Leo: ಸಿಕ್ಕಾಪಟ್ಟೆ ಹೈಪ್ ಹೆಚ್ಚಿಸಿದ ‘ಲಿಯೋ’ ಬಗ್ಗೆ ಇದೆಂಥ ಅಭಿಪ್ರಾಯ.. ಎಲ್ಲೆಡೆ ಒಂದೇ ಮಾತು

ಇದರ ಮುಂದೆ 'ಜೈಲರ್' ಏನೂ ಇಲ್ಲ ಎಂದ ಅಭಿಮಾನಿ

Team Udayavani, Oct 19, 2023, 10:51 AM IST

TDY-1

ಚೆನ್ನೈ: ದಳಪತಿ ವಿಜಯ್ ಅವರ ‘ಲಿಯೋ’ ಸಿನಿಮಾ ಅದ್ಧೂರಿಯಾಗಿ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಅಭಿಮಾನಿಗಳು ಥಿಯೇಟರ್ ಮುಂದೆ ಕುಣಿದು, ಕುಪ್ಪಳಿಸಿ ‘ಲಿಯೋದಾಸ್’ ಗೆ ಜೈಕಾರ ಹಾಕುತ್ತಿದ್ದಾರೆ.

‘ಮಾಸ್ಟರ್’ ಬಳಿಕ ಲೋಕೇಶ್ ಕನಕರಾಜ್ ಮತ್ತೆ ವಿಜಯ್ ಅವರೊಂದಿಗೆ ಸಿನಿಮಾ ಮಾಡಿದ್ದು, ಮಾಸ್ – ಕ್ಲಾಸ್ ‘ಲಿಯೋ’ ನೋಡಲು ಸಿನಿಮಾ ಮಂದಿರಕ್ಕೆ ಜನ ಹರಿದು ಬರುತ್ತಿದ್ದಾರೆ.

ನಿರೀಕ್ಷೆಯಂತೆ ಬೆಳಗಿನ ಶೋಗಳು ಹೌಸ್ ಫುಲ್ ಆಗಿದೆ. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ತನ್ನ ಅಭಿಪ್ರಾಯವನ್ನು ಸೋಶಿಯಲ್ ‌ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಬನ್ನಿ ‘ಲಿಯೋ’ ಟ್ವಿಟರ್ ರಿವ್ಯೂಯತ್ತ ಒಂದು ನೋಟ ಹಾಕಿ ಬರೋಣ..

“ಲಿಯೋ”ಗೆ 10 ಕ್ಕೆ 10 ಅಂಕ ನೀಡುತ್ತೇನೆ. ಇದೊಂದು ಅದ್ಭುತ ಸಿನಿಮಾ. ವಿಜಯ್ ತನ್ನ ವೃತ್ತಿ ಜೀವನದಲ್ಲಿ ಹೆಮ್ಮೆಪಡುವಂಥ ಪಾತ್ರವನ್ನು ಮಾಡಿದ್ದಾರೆ. ಸಿನಿಮಾದ ಯಾವ ದೃಶ್ಯವನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿಯೊಂದು ದೃಶ್ಯವೂ ಮಹತ್ವದಾಗಿದೆ.‌ಇದೊಂದು ಟ್ರೆಂಡ್ ಸೆಟ್ಟರ್ ಹಾಗೂ ಸೀಟಿನ ತುದಿಯಲ್ಲಿ ಕೂರಿಸಿಕೊಂಡು ಹೋಗುವ ಸಿನಿಮಾ” ಎಂದು ಒಬ್ಬರು ತನ್ನ ಅಭಿಪ್ರಾಯವನ್ನು ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ.

‘ಜೈಲರ್’ ನಲ್ಲಿ ಕೇವಲ 5-6 ಆ್ಯಕ್ಷನ್ ಸೀನ್ ಗಳಿವೆ. ಆದರೆ ‘ಲಿಯೋ’ ಸಂಪೂರ್ಣ ಮಾಸ್ ನಿಂದಲೇ ಕೂಡಿದೆ. ಇದರ ಮುಂದೆ ‘ಜೈಲರ್’ ಏನೂ ಇಲ್ಲ” ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಇದೊಂದು  ಇಂಡಸ್ಟ್ರಿ ಹಿಟ್” ಸಿನಿಮಾವೆಂದು ಒಬ್ಬರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಸಂಜಯ್ ದತ್, ಅರ್ಜುನ್ ಸರ್ಜಾ ಅವರ ಮಾಸ್ ಲುಕ್ ಹಾಗೂ ಅನಿರುದ್ದ್ ಅವರ ಮ್ಯೂಸಿಕ್ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆದರೆ ಸಿನಿಮಾ ನೋಡಿದ ಕೆಲವರು ನಿರಾಶದಾಯಕವಾಗಿಯೂ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ತಮಿಳು ಸಿನಿ ವಿಮರ್ಶಕ( ಟ್ರೇಡ್ ಬ್ಯುಸಿನೆಸ್‌ ಇನ್‌ ಸೈಡರ್) ಮನೋಬಾಬಾ ವಿಜಯಬಾಲನ್‌ ಅವರು “ವಿಜಯ್‌ ಸಿನಿ ಕೆರಿಯರ್‌ ನಲ್ಲಿ ಇದುವರೆಗಿನ ಅತ್ಯಂತ ದುರ್ಬಲ ಸಿನಿಮಾವಿದು. ಸಿಂಹವಾಗಲು ಹೋಗಿದ್ದಾರೆ. ಆದರೆ ಕೊನೆಯಲ್ಲಿ ಬೆಕ್ಕು ಆಗುತ್ತಾರೆ. ವಿಜಯ್ ಹಾಗೂ ಇತರೆ ಪಾತ್ರವರ್ಗದ ನಟನೆ ಗಮನ ಸೆಳೆಯುತ್ತದೆ. ಆದರೆ ಅಂತಿಮವಾಗಿ ಫಲಿತಾಂಶ ಮಾತ್ರ‌ ನಿರಾಶದಾಯಕವಾಗಿದೆ. ಲೋಕೇಶ್ ಕನಕರಾಜ್ ನಿರೀಕ್ಷೆ ಹಾಗೂ ಹೈಪ್ ನ್ನು ಉಳಿಸಿಕೊಳ್ಳುವಲ್ಲಿ‌ ವಿಫಲರಾಗಿದ್ದಾರೆ. ಇನ್ನು ಸಿನಿಮಾ ಲಯ ಕಳೆದುಕೊಳ್ಳುತ್ತದೆ. ಇದರಿಂದ ‌ಪ್ರೇಕ್ಷಕರಿಗೆ ಬೋರಾಗುತ್ತದೆ. ಇದು ‘ವಿಕ್ರಮ್’ ಹಾಗೂ ‘ಕೈತಿ’ಯ ಸಮೀಪಕ್ಕೂ ಬರಲ್ಲ. ಲೋಕೇಶ್ ಅವರ ಸಾಧಾರಣ ಪ್ರಯತ್ನ ಹಾಗೂ ದುರ್ಬಲ” ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಇದು ‘ಬೀಸ್ಟ್’ ಗಿಂತ ನಾಲ್ಕು ಪಟ್ಟು ಕಳಪೆ ಸಿನಿಮಾ “ಎಂದು ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.