Movie review: ಒಂದು ಪ್ರೀತಿಯ ಸುತ್ತ ರೋಡ್ ಕಿಂಗ್
Team Udayavani, Jun 24, 2023, 3:49 PM IST
ತನ್ನದೇ ಲೋಕದಲ್ಲಿ ಜಾಲಿಯಾಗಿ ಸುತ್ತಾಡಿಕೊಂಡಿರುವ ಹುಡುಗನ ಲೈಫ್ನಲ್ಲಿ ಬರುವ ಹುಡುಗಿ, ಅಲ್ಲಿಂದ ಪ್ರೀತಿ, ಪ್ರೇಮ, ಪ್ರಣಯ… ಜೊತೆಗೆ ಜಾಲಿರೈಡ್… ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ದೊಡ್ಡದೊಂದು ಅಘಾತ… ಅಲ್ಲಿಂದ ಬದಲಾಗುತ್ತಾ ಹೋಗುವ ಸನ್ನಿವೇಶಗಳು… ಇದು ಈ ವಾರ ತೆರೆಕಂಡಿರುವ “ರೋಡ್ಕಿಂಗ್’ ಚಿತ್ರದ ಒನ್ಲೈನ್.
ಅಂದಹಾಗೆ, “ರೋಡ್ಕಿಂಗ್’ ಒಂದು ಲವ್ಸ್ಟೋರಿ ಇರುವ ಸಿನಿಮಾ. ತನಗೆ ಗೊತ್ತಿಲ್ಲದಂತೆ ಪ್ರೀತಿಯಲ್ಲಿ ಬೀಳುವ ನಾಯಕ ಮುಂದೆ ಅನುಭವಿಸುವ “ಯಾತನೆ-ವೇದನೆ’ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಇದು ಲವ್ ಸ್ಟೋರಿಯಾದರೂ ಆರಂಭದಲ್ಲಿ ಜಾಲಿರೈಡ್ ಆಗಿಯೇ ಸಾಗುತ್ತದೆ. ಫ್ರೆಂಡ್ಸ್, ಅವರ ಲವ್ಸ್ಟೋರಿ, ಜಾಲಿರೈಡ್, ಪಾರ್ಟಿ, ಪಬ್ ಕುಣಿತ.. ಹೀಗೆ ಸಾಗುವ ಸಿನಿಮಾ ನಿಧಾನವಾಗಿ ಲವ್ಸ್ಟೋರಿಯಾಗಿ ಬದಲಾಗುತ್ತದೆ.
ಅಂದಹಾಗೆ, ಈ ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಲಾಗಿದೆ. ದೂರದ ಅಮೆರಿಕಾದಿಂದ ನಿರ್ದೇಶಕ ರಾಂಡಿ ಕೆಂಟ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಂದು ಲವ್ಸ್ಟೋರಿಯಾಗಿ ತಕ್ಕಮಟ್ಟಿಗೆ ಮೆಚ್ಚುಗೆ ಪಡೆಯುವ ಸಿನಿಮಾ ತಾಂತ್ರಿಕವಾಗಿ ಇನ್ನಷ್ಟು ಅಪ್ಡೇಟ್ ಆಗಬೇಕಿತ್ತು. ಚಿತ್ರದಲ್ಲಿ ಮತೀನ್ ಹುಸೇನ್ ನಾಯಕರಾಗಿ ನಟಿಸಿದ್ದು, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನಾಯಕಿಯಾಗಿ ರುಕ್ಸರ್ ನಟಿಸಿದ್ದಾರೆ. ಉಳಿದಂತೆ ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ