ಕೋವಿಡ್ ಸಾವು; 1,30,000 v/s 600: ಏನಿದು ನಾಲ್ಕು ಯುರೋಪ್ ದೇಶಗಳ ಮೋದಿ ಲೆಕ್ಕಾಚಾರ

ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಇತರ ದೇಶದಲ್ಲಿಯೇ ಆಗಲಿ ಸಾವು ಎಂಬುದು ತುಂಬಾ ಕೆಟ್ಟ ಸುದ್ದಿಯಾಗಿದೆ.

Team Udayavani, Jun 26, 2020, 5:56 PM IST

ಕೋವಿಡ್ ಸಾವು; 1,30,000 v/s 600: ಏನಿದು ನಾಲ್ಕು ಯುರೋಪ್ ದೇಶಗಳ ಮೋದಿ ಲೆಕ್ಕಾಚಾರ

ನವದೆಹಲಿ: ಉತ್ತರಪ್ರದೇಶದ ಜನಸಂಖ್ಯೆ ನಾಲ್ಕು ಯುರೋಪ್ ದೇಶಗಳಿಗೆ ಸಮಾನವಾಗಿದ್ದು, ಕೋವಿಡ್ 19 ವೈರಸ್ ನಿಂದ ಯುರೋಪ್ ದೇಶಗಳು ತತ್ತರಿಸಿ ಹೋಗಿವೆ. ಆದರೆ ಉತ್ತರಪ್ರದೇಶಕ್ಕೆ ಹೋಲಿಸಿದರೆ ನಾಲ್ಕು ದೇಶಗಳಲ್ಲಿ ಕೋವಿಡ್ 19 ವೈರಸ್ ಗೆ ಅಪಾರ ಪ್ರಮಾಣದ ಸಾವು ಸಂಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಈ ನಾಲ್ಕು ದೇಶಗಳು ಒಂದು ಸಮಯದಲ್ಲಿ ವಿಶ್ವದ ಗಮನ ಸೆಳೆದ ಬಲಿಷ್ಠ ದೇಶಗಳಾಗಿದ್ದವು. ಆದರೆ ಒಂದು ವೇಳೆ ನೀವು ಈ ನಾಲ್ಕು ದೇಶಗಳ ಜನಸಂಖ್ಯೆಯನ್ನು ಲೆಕ್ಕ ಹಾಕಿದರೆ ಒಟ್ಟು 24 ಕೋಟಿಯಾಗಬಹುದು, ಆದರೆ ಭಾರತದ ಉತ್ತಪ್ರದೇಶ ರಾಜ್ಯವೊಂದರ ಜನಸಂಖ್ಯೆಯೇ 24 ಕೋಟಿ ಇದೆ. ಆ ನಿಟ್ಟಿನಲ್ಲಿ ಉತ್ತರಪ್ರದೇಶ ಕೋವಿಡ್ 19 ಸೋಂಕಿನ ಬಗ್ಗೆ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದಕ್ಕೆ ಈ ಅಂಕಿಅಂಶವೇ ಸಾಕ್ಷಿಯಾಗಿದೆ. ಕೋವಿಡ್ 19 ಸೋಂಕಿಗೆ ನಾಲ್ಕು ಯುರೋಪ್ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,30,000. ಆದರೆ ಉತ್ತರಪ್ರದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 600 ಎಂದು ಪ್ರಧಾನಿ ಮೋದಿ ವಿವರಿಸಿದರು.

ಏನೇ ಆಗಲಿ ಸಾವು, ಸಾವೇ ಆಗಿದೆ. ಪ್ರತಿಯೊಂದು ಜೀವದ ವಿಷಯವೇ ಆಗಿದೆ. ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಇತರ ದೇಶದಲ್ಲಿಯೇ ಆಗಲಿ ಸಾವು ಎಂಬುದು ತುಂಬಾ ಕೆಟ್ಟ ಸುದ್ದಿಯಾಗಿದೆ ಎಂದರು.

ಅವರು ಶುಕ್ರವಾರ ಆತ್ಮ ನಿರ್ಭರ್ ಉತ್ತರಪ್ರದೇಶ್ ರೋಜ್ಗಾರ್ ಅಭಿಯಾನ್ ಕಾರ್ಯಕ್ರಮವನ್ನು ವಿಡಿಯೋ ಮೂಲಕ ಉದ್ಘಾಟಿಸಿ ಉತ್ತರಪ್ರದೇಶ ಜನರನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ 19 ಸೋಂಕು ತಡೆ ಹಾಗು ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ಈ ಸಂದರ್ಭದಲ್ಲಿ ಅಭಿನಂದಿಸಿದರು.

ಟಾಪ್ ನ್ಯೂಸ್

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

9

ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ 

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

tdy-4

ನನ್ನ ತಂದೆಯ ಬಳಿ ಸಾಲಗಾರರಿಗೆ ಕೊಡಲು ಒಂದು ಪೈಸೆಯೂ ಇರಲಿಲ್ಲ: ಆಮಿರ್‌ ಖಾನ್

8-1

ಗುರುಪುರ: ಟಿಪ್ಪರ್-ಲಾರಿ ಢಿಕ್ಕಿ; ಟಿಪ್ಪರ್‌ ಚಾಲಕ ಮೃತ್ಯು, ಲಾರಿ ಚಾಲಕ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

7

ನಕ್ಸಲರ ಬಳಿ ಅಮೆರಿಕ ನಿರ್ಮಿತ ಅಸ್ತ್ರ

Gujarath Election: Narendra Modi cast vote in Ahmedabad

ಗುಜರಾತ್ ನಲ್ಲಿಂದು ಎರಡನೇ ಹಂತದ ಮತದಾನ: ಮತ ಚಲಾಯಿಸಿದ ಪ್ರಧಾನಿ ಮೋದಿ

ಹೃದಯ ಸ್ತಂಭನ: ಮದುವೆ ಮಂಟಪದಲ್ಲೇ ಕುಸಿದು ಬಿದ್ದು 20 ವರ್ಷದ ವಧು ಮೃತ್ಯು

ಹೃದಯ ಸ್ತಂಭನ: ಮದುವೆ ಮಂಟಪದಲ್ಲೇ ಕುಸಿದು ಬಿದ್ದು 20 ವರ್ಷದ ವಧು ಮೃತ್ಯು

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

10

ಉ.ಕ. ದಲ್ಲಿ ಸೀರೆ, ಕುಕ್ಕರ್‌ ಹಂಚಿಕೆ ಅಬ್ಬರ; ಆಕಾಂಕ್ಷಿಗಳಿಂದ ಮನವೊಲಿಕೆ ಕಸರತ್ತು

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಹನುಮ ಮಾಲೆ ಧರಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಹನುಮ ಮಾಲೆ ಧರಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.