Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ


Team Udayavani, Apr 6, 2024, 10:17 AM IST

Matinee movie review

ಹಾರರ್‌ ಸಿನಿಮಾ ಎಂದ ಮೇಲೆ ಭಯ ಬೀಳಲೇಬೇಕು ಎಂದು ನಂಬಿಕೊಂಡು ಸಿನಿಮಾ ಮಾಡುವ ನಿರ್ದೇಶಕರದ್ದ ಒಂದು ಕೆಟಗರಿಯಾದರೆ, ಇನ್ನೊಂದಿಷ್ಟು ನಿರ್ದೇಶಕರು ಭಯಕ್ಕಿಂತ ಪ್ರೇಕ್ಷಕ ನಗುತ್ತಲೇ, ಕುತೂಹಲ ಹೆಚ್ಚಿಸಿಕೊಳ್ಳಬೇಕು ಎಂದು ನಂಬಿರುತ್ತಾರೆ. ಈ ವಾರ ತೆರೆಕಂಡಿರುವ “ಮ್ಯಾಟ್ನಿ’ ಸಿನಿಮಾದ ನಿರ್ದೇಶಕ ಇಲ್ಲಿ ಎರಡನೇ ಕೆಟಗರಿಗೆ ಸೇರಿದವರು. ಏಕೆಂದರೆ “ಮ್ಯಾಟ್ನಿ’ ಒಂದು ಹಾರರ್‌ ಸಿನಿಮಾ. ಆದರೆ, “ಆ ಫೀಲ್‌’ನಿಂದ ಹೊರತಾಗಿ ಪ್ರೇಕ್ಷಕರನ್ನು ನಗಿಸುತ್ತಾ ಸಾಗುವ ಸಿನಿಮಾವಿದು ಎಂದರೆ ತಪ್ಪಲ್ಲ. ಈ ಸಿನಿಮಾದಲ್ಲಿ ಆತ್ಮದ ಆಟವಿದೆ. ಆದರೆ, ಆ ಆತ್ಮ ಸಿಕ್ಕಾಪಟ್ಟೆ “ಫ್ರೆಂಡ್ಲಿ’. ತುಂಬಾ ಭಯಬೀಳಿಸುವುದಿಲ್ಲ.

“ನಮ್ಮ-ನಿಮ್ಮ ಜೊತೆ ಕೂತು ಮಾತನಾಡುವ ಆತ್ಮ’. ಹಾಗಾದರೆ, ಸಿನಿಮಾದ ಕಥೆ ಏನು, ಅಷ್ಟೊಂದು “ಒಳ್ಳೆಯ’ ಆತ್ಮದ ಹಿಂದಿನ “ವ್ಯಕ್ತಿ’ ಯಾರು ಎಂಬ ಕುತೂಹಲವೇ ಸಿನಿಮಾದ ಹೈಲೈಟ್‌. ಸಾಮಾನ್ಯವಾಗಿ ಹಾರರ್‌ ಸಿನಿಮಾಗಳಲ್ಲಿ ಇರುವ ಕಿಟಾರನೇ ಕಿರುಚುವ ಪಾತ್ರಗಳು, ಗೆಜ್ಜೆ ಸದ್ದು, ದಪ್‌ ಎಂದು ಏಕಾಏಕಿ ಬೀಳುವ ಬಾಗಿಲು, ಪಾಸಿಂಗ್‌ ಶಾಟ್‌ನಲ್ಲಿ ಓಡಾಡುವ ಆತ್ಮ… ಇವೆಲ್ಲವೂ “ಮ್ಯಾಟ್ನಿ’ಯಲ್ಲಿ ಇದ್ದರೂ ಪ್ರೇಕ್ಷಕರನ್ನು ಹೆಚ್ಚು ಭಯಬೀಳಿಸದೇ, ಮುಂದಿನ ಕುತೂಹಲ ಹೆಚ್ಚಿಸುತ್ತಾ ಸಾಗುವುದು “ಮ್ಯಾಟ್ನಿ’ಯ ಪ್ಲಸ್‌.

ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಗಂಭೀರವಾದ ಕಥೆಯೇನು ಇಲ್ಲ. ಆದರೆ, ನಿರ್ದೇಶಕರು ಸನ್ನಿವೇಶಗಳ, ಸಂಭಾಷಣೆಯ ಮೂಲಕ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾದ ಮೊದಲರ್ಧ ಸ್ನೇಹಿತರ ಆಟ, ಕಾಟವಾದರೆ, ದ್ವಿತೀಯಾರ್ಧ ಪ್ರೇಮ ಮತ್ತು ತಿರುವು. ಇದೇ ಸಿನಿಮಾದ ಹೈಲೈಟ್‌. ಈ ಹಂತದಲ್ಲಿ ಒಂದಷ್ಟು ವಿಚಾರಗಳನ್ನು ಸಿನಿಮಾ ಪ್ರೇಕ್ಷಕರ ಮಡಿಲಿಗೆ ಹಾಕುತ್ತಾ ಸಾಗುತ್ತದೆ. ಈ ಪಯಣದಲ್ಲಿ ಒಂದೆರಡು ಸುಂದರ ಹಾಡುಗಳು ಕೂಡಾ “ಹಾರರ್‌’ ಫೀಲ್‌ ಅನ್ನು ಮರೆಸುತ್ತದೆ ಕೂಡಾ.

ನಾಯಕ ನೀನಾಸಂ ಸತೀಶ್‌ ಅವರಿಗೆ ಈ ಪಾತ್ರ ತುಂಬಾ ಹೊಸದು. ಪಾತ್ರವಾಗಿ ಇಷ್ಟವಾಗುವ ಅವರು, ಸಖತ್‌ ಸ್ಟೈಲಿಶ್‌ ಆಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿ ರಚಿತಾ, ಅದಿತಿ ನಾಯಕಿಯರು. ಕ್ಲೈಮ್ಯಾಕ್ಸ್‌ ನಲ್ಲಿ ರಚಿತಾ ಪಾತ್ರ ಗಮನ ಸೆಳೆಯುತ್ತದೆಯಷ್ಟೇ. ಉಳಿದಂತೆ ಶಿವರಾಜ್‌ ಕೆ.ಆರ್‌.ಪೇಟೆ, ಪೂರ್ಣ ಇತರರರು ನಟಿಸಿದ್ದಾರೆ. ಹಾರರ್‌ ಸಿನಿಮಾವನ್ನು “ನಗುತ್ತಾ’ ನೋಡಬಯಸುವವರಿಗೆ “ಮ್ಯಾಟ್ನಿ’ ಇಷ್ಟವಾಗಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.