14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು
Team Udayavani, Apr 7, 2020, 1:58 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಗುಜರಾತ್ನ ಜಾಮ್ನಗರ ಜಿಲ್ಲೆಯಲ್ಲಿ 14 ತಿಂಗಳ ಮಗು ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗಿದೆ. ಈ ಮಗುವಿನ ಪೋಷಕರು ದಿನಗೂಲಿ ನೌಕರರು, ಅವರು ಇತ್ತೀಚೆಗೆ ಎಲ್ಲಿಯೂ ಪ್ರಯಾಣ ಮಾಡಿಲ್ಲ. ಹೀಗಾಗಿ ಮಗುವಿಗೆ ಸೋಂಕು ಯಾರಿಂದ ತಗುಲಿದೆ ಎಂದು ತಿಳಿದುಬಂದಿಲ್ಲ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಗುವನ್ನು ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮತ್ತು ಪೋಷಕರು ಇಲ್ಲಿಯ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಸಂಚಾರ ಮೇಲೆ ನಿರ್ಬಂಧವಿದ್ದೂ ಸೋಂಕು ತಗಲಿರುವುದು ಆತಂಕಕ್ಕೆ ಎಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.