Karataka Damanaka Movie Review; ಕಿಲಾಡಿ ಜೋಡಿಯ ಮಸ್ತ್ ಕಮಾಲ್‌!


Team Udayavani, Mar 9, 2024, 10:35 AM IST

Karataka Damanaka Movie Review

ಅವರಿಬ್ಬರು ಬಾಲ್ಯದ ಸ್ನೇಹಿತರು. ಮಾತಿನಲ್ಲೇ ಎದುರಿಗಿರುವ ಎಂಥವರನ್ನೂ ಮೋಡಿ ಮಾಡ ಬಲ್ಲ ಮಹಾನ್‌ ಚಾಲಾಕಿಗಳು. ನರ ಜನಗಳ ನಡುವೆಯೇ ಇದ್ದು ನರಿಗಳಂತೆ ಹೊಂಚು ಹಾಕಿ ಅಂದುಕೊಂಡಿದ್ದನ್ನು ಸಾಧಿಸ ಬಲ್ಲ ಕಿಲಾಡಿಗಳು. ಬೋಳು ತಲೆಯಂತೆ ಗುಂಡಾಗಿರುವ ಭೂಮಿಯಲ್ಲಿ ಸಿಕ್ಕ ಸಿಕ್ಕವರಿಗೆ ಟೋಪಿ ಹಾಕುವುದು ತಪ್ಪಲ್ಲ ಎಂಬ ಮಾತನ್ನು ಅಕ್ಷರಶಃ ಚಾಚೂ ತಪ್ಪದೆ ಪಾಲಿಸುವ ಈ ಸ್ನೇಹಿತರು ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡು ಜೈಲು ಪಾಲಾಗಿರುತ್ತಾರೆ. “ಕರಟಕ ದಮನಕ’ ಎಂಬ ಕುತಂತ್ರಿ ನರಿಗಳ ಪ್ರತಿರೂಪ ಎಂದೇ ಕರೆಸಿಕೊಳ್ಳುವ ಈ ಜೋಡಿಯ “ಪ್ರತಿಭೆ’ ಕಂಡ ಜೈಲರ್‌, ಅವರನ್ನು ತನ್ನ ಕೆಲಸವೊಂದನ್ನು ಮಾಡಿಸಿಕೊಳ್ಳುವ ಸಲುವಾಗಿ ಪೆರೋಲ್‌ ಮೇಲೆ ಹೊರಗೆ ಬಿಡುತ್ತಾನೆ. ಹೀಗೆ ಜೈಲಿನಿಂದ ಹೊರಬಂದ “ಕರಟಕ ದಮನಕ’ ಉತ್ತರ ಕರ್ನಾಟಕದ ಬರದ ಹಳ್ಳಿ ನಂದಿಕೋಲೂರಿನತ್ತ ಹೆಜ್ಜೆ ಹಾಕುತ್ತಾರೆ. ಆನಂತರ ನಿಧಾನವಾಗಿ “ಕರಟಕ ದಮನಕ’ ಎಂಬ ನರರೂಪದ ನರಿಗಳ ಅಸಲಿ ಆಟ ಶುರುವಾಗುತ್ತದೆ. ನೋಡ ನೋಡುತ್ತಿದ್ದಂತೆ ಅಲ್ಲೊಂದಷ್ಟು ಕೌತುಕ, ವಿಸ್ಮಯಗಳು ತೆರೆದುಕೊಳ್ಳುತ್ತದೆ.

ಇದು ಈ ವಾರ ತೆರೆಗೆ ಬಂದಿರುವ “ಕರಟಕ ದಮನಕ’ ಸಿನಿಮಾದ ಕಥೆಯ ಒಂದು ಎಳೆ. ಆರಂಭದಲ್ಲಿಯೇ ಹೇಳಿರುವಂತೆ, ಕಥೆಗಳಲ್ಲಿ ಬರುವ “ಕರಟಕ ದಮನಕ’ ಎಂಬ ಎರಡು ಕುತಂತ್ರಿ ನರಿಗಳ ಗುಣಾವಗುಣಗಳನ್ನು ಇಟ್ಟು ಕೊಂಡು ಅದೇ ಹೆಸರಿನಲ್ಲಿ ಸಿನಿಮಾವಾಗಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌. ಇವಿಷ್ಟು ಹೇಳಿದ ಮೇಲೆ ಇದೊಂದು ಹೊಂಚು ಹಾಕಿ ಕಾರ್ಯ ಸಾಧಿಸಬಲ್ಲವರ ಆಟ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನರರನ್ನು ನರಿಗಳಿಗೆ ಹೋಲಿಸಿ ಮನರಂಜನೆಯ ಜೊತೆ ಜೊತೆಗೇ ಒಂದು ಮನಮುಟ್ಟುವ ಕಥೆಯನ್ನು ಹೇಳಿರುವ ನಿರ್ದೇಶಕ ಯೋಗರಾಜ್‌ ಭಟ್‌ ಪ್ರಯತ್ನ ತೆರೆಮೇಲೆ ಬಹುತೇಕ ಯಶಸ್ವಿಯಾಗಿದೆ. ಹಾಡು, ಸಂಭಾಷಣೆ ಮತ್ತು ದೃಶ್ಯಗಳಲ್ಲಿ ಉತ್ತರ ಕರ್ನಾಟಕದ ಸೊಗಡನ್ನು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ ಭಟ್ಟರು. ಸಿನಿಮಾ ಓಟ ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಚಿತ್ರದಲ್ಲಿ ಇವತ್ತು ಇಡೀ ರಾಜ್ಯವನ್ನು ಕಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ ಹೇಳಲಾಗಿದೆ. ಜೊತೆಗೆ ಊರು, ಊರಿನ ಮಹತ್ವ ಸೇರಿದಂತೆ ಹಲವು ಅಂಶಗಳು ಪ್ರೇಕ್ಷಕರನ್ನು ಕಾಡುವುದರಲ್ಲಿ ಅನುಮಾನವಿಲ್ಲ.

ಇನ್ನು “ಕರಟಕ ದಮನಕ’ ಎಂಬ ಎರಡು ಕುತಂತ್ರಿ ನರಿಗಳ ಗುಣವಿರುವ ಪಾತ್ರಗಳಲ್ಲಿ ನಟರಾದ ಶಿವರಾಜಕುಮಾರ್‌ ಮತ್ತು ಪ್ರಭುದೇವ ಜೋಡಿ ತೆರೆಮೇಲೆ ಸೈ ಎನಿಸಿ ಕೊಂಡಿದೆ. ಶಿವರಾಜಕುಮಾರ್‌ ತಮ್ಮ ಲುಕ್‌, ಮ್ಯಾನರಿಸಂನಿಂದ ಗಮನ ಸೆಳೆದರೆ, ಪ್ರಭು ದೇವ ಡ್ಯಾನ್ಸ್‌ ಮತ್ತು ಡೈಲಾಗ್‌ ಡೆಲಿವರಿ ಮಾಡುವ ಶೈಲಿಯಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ರವಿಶಂಕರ್‌, ತನಿಕೆಲ್ಲ ಭರಣಿ ತಮ್ಮ ಅಭಿನಯಕ್ಕೆ ಫ‌ುಲ್‌ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ನಟಿಯರಾದ ಪ್ರಿಯಾ ಆನಂದ್‌, ನಿಶ್ವಿ‌ಕಾ ನಾಯ್ಡು ಇಬ್ಬರೂ ಅಂದ ಮತ್ತು ಅಭಿನಯ ಎರಡರಲ್ಲೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ.

ಥಿಯೇಟರಿನಿಂದ ಹೊರಗೂ ಗುನುಗುವಂತೆ ಎರಡು-ಮೂರು ಹಾಡುಗಳು, ಕ್ಯಾಚಿಯಾಗಿರುವ ಸಾಹಿತ್ಯದ ಸಾಲುಗಳು, ಛಾಯಾಗ್ರಹಣ, ಅದ್ಧೂರಿ ಮೇಕಿಂಗ್‌ ಎಲ್ಲವೂ “ಕರಟಕ ದಮನಕ’ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ ಅಂಶಗಳು ಎನ್ನಬಹುದು. ಬಿಗ್‌ಸ್ಟಾರ್‌ ಕಾಸ್ಟಿಂಗ್‌, ಹಾಡು, ಡ್ಯಾನ್ಸ್‌, ಆ್ಯಕ್ಷನ್‌, ಕಾಮಿಡಿ ಹೀಗೆ ಎಲ್ಲ ಥರದ ಅಂಶಗಳನ್ನು ಇಟ್ಟುಕೊಂಡು ಬಂದಿರುವ “ಕರಟಕ ದಮನಕ’ ಒಂದಷ್ಟು ಮನರಂಜನೆ ನೀಡುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.