ಆಸ್ಕರ್‌ಗೆ ಗಲ್ಲಿ ಬಾಯ್‌ ಅಧಿಕೃತ ಪ್ರವೇಶ

Team Udayavani, Sep 21, 2019, 10:54 PM IST

ನವದೆಹಲಿ: ಝೋಯಾ ಅಖ್ತರ್‌ ನಿರ್ದೇಶಿಸಿದ ಹಾಗೂ ರಣವೀರ್‌ ಸಿಂಗ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ ಬಾಲಿವುಡ್‌ ಸಿನಿಮಾ ಗಲ್ಲಿ ಬಾಯ್‌ ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಈ ಕುರಿತು ಫಿಲಂ ಫೆಡರೇಶನ್‌ ಆಫ್ ಇಂಡಿಯಾ ಘೋಷಣೆ ಮಾಡಿದ್ದು, ಒಟ್ಟು 52 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಗಲ್ಲಿ ಬಾಯ್‌ ಸಿನಿಮಾವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಎಫ್ಎಫ್ಐ ಕಾರ್ಯದರ್ಶಿ ಸುಪ್ರನ್‌ ಸೇನ್‌ ಹೇಳಿದ್ದಾರೆ.

ಈ ವರ್ಷದ ಆಸ್ಕರ್‌ ಪ್ರಶಸ್ತಿ ನಾಮನಿರ್ದೇಶನ ಸಮಿತಿಗೆ ನಟಿ ಹಾಗೂ ನಿರ್ಮಾಪಕಿ ಅಪರ್ಣಾ ಸೇನ್‌ ಮುಖ್ಯಸ್ಥೆಯಾಗಿದ್ದರು. ರಿತೇಶ್‌ ಸಿಧ್ವಾನಿ ಹಾಗೂ ಫ‌ರ್ಹಾನ್‌ ಅಖ್ತರ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರ್ಯಾಪರ್‌ ಆಗಿ ರಣವೀರ್‌ ಸಿಂಗ್‌ ನಟಿಸಿದ್ದಾರೆ. ಮುಂಬೈ ಸ್ಲಂನಲ್ಲಿ ಬೆಳೆದ ವ್ಯಕ್ತಿಯೊಬ್ಬ ಜನಪ್ರಿಯ ರ್ಯಾಪರ್‌ ಆಗುವ ಕಥೆಯನ್ನು ಈ ಸಿನಿಮಾ ಹೊಂದಿದೆ.

ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಸಿನಿಮಾ ಆಸ್ಕರ್‌ ಪ್ರಶಸ್ತಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ