ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Team Udayavani, Apr 17, 2024, 2:25 PM IST
ಮುಂಬಯಿ: ಸುಭಾಷ್ ಘಾಯ್ ನಿರ್ದೇಶನದಲ್ಲಿ 1993 ರಲ್ಲಿ ರಿಲೀಸ್ ಆಗಿ ದೊಡ್ಡ ಹಿಟ್ ಆಗಿದ್ದ ಸಂಜಯ್ ದತ್ ಅಭಿನಯದ ʼಖಲ್ನಾಯಕ್ʼ ಸಿನಿಮಾದ ಸೀಕ್ವೆಲ್ ಬಗ್ಗೆ ಬಾಲಿವುಡ್ ನಲ್ಲಿ ಕಳೆದ ಕೆಲ ಸಮಯದಿಂದ ಸುದ್ದಿ ಹರಿದಾಡುತ್ತಿದೆ.
ಇದೀಗ ಬಂದಿರುವ ಲೇಟೆಸ್ಟ್ ಅಪ್ಡೇಟ್ ಪ್ರಕಾರ ʼಖಲ್ನಾಯಕ್ʼ ಸೀಕ್ವೆಲ್ ಸಿನಿಮಾದ ಸ್ಕ್ರಿಪ್ಟ್ ಕೆಲಸವನ್ನು ಸುಭಾಷ್ ಘಾಯ್ ಮುಗಿಸಿದ್ದಾರೆ. ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
ʼಬಲ್ಲು ಬಲರಾಮ್ʼ ಪಾತ್ರದಲ್ಲಿ ಮತ್ತೆ ಸಂಜಯ್ ದತ್ ಕಾಣಿಸಿಕೊಳ್ಳುವುದು ಡೌಟ್ ಎನ್ನಲಾಗುತ್ತಿತ್ತು ಈ ಪಾತ್ರಕ್ಕಾಗಿ ಸುಭಾಷ್ ಅವರು ಬಾಲಿವುಡ್ ನ ಯುವ ನಟ ಅಥವಾ ದಕ್ಷಿಣದ ಸ್ಟಾರ್ ನಟರನ್ನು ಆಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.
“ಸುಭಾಷ್ ಘಾಯ್ ಅವರು ಬಲ್ಲು ಬಲರಾಮ್ ಪಾತ್ರಕ್ಕಾಗಿ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರಂತಹ ನಟರನ್ನು ಸಂಪರ್ಕಿಸಲು ಬಯಸಿದ್ದಾರೆ. ಅವರ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಮತ್ತು ಯಶ್ ಕೂಡ ಇದ್ದಾರೆ ಮತ್ತು ಅವರನ್ನೂ ಸಂಪರ್ಕಿಸಲು ಅವರು ಬಯಸುತ್ತಾರೆ. ಬಲ್ಲು ಬಲರಾಮ್ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗುವವರನ್ನು ಅವರು ಆಯ್ಕೆ ಮಾಡಲು ಬಯಸುತ್ತಾರೆ” ಎಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
‘ಖಲ್ನಾಯಕ್’ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮತ್ತು ಅನುಪಮ್ ಖೇರ್ ನಟಿಸಿದ್ದರು. ಕಳೆದ ವರ್ಷ ಈ ಚಿತ್ರದ 30 ನೇ ವಾರ್ಷಿಕೋತ್ಸವವನ್ನು ಆಚರಿಸಲು ಚಿತ್ರತಂಡ ಒಟ್ಟಾಗಿ ಬಂದಿತ್ತು. ಚಿತ್ರ ಬಿಡುಗಡೆಯಾದ ಮೇಲೆ ವಿವಾದಗಳ ಸುಳಿಯಲ್ಲಿ ಸಿಲುಕಿತ್ತು. ಚಿತ್ರದ ಹಾಡು, ‘ಚೋಲಿ ಕೆ ಪೀಚೆ ಕ್ಯಾ ಹೈ’, ಭಾರಿ ಹಿಟ್ ಆಗಿತ್ತು ಮತ್ತು ಅದನ್ನು 2024 ರ ಚಲನಚಿತ್ರ ‘ಕ್ರೂ’ ನಲ್ಲಿ ಬಳಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ