನುಸಿರು- ಪುಟ್ಮಲ್ಲಿ ಮಾತು

Team Udayavani, Dec 21, 2019, 7:01 AM IST

Umasri-(1)

ಹಿರಿಯ ನಟಿ ಉಮಾಶ್ರೀ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಇಷ್ಟು ದಿನ ರಾಜಕೀಯ ರಂಗದಲ್ಲಿ ಬಿಝಿಯಾಗಿದ್ದ ಅವರೀಗ ನಟನೆಯತ್ತ ವಾಲಿದ್ದಾರೆ. ಬಹಳ ಗ್ಯಾಪ್‌ ಬಳಿಕ ಉಮಾಶ್ರೀ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. “ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯಲ್ಲಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಉಮಾಶ್ರೀ, ಈಗ ಬರುತ್ತಿರುವ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ರಂಗಭೂಮಿಯಲ್ಲೂ ಸಕ್ರಿಯರಾಗುತ್ತಿದ್ದು, ಏಕಪಾತ್ರಾಭಿನಯ ಇರುವ ನಾಟಕವೊಂದರಲ್ಲಿ ನಟಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅದಕ್ಕಾಗಿಯೇ ಸ್ಕ್ರಿಪ್ಟ್ ಕೂಡ ನಡೆಯುತ್ತಿದೆ ಎಂಬುದು ಅವರ ಮಾತು. ರಾಜಕೀಯದಲ್ಲಿ ಬಿಝಿಯಾಗಿದ್ದ ಅವರಿಗೆ ನಟಿಸುವ ಅವಕಾಶ ಬಂದಿದ್ದರೂ, ನಿರಾಕರಿಸಿದ್ದರು. ಕಾರಣ, ಸಿನಿಮಾ ಒಪ್ಪಿಕೊಂಡು ಹೇಳಿದ ಸಮಯಕ್ಕೆ ಹೋಗದಿದ್ದರೆ, ನಿರ್ಮಾಣ ಸಂಸ್ಥೆಗೆ ಸಮಸ್ಯೆಯಾಗುತ್ತೆ, ಉಳಿದ ಕಲಾವಿದರಿಗೂ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಅವರು ಒಪ್ಪಿರಲಿಲ್ಲವಂತೆ. ಈಗ ನಟನೆಯತ್ತ ತಮ್ಮ ಚಿತ್ತ ಹರಿಸಿದ್ದು, ಕಿರುತೆರೆ ಮೂಲಕ ನಟನೆ ಯಾನ ಶುರು ಮಾಡಿದ್ದಾರೆ.

“ನಟನೆ ನನ್ನುಸಿರು’ ಒಳ್ಳೆಯ ಪಾತ್ರ, ಕಥೆ ಸಿಕ್ಕರೆ, ಹಿರಿತೆರೆ, ಕಿರುತೆರೆ ಯಾವುದೇ ಇರಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ರಾಜಕೀಯ ರಂಗದಲ್ಲಿರುವಾಗಲೇ ಒಂದಷ್ಟು ಅವಕಾಶ ಬಂದಿದ್ದುಂಟು. ಆದರೆ, ಸರ್ಕಾರದ ಕೆಲಸದ ಒತ್ತಡದಿಂದಾಗಿ ನಟಿಸಲು ಸಾಧ್ಯವಾಗಿರಲಿಲ್ಲವಂತೆ. ಈ ಹಿಂದೆ ಕೂಡ ಉಮಾಶ್ರೀ ಅವರು, “ಅಮ್ಮ’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಪುನಃ ಕಿರುತರೆ ಪ್ರವೇಶಿಸಿದ್ದಾರೆ. ಬೇರೆ ಧಾರಾವಾಹಿಯಲ್ಲಿ ಅವಕಾಶ ಬಂದರೂ, ಸಮಯ ಹೊಂದಿಸಿಕೊಂಡು ಕೆಲಸ ಮಾಡುವ ನಿರ್ಧಾರ ಮಾಡಿದ್ದಾರೆ.

ಇನ್ನು, ಇದರೊಂದಿಗೆ ವಾಹಿನಿಯೊಂದರಲ್ಲಿ ಮಕ್ಕಳ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಷ್ಟು ದಿನ ರಾಜಕೀಯದ ಕೆಲಸಗಳ ನಡುವೆ ಅವರು ಸಿನಿಮಾ, ರಂಗಭೂಮಿಯಿಂದ ತುಸು ದೂರವಿದ್ದರು. ಅಷ್ಟೇ ಅಲ್ಲ, ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆಗೂ ಕಾಲ ಕಳೆಯಲು ಸಮಯ ಸಿಕ್ಕಿರಲಿಲ್ಲ. ಈಗ ಅವರು, ನಟನೆಯ ಜೊತೆ ಜೊತೆಗೆ ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರಂತೆ. ಅದೇನೆ ಇರಲಿ, ಪುಟ್ಮಲ್ಲಿ ಎಂದೇ ಕರೆಸಿಕೊಳ್ಳುವ ಉಮಾಶ್ರೀ ಅವರೀಗ ನಟನೆಯತ್ತ ಗಮನಹರಿಸಿರುವುದು ಚಿತ್ರರಂಗದ ಮಂದಿ ಮೊಗದಲ್ಲಂತೂ ಖುಷಿ ತಂದಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.