ವರ್ಲ್ಡ್ ಪ್ರೀಮಿಯರ್ ಕಾಣಲಿದೆ ಹಂಬಲ್ ಪೊಲಿಟೀಶಿಯನ್
Team Udayavani, Nov 21, 2017, 10:45 AM IST
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ದಾನಿಶ್ ಸೇಠ್ ಅಭಿನಯದ “ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಇಷ್ಟರಲ್ಲಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಸ್ವಲ್ಪ ನಿಧಾನವಾಗಿದೆ. ಈಗಿನ ಮಾಹಿತಿಯಂತೆ ಚಿತ್ರವು ಡಿಸೆಂಬರ್ನ ಕೊನೆಯ ಎರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ. ಅಂದಹಾಗೆ, ವಿಶೇಷವೇನು ಗೊತ್ತಾ? ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗುತ್ತಿರುವುದು.
ಕಳೆದ ವರ್ಷ ಬಿಡುಗಡೆಯಾದ “ಯೂ ಟರ್ನ್’ ಚಿತ್ರವು ಅಮೇರಿಕಾದಲ್ಲಿ ವರ್ಲ್ಡ್ ಪ್ರೀಮಿಯರ್ ಆಗಿತ್ತು. ಈ ವರ್ಷ ಬಿಡುಗಡೆಯಾದ “ಒಂದು ಮೊಟ್ಟೆಯ ಕಥೆ’ ಮತ್ತು “ದಯವಿಟ್ಟು ಗಮನಿಸಿ’ ಚಿತ್ರಗಳು ಕ್ರಮವಾಗಿ ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ವರ್ಲ್ಡ್ ಪ್ರೀಮಿಯರ್ ಆಗಿತ್ತು. ಈಗ “ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರವು ಅಮೇರಿಕಾ ಮತ್ತು ಯೂರೋಪ್ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಈ ಪೈಕಿ ಡಿಸೆಂಬರ್ 15ರಂದು ಚಿತ್ರ ಅಮೇರಿಕಾದಲ್ಲಿ ಬಿಡುಗಡೆಯಾಗುತ್ತಿದೆ. ಅದಾಗಿ ಕೆಲವು ದಿನಗಳಲ್ಲಿ ಚಿತ್ರವು ಯೂರೋಪ್ನಲ್ಲೂ ಪ್ರದರ್ಶನವಾಗಲಿದೆ. ಅದಾಗಿ ಕೆಲವು ದಿನಗಳ ನಂತರ, ಚಿತ್ರವು ರಾಜಾದ್ಯಂತ ಬಿಡುಗಡೆಯಾಗಲಿದೆ. “ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರದಲ್ಲಿ ದಾನಿಶ್ ಸೇಠ್, ನೋಗರಾಜ್ ಆಗಿ ಕಾಣಿಸಿಕೊಂಡಿದ್ದಾರೆ.
ಮಿಕ್ಕಂತೆ ರೋಜರ್ ನಾರಾಯಣ್, ಶ್ರುತಿ ಹರಿಹರನ್, ವಿಜಯ್ ಚೆಂಡೂರು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಸುಮಾರು ನಾಲ್ಕು ನಿಮಿಷಗಳ ಕಾಲ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ರಕ್ಷಿತ್ ಶೆಟ್ಟಿ ಜೊತೆಯಾಗಿ ನಿರ್ಮಿಸುತ್ತಿದ್ದು, ಸಾದ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ