“ಟಿಪ್ಪು ಕುರಿತ ಸಿನಿಮಾ ಮಾಡುವುದಿಲ್ಲ..” ಎಂದ ನಿರ್ಮಾಪಕ; ಎರಡೇ ತಿಂಗಳಿನಲ್ಲಿ ನಿಂತ ಸಿನಿಮಾ

ನನ್ನ ಕುಟುಂಬವನ್ನು ನಿಂದಿಸುವುದನ್ನು ತಡೆಯಿರಿ...

Team Udayavani, Jul 24, 2023, 5:05 PM IST

tdy-18

ಮುಂಬಯಿ: ಇದೇ ವರ್ಷದ ಮೇ ತಿಂಗಳಿನಲ್ಲಿ ನಿರ್ಮಾಪಕ ಸಂದೀಪ್‌ ಸಿಂಗ್‌ ʼಟಿಪ್ಪು ಸುಲ್ತಾನ್‌ʼ ಕುರಿತಂತೆ ಸಿನಿಮಾವನ್ನು ಮಾಡವುದಾಗಿ ಘೋಷಿಸಿದ್ದರು. ಇದೀಗ ಎರಡು ತಿಂಗಳ ಬಳಿಕ ಸಿನಿಮಾ ಮಾಡುವುದಿಲ್ಲ ಎಂದು ಸಂದೀಪ್‌ ಸಿಂಗ್‌ ಅವರು ಹೇಳಿದ್ದಾರೆ.

ಮೇ3 ರಂದು ʼವೀರ ಸಾವರ್ಕರ್ʼ ಹಾಗೂ ʼಅಟಲ್‌ʼ, ʼಬಾಲ್  ಶಿವಾಜಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಸಂದೀಪ್‌ ಶರ್ಮಾ, ರಶ್ಮಿ‌, ಇರೋಸ್‌ ಇಂಟರ್‌ ನ್ಯಾಷನಲ್‌ ನೊಂದಿಗೆ ಸೇರಿಕೊಂಡು ʼಟಿಪ್ಪುʼ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.

ಈ ಸಂಬಂಧ ಮೋಷನ್‌ ಪಿಕ್ಚರ್‌ ರಿಲೀಸ್‌ ಮಾಡಲಾಗಿತ್ತು. ಈತ ಮತಾಂಧ ಸುಲ್ತಾನ್‌ ಎಂದು ʼಟಿಪ್ಪುʼವಿನ ಮುಖಕ್ಕೆ ಮಸಿ ಬಳಿದಿರುವ ಪೋಸ್ಟರ್‌ ನ್ನು ರಿಲೀಸ್‌ ಮಾಡಲಾಗಿತ್ತು.8 ಸಾವಿರ ದೇವಸ್ಥಾನ, 27 ಚರ್ಚ್‌ ಗಳನ್ನು ನಾಶ ಮಾಡಲಾಗಿದೆ. 4 ಮಿಲಿಯನ್‌ ಹಿಂದೂಗಳನ್ನು ಮತಾಂತರ ಮಾಡಿ, ಬಲವಂತವಾಗಿ ಗೋಮಾಂಸವನ್ನು ಸೇವಿಸಲು ಒತ್ತಾಯಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಹಾಕಿ ಶಿಕ್ಷಿಸಿದ್ದಾರೆ. 2000 ಕ್ಕೂ ಅಧಿಕ ಬ್ರಾಹ್ಮಣ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ. ಆತನ ದುರಾಡಳಿತ 1783 ರಿಂದ ಆರಂಭವಾಯಿತೆಂದು ಮೋಷನ್‌ ಪಿಕ್ಚರ್‌ ನಲ್ಲಿ ಹೇಳಲಾಗಿತ್ತು.

ಈ ಸಿನಿಮಾ ಘೋಷಣೆ ಮಾಡಿದ ಬಳಿಕ ಹತ್ತಾರು ಟೀಕೆಗಳು ಕೇಳಿ ಬಂದಿತ್ತು. ಇದೀಗ ಸಿನಿಮಾ ಘೋಷಣೆಯಾದ ಎರಡೇ ತಿಂಗಳಿಗೆ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಎಂದು ಸಂದೀಪ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್‌ ʼಜವಾನ್‌ʼ ಜೊತೆ ಸಲ್ಮಾನ್‌ ʼಟೈಗರ್-3‌ʼ ಟೀಸರ್‌ ರಿಲೀಸ್‌? ಥ್ರಿಲ್‌ ಆದ ಫ್ಯಾನ್ಸ್

“ಹಜರತ್ ಟಿಪ್ಪು ಸುಲ್ತಾನ್ ಕುರಿತ ಚಿತ್ರ ನಿರ್ಮಾಣವಾಗುವುದಿಲ್ಲ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗೆ ಬೆದರಿಕೆ ಅಥವಾ ನಿಂದನೆ ಮಾಡುವುದನ್ನು ತಡೆಯಿರಿ ಎಂದು ಈ ಮೂಲಕ ನಾನು ನನ್ನ ಸಹೋದರ- ಸಹೋದರಿಯರಲ್ಲಿ ಕೇಳಿಕೊಳ್ಳುತ್ತೇನೆ.ನಾನು ಉದ್ದೇಶಪೂರ್ವಕವಾಗಿ  ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹೀಗೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಎಲ್ಲಾ ನಂಬಿಕೆಗಳನ್ನು ಗೌರವಿಸುತ್ತೇನೆ. ಭಾರತೀಯರಾಗಿ ನಾವು ಎಂದೆಂದಿಗೂ ಒಂದಾಗಿರೋಣ ಮತ್ತು ಯಾವಾಗಲೂ ಪರಸ್ಪರ ಗೌರವವನ್ನು ನೀಡೋಣ” ಎಂದು ಟ್ವೀಟ್‌ ಮಾಡಿದ್ದಾರೆ.

ಸಿನಿಮಾ ಘೋಷಣೆ ಮಾಡುವ ವೇಳೆ  “ಟಿಪ್ಪು ಸುಲ್ತಾನನ ನಿಜವಾದ ಸತ್ಯವನ್ನು ತಿಳಿದು ನಾನು ಬೆಚ್ಚಿಬಿದ್ದೆ. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ತೋರಿಸಿರುವಂತೆ ಅವನನ್ನು ಧೈರ್ಯಶಾಲಿ ಎಂದು ನಂಬುವಂತೆ ನಮ್ಮ ಬ್ರೈನ್‌ ವಾಶ್‌ ಮಾಡಲಾಗಿದೆ. ಅವನ ದುರುದ್ದೇಶ ಯಾರಿಗೂ ತಿಳಿದಿಲ್ಲ. ಭವಿಷ್ಯದ ಪೀಳಿಗೆಗೆ ಅವರ ಕರಾಳ ಮುಖವನ್ನು ಬಹಿರಂಗಪಡಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದರು.

ಸದ್ಯ ಪಂಕಜ್ ತ್ರಿಪಾಠಿ ನಾಯಕನಾಗಿ ನಟಿಸುತ್ತಿರುವ ‘ಮೇನ್ ಅಟಲ್ ಹೂನ್’ ಸಿನಿಮಾದ ಕೆಲಸದಲ್ಲಿ ಸಂದೀಪ್‌ ಸಿಂಗ್‌ ಬ್ಯಸಿಯಾಗಿದ್ದಾರೆ.

ಟಾಪ್ ನ್ಯೂಸ್

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.