ದ.ಆ.: 100 ದಿನಗಳ ಲಾಕ್‌ಡೌನ್‌ ಪೂರ್ಣ

ದ.ಆಫ್ರಿಕಾದ ವೆಸ್ಟರ್ನ್ ಕೇಪ್‌ ಪ್ರಾಂತ್ಯವು ಕೋವಿಡ್‌ನ‌ ಹಾಟ್‌ಸ್ಪಾಟ್‌ ಆಗಿದ್ದು 68 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ

Team Udayavani, Jul 6, 2020, 2:25 PM IST

ದ.ಆ.: 100 ದಿನಗಳ ಲಾಕ್‌ಡೌನ್‌ ಪೂರ್ಣ

ಕೇಪ್‌ ಟೌನ್‌: ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇದೇ ರೀತಿ ಆಫ್ರಿಕಾದಲ್ಲೂ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಅಧಿಕವಾಗುತ್ತಿರುವ ಸೋಂಕು ಪ್ರಕರಣಗಳ ಉಲ್ಬಣಕ್ಕೆ ಸಂಪೂರ್ಣವಾಗಿ ಬೆಚ್ಚಿಬಿದ್ದಿದೆ. ಸಲ್ಲದಕ್ಕೆ ಇಲ್ಲಿನ 10 ದೇಶದ‌ಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿದ್ದು, ವೆಂಟಿಲೇಟರ್‌ಗಳ ಅಭಾವವೂ ಇದೆ. ಈ ಬಿಕ್ಕಟ್ಟಿನ ವಾತಾವರಣದಲ್ಲಿಯೇ ದಕ್ಷಿಣ ಆಫ್ರಿಕಾ ನೂರು ದಿನಗಳ ಲಾಕ್‌ಡೌನ್‌ ಅವಧಿಯನ್ನು ಪೂರೈಸಿದೆ.

ಜಾಗತಿಕವಾಗಿ ಸೋಂಕಿನ ಬಿಕ್ಕಟ್ಟಿನ ವಿರುದ್ಧ ಹೋರಾಡುವಲ್ಲಿ ಹಿಂದುಳಿದಿರುವ ದೇಶವಾದ ದಕ್ಷಿಣ ಆಫ್ರಿಕಾ ದೇಶ ಮೂದಲ ಪ್ರಕರಣ ದಾಖಲಾಗಿ ಮೂರು ವಾರಗಳ ನಂತರ ಅಂದರೆ ಮಾರ್ಚ್‌ 27 ರಂದು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿತ್ತು. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೇಶ ವಿಫಲವಾಗಿದೆ.
ಇನ್ನು 100 ದಿನಗಳ ಕಾಲ ಲಾಕ್‌ಡೌನ್‌ ಹಂತವನ್ನು ಪೂರೈಸಿದರ ಕುರಿತು ವೆಸ್ಟರ್ನ್ ಕೇಪ್‌ ಮುಖ್ಯಮಂತ್ರಿ ಅಲನ್‌ ವಿಂಡೆ ಅವರು, ದಕ್ಷಿಣ ಆಫ್ರಿಕನ್ನರು ಮುಂದಿನ ಕೆಲವು ಸಮಯದವರೆಗೆ ಸೋಂಕಿನೊಂದಿಗೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಲಾಕ್‌ಡೌನ್‌ ನಿವಾಸಿಗಳಿಗೆ ಕಷ್ಟಕರ ಮಾರ್ಗವಾಗಿದ್ದು, ಎದುರಾಗಿರುವ ಈ ಘಟ್ಟವನ್ನು ಎದುರಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.  ಪರಿಸ್ಥಿತಿ ಹೀನಾಯವಾಗಿದ್ದರೂ ದೇಶದಲ್ಲಿ ಮೇ 1 ರಿಂದ ಲಾಕ್‌ಡೌನ್‌ ನಿಯಮ ಸಡಿಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೋಂಕು ಪ್ರಕರಣ ಹೆಚ್ಚಳಕ್ಕೆ ಲಾಕ್‌ಡೌನ್‌ ಸಡಿಲಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ.

ದಕ್ಷಿಣ ಆಫ್ರಿಕಾದ ವೆಸ್ಟರ್ನ್ ಕೇಪ್‌ ಪ್ರಾಂತ್ಯವು ಸೋಂಕಿನ ಕೇಂದ್ರಬಿಂದುವಾಗಿದ್ದು, ಇಲ್ಲಿಯೇ ಸುಮಾರು 68,376 ಪ್ರಕರಣಗಳು ಮತ್ತು 2,026 ಮಂದಿ ಮರಣ ಹೊಂದಿದ್ದಾರೆ.  ಶನಿವಾರ ಒಂದೇ ದಿನ 10,853 ಹೊಸ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ ದಾಖಲಾದ ದೈನಂದಿನ ಹೆಚ್ಚಳ ಪ್ರಕರಣಗಳಾಗಿದೆ. ಒಟ್ಟಾರೆ ಸೋಂಕಿತರ ಪ್ರಮಾಣ 1,87,977 ಕ್ಕೆ ತಲುಪಿದ್ದು, 3,026 ಮಂದಿ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ತಿಳಿಸಿದೆ.

ಆಫ್ರಿಕಾ ಖಂಡದಲ್ಲಿ ಏರಿಕೆ
ಇತ್ತ ಆಫ್ರಿಕಾ ಖಂಡದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ರವಿವಾರ ಒಟ್ಟು ಪ್ರಕರಣಗಳ ಸಂಖ್ಯೆ1.87 ಲಕ್ಷಕ್ಕೇರಿದ್ದರೆ, ಒಟ್ಟು ಸಾವಿನ ಸಂಖ್ಯೆಯೂ 3026ಕ್ಕೇರಿದೆ.  ಬಡ ರಾಷ್ಟ್ರಗಳಿಗೆ ಸಂಕಷ್ಟ ಜಗತ್ತಿನ ಅತಿ ಬಡ ರಾಷ್ಟ್ರಗಳಾದ ಆಫ್ರಿಕಾದ ಬುರುಂಡಿ ಮತ್ತು ಲೈಬೀರಿಯಾದಲ್ಲೂ ಕೋವಿಡ್‌ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿ ಚಿಕಿತ್ಸೆಗೆ ಜನರಲ್ಲಿ ಹಣವೂ ಇಲ್ಲ, ದೇಶದಲ್ಲಿ ಸರಿಯಾದ ವ್ಯವಸ್ಥೆಯೂ ಇಲ್ಲ ಎಂಬಂತಿದೆ ಪರಿಸ್ಥಿತಿ. ಬುರುಂಡಿಯಲ್ಲಿ 191 ಮಂದಿ ಕೋವಿಡ್‌ ಸೋಂಕು ತಗುಲಿದ್ದು, ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಬಗ್ಗೆ ಮಾಹಿತಿ ಇಲ್ಲ. ಇನ್ನು ಲೈಬೀರಿಯಾದಲ್ಲಿ 833 ಮಂದಿಗೆ ಸೋಂಕು ತಗುಲಿದ್ದು, 346 ಮಂದಿ ಚೇತರಿಸಿಕೊಂಡಿದ್ದಾರೆ. 37 ಮಂದಿ ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

siddaramaiah

ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

15DKSHi

ಮತಾಂತರ ನಿಷೇಧದ ಸುಗ್ರೀವಾಜ್ಞೆಯು ಉದ್ಯೋಗಗಳನ್ನು ಸೃಷ್ಟಿಸುವುದೇ?: ಡಿಕೆಶಿ ಪ್ರಶ್ನೆ

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ಕೆ.ಆರ್‌.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ

ಭಾರಿ ಮಳೆ : ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ : 25,000 ರೂ. ಪರಿಹಾರ : ಸಿಎಂ ಬೊಮ್ಮಾಯಿ

ಭಾರಿ ಮಳೆ : ನೀರು ನುಗ್ಗಿರುವ ಮನೆಗಳಿಗೆ 25,000 ರೂ ಪರಿಹಾರ : ಸಿಎಂ ಬೊಮ್ಮಾಯಿ

1-sdsfsfsf

ಪಂಚರತ್ನ ಕಾರ್ಯಕ್ರಮದ ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ ಜೆಡಿಎಸ್

thumb 7

ಕಾಡ್ಗಿಚ್ಚಿ ನಲ್ಲೂ ಟಿಕ್ ಟಾಕ್ ಹುಚ್ಚು!; ಪಾಕಿಸ್ತಾನಿ ಮಹಿಳೆಯ ವಿರುದ್ಧ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

ರಾಜ್ಯದಲ್ಲಿ 98 ಮಂದಿಗೆ ಕೋವಿಡ್‌ ಸೋಂಕು ದೃಢ

Explosive Covid Outbreak in North Korea

ಉತ್ತರ ಕೊರಿಯಾದಲ್ಲಿ ಮಿತಿಮೀರಿದ ಕೋವಿಡ್; ಮೂರು ದಿನದಲ್ಲಿ 820,620 ಪ್ರಕರಣಗಳು ಪತ್ತೆ!

ಭಾರತದಲ್ಲಿ 24 ಗಂಟೆಯಲ್ಲಿ 2,841 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಭಾರೀ ಇಳಿಕೆ

ಭಾರತದಲ್ಲಿ 24 ಗಂಟೆಯಲ್ಲಿ 2,841 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಭಾರೀ ಇಳಿಕೆ

ಭಾರತದಲ್ಲಿ 24 ಗಂಟೆಯಲ್ಲಿ 2,827 ಕೋವಿಡ್ 19 ಸೋಂಕು ಪ್ರಕರಣ ಪತ್ತೆ, 24 ಮಂದಿ ಸಾವು

ಭಾರತದಲ್ಲಿ 24 ಗಂಟೆಯಲ್ಲಿ 2,827 ಕೋವಿಡ್ 19 ಸೋಂಕು ಪ್ರಕರಣ ಪತ್ತೆ, 24 ಮಂದಿ ಸಾವು

Covid test

ಕೋವಿಡ್ ನಾಲ್ಕನೇ ಅಲೆ ಭೀತಿ: ಕಳೆದ 24 ಗಂಟೆಗಳಲ್ಲಿ 3,451 ಹೊಸ ಕೇಸ್ , 40 ಸಾವು

MUST WATCH

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

ಹೊಸ ಸೇರ್ಪಡೆ

jnana-vapi

ಜ್ಞಾನ ವ್ಯಾಪಿ ಮಸೀದಿ ವಿರುದ್ಧ ಷಡ್ಯಂತ್ರ-ಪ್ರತಿಭಟನೆ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

16JDS

ಶಾಸಕ ಶಿವನಗೌಡ ಅಸಭ್ಯ ವರ್ತನೆಗೆ ಜೆಡಿಎಸ್‌ ಖಂಡನೆ

ಕುಸಿದ ಶಾಲೆ: ಮರದ ಕೆಳಗೆ ಮಕ್ಕಳಿಗೆ ಪಾಠ

ಕುಸಿದ ಶಾಲೆ: ಮರದ ಕೆಳಗೆ ಮಕ್ಕಳಿಗೆ ಪಾಠ

siddaramaiah

ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.