ಫಲಿತಾಂಶ ಸುಧಾರಣೆಗೆ ಹೊಸ ಯೋಜನೆ


Team Udayavani, Oct 27, 2021, 2:25 PM IST

16school

ಅಮೀನಗಡ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿನೂತನ ಕಾರ್ಯಕ್ರಮ ರೂಪಿಸಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರ ಶ್ಲಾಘನೆಗೆ ಒಳಗಾಗಿದೆ.

ಹೌದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಹೆಜ್ಜೆ ಹಾಕುವ ಮೊದಲ ಪ್ರಮುಖ ಘಟ್ಟವಾಗಿದ್ದು, ಇಲ್ಲಿನ ಸಾಧನೆ ಜೀವನದ ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತದೆ. ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿಭಾಗದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸರ್ವತೋಮುಖ ಶಿಕ್ಷಣ ಒದಗಿಸಬೇಕು. ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಸದುದ್ದೇಶದಿಂದ ಪ್ರತಿಭಾ ಸಿಂಚನ ಮಾಲಿಕೆ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜಿಸುವ ಮೂಲಕ ಆರಂಭದಿಂದಲೇ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಯಾರಿ ನಡೆದಿದೆ.

ಮಕ್ಕಳಿಗಾಗಿ ಹೊಸ್‌ ಪ್ಲ್ಯಾನ್‌

ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಉಪಪ್ರಾಚಾರ್ಯ ಆರ್‌.ಜಿ.ಸನ್ನಿ ನೇತೃತ್ವದ ಶಿಕ್ಷಕರ ಬಳಗ ಮಕ್ಕಳಿಗೆ ಹೊಸತನದ ಶಿಕ್ಷಣ ನೀಡಬೇಕು ಎಂಬ ವಿಚಾರದೊಂದಿಗೆ ಮಕ್ಕಳಿಗೆ ದಿನನಿತ್ಯ ಪಾಠ ಬೋಧನೆ ಮಾಡುವುದರ ಜತೆಗೆ ರಜೆಯ ದಿನ ರವಿವಾರ ಸಂಪನ್ಮೂಲ ಶಿಕ್ಷಕರನ್ನು ಶಾಲೆಗೆ ಆಹ್ವಾನಿಸಿ ಅವರ ಮೂಲಕ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಗತಿ ಆಯೋಜಿಸಲಾಗಿದೆ ಮತ್ತು ಎರಡು ತರಹದ ಕಿರುಪರೀಕ್ಷೆ ನಡೆಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.

ರವಿವಾರ ವಿಶೇಷ ಕ್ಲಾಸ್‌

ಶಾಲೆಯಲ್ಲಿ ವಾರದ ಆರು ದಿನಗಳ ಕಾಲ ಶಾಲೆಯ ಶಿಕ್ಷಕರಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಒಂದೆಡೆಯಾದರೆ, ಮತ್ತೂಂದೆಡೆ ಪ್ರತಿಭಾ ಸಿಂಚನ ಮಾಲಿಕೆ ಎಂಬ ವಿನೂತನ ಕಾರ್ಯಕ್ರಮವನ್ನು ರವಿವಾರ ಹಮ್ಮಿಕೊಂಡು ಮಕ್ಕಳಿಗೆ ಬೇರೆ ಭಾಗದ ವಿಶೇಷವಾದ ಸಂಪನ್ಮೂಲ ಶಿಕ್ಷಕರಿಂದ ಪಾಠ ಬೋಧನೆ ಮಾಡಿಸುವುದರ ಮೂಲಕ ಮಕ್ಕಳಿಗೆ ಬದಲಾವಣೆಯ ಶಿಕ್ಷಣ ನೀಡುವುದರ ಜತೆಗೆ ಮಾನಸಿಕ ಸಿದ್ಧತೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ದಿನನಿತ್ಯ ಶಾಲೆಯಲ್ಲಿರುವ ಶಿಕ್ಷಕರಿಂದ ಪಾಠ-ಬೋಧನೆ ಪಡೆದ ಮಕ್ಕಳಿಗೆ ಮತ್ತೂಂದು ಮೂಲದಿಂದ ಶಿಕ್ಷಣ ಒದಗಿಸಿ ಮಕ್ಕಳಿಗೆ ಅಧ್ಯಯನದಲ್ಲಿ ಆಕರ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಬೇರೆ ಭಾಗದ ಸಂಪನ್ಮೂಲ ಶಿಕ್ಷಕರಿಂದ ಪಾಠ ಮಾಡಿಸಿ ಶಿಕ್ಷಣದಲ್ಲಿ ಹೊಸತನ ನೀಡಲು ಸಾಧ್ಯ ಎಂಬ ದೂರದೃಷ್ಟಿಕೋನದಿಂದ ಸರ್ವತೋಮುಖ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದೆ. ಸರಳವಾಗಿ ಅಧ್ಯಯನ ಮಾಡುವ ಶೈಲಿ, ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿಕೆಗೆ ಸಿದ್ಧತೆ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಿಗೆ ಮುಂದಿನ ಉತ್ತಮ ಭವಿಷ್ಯ ನಿರ್ಮಿಸಲು ಮತ್ತು ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸುವ ಉದ್ದೇಶ ಹೊಂದಲಾಗಿದೆ.

ತಿಂಗಳಿಗೊಮ್ಮೆ ವಿಶೇಷ ಪರೀಕ್ಷೆ

ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೊಮ್ಮೆ ಎರಡು ತರಹದ ಕಿರುಪರೀಕ್ಷೆ ನಡೆಸಲಾಗುತ್ತದೆ. ಒಂದು ತೆರೆದ ಪುಸ್ತಕ ಪರೀಕ್ಷೆ, ಮತ್ತೊಂದು ಕಾಪಿ ರಹಿತ ಪರೀಕ್ಷೆ ನಡೆಸುವುದರ ಮೂಲಕ ಮಕ್ಕಳಿಗೆ ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸುವ ಕ್ರಮ ಕೈಗೊಳ್ಳಲಾಗಿದೆ. ತೆರೆದ ಪುಸ್ತಕ ಪರೀಕ್ಷೆಯಿಂದ ಮಕ್ಕಳಲ್ಲಿ ಅಧ್ಯಯನ ಮಾಡುವ, ಬರೆಯುವ ಮತ್ತು ಸಂಶೋಧನೆ ಮಾಡುವ ಮನೋಭಾವ ಹುಟ್ಟುತ್ತದೆ. ಕಾಪಿ ರಹಿತ ಪರೀಕ್ಷೆಯಿಂದ ಮಕ್ಕಳ ನಿಜವಾದ ಪ್ರತಿಭೆ ಹೊರಬರುತ್ತೆ ಎಂಬ ದೃಷ್ಟಿಕೋನದಿಂದ ಪ್ರತಿ ತಿಂಗಳು ಎರಡು ತರಹದ ಪರೀಕ್ಷೆ ನಡೆಸಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಗುರಿ ಹೊಂದಲಾಗಿದೆ.

ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ

ಶಾಲೆಯ ಶಿಕ್ಷಕರಿಗೆ ಗುರಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಎರಡು ತರಹದ ಕಿರು ಪರೀಕ್ಷೆ ನಡೆಸಲಾಗುತ್ತದೆ ಅದಕ್ಕೆ ವಿಷಯವಾರು ಶಿಕ್ಷಕರು ವಾರ್ಷಿಕ ಪಾಠ ಯೋಜನೆಗೆ ಅನುಗುಣವಾಗಿ ಆಯಾ ವಿಷಯ ಶಿಕ್ಷಕರು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ವರ್ಷಪೂರ್ತಿ ನಡೆಯುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ತೆಗೆದು ಪರೀಕ್ಷಾ ವಿಭಾಗದ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಪರೀಕ್ಷಾ ವಿಭಾಗದ ಮುಖ್ಯಸ್ಥರು ಅವುಗಳನ್ನು ವ್ಯವಸ್ಥಿತವಾಗಿ ಇಟ್ಟು ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕ ಸಮಯವನ್ನು ವರ್ಷದ ಆರಂಭದಲ್ಲಿ ನೀಡಿ ಅವರಿಗೆ ಪರೀಕ್ಷೆಗೆ ಸಿದ್ಧಗೊಳ್ಳುವಂತೆ ಮುನ್ಸೂಚನೆ ಕೂಡುವಂತಹ ಕಾರ್ಯ ಮಾಡಲಾಗುತ್ತಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವುದರ ಜತೆಗೆ ಶಿಕ್ಷಕರಿಗೆ ನೀಡಿದ ಅಧ್ಯಯನ ನಿಗದಿತ ಅವಧಿಯಲ್ಲಿ ಮುಗಿಸಲು ಸಾಧ್ಯ. ಒಂದು ವೇಳೆ ಶಿಕ್ಷಕರು ನಿಗದಿತ ಅವಧಿಯಲ್ಲಿ ಅಧ್ಯಯನ ಮುಗಿಸದೆ ಹೋದರೆ ವಿಶೇಷ ತರಗತಿಗಳನ್ನು ನಡೆಸಿ ಪಠ್ಯದ ವಿಷಯ ಮುಗಿಸಬೇಕು ಎಂಬ ಗುರಿ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ನಿಗ ದಿತ ಅವಧಿಯಲ್ಲಿ ವಿಷಯವನ್ನು ನೀಡಲು ಸಹಕಾರಿಯಾಗುತ್ತದೆ.

ಪಾಲಕರಿಂದ ಮೆಚ್ಚುಗೆ

ಕೊರೊನಾ ವೈರಸ್‌ ನಿಂದ ಶಾಲೆಯಿಂದ-ಅಧ್ಯಯನದಿಂದ ದೂರ ಉಳಿದಿದ್ದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರತಿ ವಾರಕ್ಕೊಮ್ಮೆ ರವಿವಾರ ಪ್ರತಿಭಾ ಸಿಂಚನ ಮಾಲಿಕೆ ಎಂಬ ಕಾರ್ಯಕ್ರಮದಡಿ ವಿಶೇಷ ತರಗತಿ ಮತ್ತು ಪ್ರತಿ ತಿಂಗಳು ಎರಡು ತರಹದ ಕಿರು ಪರೀಕ್ಷೆಗಳು ಏರ್ಪಡಿಸಿ ಮಕ್ಕಳಿಗೆ ಅಧ್ಯಯನ ಕಡೆ ಆಕರ್ಷಣೆ ಮಾಡುತ್ತಿರುವ ಉಪಪ್ರಚಾರ್ಯ ಆರ್‌.ಜಿ.ಸನ್ನಿ ಹಾಗೂ ಅವರ ಶಿಕ್ಷಕರ ಬಳಗದ ಕಾರ್ಯಕ್ಕೆ ಮಕ್ಕಳು ಹಾಗೂ ಮಕ್ಕಳ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಗುಣಮಟ್ಟ ಪ್ರಗತಿ ಸಾಧಿಸಲು ಮಕ್ಕಳಿಗೆ ವಿಶೇಷ-ವಿನೂತನ ಕಾರ್ಯಕ್ರಮ ನೀಡುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ವಿನೂತನವಾದ ಕಾರ್ಯಕ್ರಮ ಹಾಕಿಕೊಳ್ಳಲು ನಮ್ಮ ಶಾಲೆಯಲ್ಲಿನ ಎಲ್ಲ ಶಿಕ್ಷಕರು ಸಂಘಟನಾತ್ಮಕವಾಗಿ ಹಾಕಿರುವ ಶ್ರಮ ಅಪಾರ. -ಆರ್‌.ಜಿ. ಸನ್ನಿ, ಉಪಪ್ರಾಚಾರ್ಯ, ಸಂಗಮೇಶ್ವರ ಸಂಯುಕ್ತ ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ), ಅಮೀನಗಡ

ಕೊರೊನಾದಿಂದ ಶಾಲೆಯಿಂದ ದೂರವಾಗಿದ್ದ ನಮಗೆ ಕಲಿಕೆಯಲ್ಲಿ ಆಕರ್ಷಣೆ ಬರಬೇಕು ಮತ್ತು ನಮಗೆ ಉತ್ತಮವಾದ ಶಿಕ್ಷಣ ನೀಡಬೇಕು ಎಂಬ ಚಿಂತನೆಯೊಂದಿಗೆ ಉಪಪ್ರಾಚಾರ್ಯ ಆರ್‌.ಜಿ.ಸನ್ನಿ ಗುರುಗಳು ಮತ್ತು ಇತರ ಎಲ್ಲ ಶಿಕ್ಷಕರ ಬಳಗ ಪ್ರತಿಭಾ ಸಿಂಚನ ಮಾಲಿಕೆ ಎಂಬ ವಿಶೇಷ ತರಗತಿಗಳನ್ನು ಪ್ರತಿ ರವಿವಾರ ಹಮ್ಮಿಕೊಂಡಿದ್ದು ಮತ್ತು ಪ್ರತಿ ತಿಂಗಳು ಎರಡು ತರಹದ ಪರೀಕ್ಷೆ ಹಮ್ಮಿಕೊಂಡಿದ್ದಾರೆ. ಇದು ನಮಗೆ ದಿನನಿತ್ಯ ಅಧ್ಯಯನ ಮಾಡಲು ಸಹಕಾರಿಯಾಗುವುದರ ಜತೆಗೆ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭಯ ದೂರವಾಗಲು ಹಾಗೂ ಉತ್ತಮ ಅಂಕ ಪಡೆಯಲು ಸಾಕಷ್ಟು ಸಹಕಾರಿಯಾಗಿದೆ. -ಶಿವಶಂಕರ ಗಾಣಗೇರ, ಸಂಜು ಸೂಡಿ, ಶ್ವೇತಾ ರಾಠೊಡ, ಸ್ನೇಹಾ ನಿಡಗುಂದಿ, ವಿದ್ಯಾರ್ಥಿಗಳು ಸಂಗಮೇಶ್ವರ ಪ್ರೌಢಶಾಲೆ, ಅಮೀನಗಡ ಎಚ್‌.ಎಚ್‌. ಬೇಪಾರಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.